ಮಳೆಗಾಲದಲ್ಲಿ ಮನೆಗಳಿಗೆ ನುಗ್ಗುವ ಚರಂಡಿ ನೀರು: ಅಧಿಕಾರಿಗಳ ಚಳಿ ಬಿಡಿಸಿದ ಜನಪ್ರತಿನಿಧಿಗಳು…

1

ಭದ್ರಾವತಿ : ಪ್ರತಿ ಮಳೆಗಾಲದಲ್ಲಿ ನಗರದ ವಿವಿಧೆಡೆ ನೀರು ಮನೆಗಳಿಗೆ ಅಂಗಡಿಗಳಿಗೆ ಗೋಡೌನ್‌ಗಳಿಗೆ ನುಗ್ಗಿ ಲಕ್ಷಾಂತರ ರೂಗಳ ಅಪಾರ ಪ್ರಮಾಣದ ನಷ್ಟ ಉಂಟಾಗುತ್ತಿದೆ. ಇದರ ಬಗ್ಗೆ ಪ್ರತಿ ಭಾರಿ ನಿವಾಸಿಗಳು ವರ್ತಕರುಗಳು ನಗರಸಭೆಯ ಕಾರ್ಯವೈಖರಿಯ ಬಗ್ಗೆ ಪ್ರತಿಭಟನೆ ವಿರೋಧ ಮಾಡು ವುದು ಮಾಮೂಲಿಯಾಗಿದೆ. ಆದರೆ ಮೊನ್ನೆ ದಸರಾ ಹಬ್ಬದ ಹಿಂದಿನ ದಿನ ಸುಮಾರು ೨-೩ ಗಂಟೆಗಳ ಕಾಲ ಸುರಿದ ಮಳೆ ಹಳೇ ನಗರ, ಭೂತನಗುಡಿ, ಒಎಸ್‌ಎಂ ರಸ್ತೆ, ತರೀಕೆರೆ ರಸ್ತೆ, ಜನ್ನಾಪುರ, ಹುಡ್ಕೋ, ಬುಳ್ಳಾಪುರ, ನ್ಯೂಟೌನ್ ಸೇರಿದಂತೆ ಇತರ ಪ್ರದೇಶಗಳಲ್ಲಿ ಅವಾಂತರ ಸೃಷ್ಟಿಸಿದೆ.


ಇದರ ಬಗ್ಗೆ ನಗರಸಭೆಯ ಸಭಾಂಗಣದಲ್ಲಿ ಅಧ್ಯಕ್ಷ ಮಣಿ ಅಧ್ಯಕ್ಷತೆಯಲ್ಲಿ ಕರೆದಿದ್ದ ಸಭೆಯಲ್ಲಿ ಮಳೆ ನೀರಿನ ಅವಾಂತರದಿಂದ ತೊಂದರೆಗೆ ಒಳಪಟ್ಟವರು ಭಾಗವಹಿಸಿ ನಗರಸಭೆ, ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಇಂಜೀನೀಯರ್‌ಗಳ ಕಾರ್ಯ ವೈಖರಿಯ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದರೆ, ಅಧ್ಯಕ್ಷರಾದಿಯಾಗಿ ಸದಸ್ಯರುಗಳು ಸಹ ಇವರ ಆಕ್ರೋಶಕ್ಕೆ ಧ್ವನಿಗೂಡಿಸಿ ಅವರು ಗಳನ್ನು ಹಿಗ್ಗಾ ಮುಗ್ಗಾ ತರಾಟೆಗೆ ತೆಗೆದುಕೊಂಡ ಸಂಗತಿ ನಡೆಯಿತು.
ಅಧ್ಯಕ್ಷ ಮಣಿ ಈ ರೀತಿ ಚರಂಡಿ ನೀರು ರಸ್ತೆ ಮೇಲೆ ಹರಿಯಲು ಏನು ಕಾರಣ ಎಂದು ನಗರಸಭೆ ಇಂಜೀನೀಯರ್‌ಗೆ ಕೇಳಿದರೆ ಅವರು ಲೋಕೋಪಯೋಗಿ ಇಲಾಖೆ ಇಂಜೀನಿಯರ್ ರವರ ಮೇಲೆ ಬೆರಳು ತೋರಿಸುತ್ತಾರೆ. ಅವರನ್ನು ಕೇಳಿದರೆ ರಸ್ತೆ ಮಾಡಬೇಕಾದರೆ ಮೊದಲೆ ಯೋಜನೆ ರೂಪಿಸಿ ಚರಂಡಿಗಳನ್ನು ನಿರ್ಮಾಣ ಮಾಡಿರುತ್ತಾರೆ ಎಂದು ಸ್ಪಷ್ಟಿಕರಣ ನೀಡುತ್ತಾರೆ. ಆದರೆ ಮತ್ತೆ ಮಳೆ ನೀರು ಯಾಕೆ ಹೋಗುತ್ತಿಲ್ಲ ಎಂದರೆ ಅದಕ್ಕೆ ಉತ್ತರ ಇಲ್ಲ.
ಆದರೆ ಆ ಭಾಗದ ನಿವಾಸಿಗಳು ವರ್ತಕರುಗೂ ಚರಂಡಿ ಮಡಬೇಕಾದರೆ ಭವಿಷ್ಯ ಯೋಜನೆ ಯನ್ನು ರೂಪಿಸಿ ಮಾಡಬೇಕು. ಯಾವ ಭಾಗದಿಂದ ನೀರು ಬರುತ್ತದೆ ಎಷ್ಟು ದೊಡ್ಡ ಚರಂಡಿ ಮಾಡಬೇಕು. ಎಂಬಿತ್ಯಾದಿ ಸಂಗತಿ ಗಳನ್ನು ಅಂದಾಜಿಸಿ ಕಾಮಗಾರಿ ಮಾಡಬೇಕು.ಆದರೆ ಆ ರೀತಿಯಲ್ಲಿ ಮಾಡಿಲ್ಲ. ೩ ಅಡಿ ರಾಜ ಕಾಲುವೆ ಯಿಂದ ಹರಿದು ಬರುವ ನೀರು ೧.೫ ಅಡಿ ಸಣ್ಣ ಪ್ರಮಾಣದ ಚರಂಡಿ ಮೂಲಕ ಹಾದು ಹೋಗುವಂತೆ ಚರಂಡಿ ಕಾಮಗಾರಿ ಮಾಡಿzರೆ. ಇದು ಇಂಜೀನಿಯರ್‌ಗಳ ಬೌದ್ಧಿಕ ಮಟ್ಟವಾಗಿದೆ ಎಂದು ಒಕ್ಕೂರಲಿ ನಿಂದ ಸಭೆಗೆ ತಿಳಿಸಿ ಲೇವಡಿ ಮಾಡಿದರು.
ನೀರು ಸರಾಗವಾಗಿ ಹರಿದು ಹೋಗಲು ಮುಖ್ಯ ರಸ್ತೆ ಕಟ್ ಮಾಡಿ ಸಂಪರ್ಕ ಕೊಡಬೇಕು. ಆದರೆ ಆ ರೀತಿ ಮಾಡಲು ಹೋದರೆ ಈ ಮೊದಲೆ ಯಾಕೆ ಮಾಡಿಲ್ಲ ಇಂಜೀನೀಯರ್‌ಗಳು ಏನು ಮಾಡುತ್ತಿದ್ದರು ಎಂದು ಹಿರಿಯ ಅಧಿಕಾರಿಗಳು ಪ್ರಶ್ನಿಸುತ್ತಾರೆ ಎಂದು ಉತ್ತರಿಸಿದರು.
ನಗರಸಭೆ ಅಧ್ಯಕ್ಷರು ಮಾತನಾಡಿ, ಮಳೆಗಾಲದ ಒಂದು ತಿಂಗಳು ಮೊದಲೆ ಇಲಾಖೆ ಅಧಿಕಾರಿಗಳು ಇಂಜೀನಿಯರ್‌ಗಳ ಜೊತೆ ಮಾತನಾಡಲು ಸಭೆಗೆ ಕರೆದರೆ ಅವರುಗಳೆ ನಾಪತ್ತೆ, ಇನ್ನು ಸಭೆಗೆ ಬಂದವರು ಹಾರಿಕೆ ಉತ್ತರ ಕೋಡುತ್ತಾರೆ. ಯಾವ ಇಲಾಖೆ ವ್ಯಾಪ್ತಿಎಲ್ಲಿಯವರೆಗೆ ಬರುತ್ತದೆ ಎಂಬುದು ಮೊದಲು ನಿಗದಿ ಮಾಡಿ ಬೋರ್ಡ್ ಹಾಕಿ. ಅದು ಜನರಿಗೆ ಗೋತ್ತಾಗಲಿ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಬಿ.ಕೆ.ಮೋಹನ್ ಮಾತನಾಡಿ ತಾವು ಅಧ್ಯಕ್ಷ ಆದ ಸಂಧರ್ಭದಲ್ಲಿ ಎ ವಾರ್ಡ್‌ಗಳ ಚರಂಡಿಗಳ ಹೂಳನ್ನು ತೆಗೆದು ಸ್ವಚ್ಚತೆ ಮಾಡಲಾಗಿತ್ತು. ಆದರೆ ಆ ನಂತರ ಇದುವರೆಗೂ ಚರಂಡಿ ಸ್ವಚ್ಚ ಮಾಡದ ಕಾರಣ ಹೂಳು ತುಂಬಿಕೊಂಡು ಪ್ರವಾಹದ ಅವಾಂತರ ಸಷ್ಟಿಯಾಗಿದೆ. ಇದರ ಪರಿಣಾಮ ಜನರಿಂದ ಕೀಳು ಮಟ್ಟದಲ್ಲಿ ಬೈಸಿಕೊಳ್ಳಬೇಕಿದೆ ಎಂದರು.
ಸ್ಥಯಿ ಸಮಿತಿ ಅಧ್ಯಕ್ಷ ಕಾಂತರಾಜ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.