ಡಾ| ಸರ್ಜಿ ಪ್ರಚಂಡ ಗೆಲುವು; ಪ್ರತಿಸ್ಪರ್ಧಿಗಳು ಧೂಳಿಪಟ: “ಸರ್ಜಿ”ಕಲ್ ಸ್ಟ್ರೈಕ್: ಮೇಲ್ಮನೆಗೆ “ಡಿ”ಬಾಸ್…
ಡಾ. ಧನಂಜಯ(ಡಿ) ಸರ್ಜಿ ಅವರು ಸಾಮಾನ್ಯವಾಗಿ ತಮ್ಮ ಭಾಷಣದಲ್ಲಿ ೪-ಡಿ ಸೂತ್ರದ ಬಗ್ಗೆ ತಿಳಿಸುತ್ತಾರೆ.
ಡಿ-೧ ಡ್ರೀಮ್ ಬಿಗ್,
ಡಿ-೨ ಡೆಸೈಡ್ ಡೇಟ್,
ಡಿ-೩ ಡಿಕ್ಲೇರ್,
ಡಿ-೪ ಡೆಡಿಕೇಟ್.
ವ್ಯಕ್ತಿಯು ದೊಡ್ಡ ಕನಸನ್ನು ಕಾಣಬೇಕು, ಆ ಕನಸನ್ನು ನನಸಾಗಿಸಲು ದಿನವನ್ನು ನಿರ್ಧರಿಸಬೇಕು, ತಮ್ಮ ಕನಸಿನ ಬಗ್ಗೆ ಘೋಷಿಸಿಕೊಳ್ಳಬೇಕು, ಮತ್ತದಕ್ಕೆ ಮೀಸಲಾಗಬೇಕು.
ಹೀಗೆ ಕೇವಲ ಹೇಳೋದಷ್ಟೇ ಅಲ್ಲ ಇಂತಹ ಫೋರ್-ಡಿ ಸೂತ್ರವನ್ನು ತಮ್ಮ ಬದುಕಿನಲ್ಲೂ ಅಳವಡಿಸಿಕೊಂಡಿದ್ದರಿಂದಲೇ ಇವರು ರಾಜಕೀಯದಲ್ಲಿ ಮೇಲ್ಮನೆ (ವಿಧಾನ ಪರಿಷತ್) ಪ್ರವೇಶಿಸಿzರೆ.
ವೈದ್ಯಕೀಯ ಕ್ಷೇತ್ರದಲ್ಲಿ ಸರ್ಜಿ, ಡಾಕ್ಟರ್ ಆಗಿದ್ದರೂ ಸಹ ರಾಜಕೀಯದಲ್ಲಿನ್ನೂ ಇವರು ಯುಕೆಜಿ ಎಂದು ಲೇವಡಿ ಮಾಡಿದ್ದ ಹರಿ ಭಯಂಕರ ಭಾಷಣಕಾರ, ಮಾತಿನ ಮೋಡಿಗಾರ ಎಂದೇ ಹೆಸರಾಗಿರುವ ಪ್ರತಿಸ್ಪರ್ಧಿ ಸೇರಿದಂತೆ ಟೀಕಾಕಾರರಿಗೆ ವಿಧಾನ ಪರಿಷತ್ತಿನ ಚುನಾವಣಾ ಫಲಿತಾಂಶದ ಮೂಲಕ ಸರ್ಜಿಕಲ್ ಸ್ಟ್ರೆಕ್ ಮಾಡಿದ್ದಾರೆ.
ವಿಧಾನ ಪರಿಷತ್ತಿನ ನೈಋತ್ಯ ಪದವೀಧರರ ಕ್ಷೇತ್ರದ ಚುನಾವಣೆಯಲ್ಲಿ ಒಟ್ಟು ೬೬,೪೯೭ ಮತಗಳು ಚಲಾವಣೆಯಾಗಿದ್ದವು. ಇವುಗಳಲ್ಲಿ ಇವರ ಪ್ರತಿಸ್ಪರ್ಧಿಗಳಾದ ೯ ಅಭ್ಯರ್ಥಿಗಳು ಒಟ್ಟು ೨೩,೭೫೫ ಮತ, ಅಸಿಂಧುಗೊಂಡಿರುವ ೫,೧೧೫ ಮತಗಳು ಸೇರಿಸಿದರೆ ಒಟ್ಟು ೨೮,೮೭೦ ಮತಗಳಾಗುತ್ತವೆ. ಡಾ| ಧನಂಜಯ ಸರ್ಜಿ ಅವರು ಸಿಂಧುಗೊಂಡಿರುವ ಮತಗಳಲ್ಲಿ ಶೇ. ೬೦ಕ್ಕೂ ಅಧಿಕ ಅಂದರೆ ಒಟ್ಟು ೩೭,೬೨೭ ಮತ ಪಡೆದು ಪ್ರಚಂಡ ಗೆಲುವು ಸಾಧಿಸಿzರೆ. ಪ್ರತಿಸ್ಪರ್ಧಿ ಗಳು ಮತ್ತು ಅಸಿಂಧುಗೊಂಡಿರುವ ಮತಗಳನ್ನು ಒಟ್ಟುಗೂಡಿಸಿದರೂ ಸಹ ಸರ್ಜಿ ಅವರು ಪಡೆದಿರುವ ಮತಗಳನ್ನು ಸರಿಗಟ್ಟಲು ಸಾಧ್ಯವಾಗಿಲ್ಲ. ಅಂತಹ ಅದ್ಭುತ ಹಾಗೂ ಅಮೋಘ ಅಂತರದಲ್ಲಿ ಅವರು ಗೆಲುವು ಸಾಧಿಸಿzರೆ.
ಕೇವಲ ಕಳೆದೆರಡು ವರ್ಷಗಳ ಹಿಂದಷ್ಟೇ ರಾಜಕೀಯ ಪ್ರವೇಶಿಸಲು ಸಿದ್ಧತೆ ಮಾಡಿಕೊಂಡಿದ್ದ ಡಾ| ಸರ್ಜಿ ಅವರು ಕಳೆದ ವಿಧಾನಸಭಾ ಚುನಾವಣೆಯಲ್ಲಿ ಶಿವಮೊಗ್ಗ ಕ್ಷೇತ್ರದಿಂದ ಸ್ಪರ್ಧಿಸಲು ಮುಂದಾಗಿದ್ದರು. ಬಿಜೆಪಿ ಅಥವಾ ಕಾಂಗ್ರೆಸ್ನಿಂದ ಸ್ಪರ್ಧಿಸಬಹುದು, ಈ ಪಕ್ಷಗಳ ಟಿಕೆಟ್ ಸಿಗದಿದ್ದರೆ ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕಿಳಿಯಬಹುದು ಎಂಬ ಮಾತುಗಳೂ ರಾಜಕೀಯ ವಲಯದಲ್ಲಿ ಕೇಳಿ ಬಂದಿದ್ದವು.
ಆದರೆ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸೇರಿದಂತೆ ಹಿರಿಯ, ಪ್ರಮುಖ ರಾಜಕಾರಣಿಗಳು, ಸಂಘ ಪರಿವಾರದ ಮುಖಂಡರ ಸಲಹೆ ಮೇರೆಗೆ ವಿಧಾನಸಭಾ ಚುನಾವಣೆಯಲ್ಲಿ ಕಣಕ್ಕಿಳಿಯಲಿಲ್ಲ. ಬದಲಿಗೆ ೨೦೨೨ರ ಡಿಸೆಂಬರ್ ೪ರಂದು ಜಿ ಬಿಜೆಪಿ ಕಾರ್ಯಾಲಯದಲ್ಲಿ ಪ್ರಾಥಮಿಕ ಸದಸ್ಯತ್ವ ಪಡೆದರಲ್ಲದೆ ಜಿ ಉಪಾಧ್ಯಕ್ಷರಾಗಿ ನೇಮಕಗೊಂಡರು.
ಸಾಧು ಲಿಂಗಾಯತ ಸಮಾಜಕ್ಕೆ ಸೇರಿದ್ದರೂ ಕೂಡ ಎ ಧರ್ಮ, ಜತಿ, ಮತದವರ ವಿಶ್ವಾಸ, ಸ್ನೇಹಗಳಿಸಿರುವ ಡಾ|ಸರ್ಜಿ ಅವರು ಜತ್ಯಾತೀತ ನಾಯಕ ಎಂದೆನಿಸಿಕೊಂಡಿzರೆ.
ಇತ್ತೀಚೆಗೆ ನಡೆದ ಲೋಕಸಭೆ ಹಾಗೂ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಗಳ ಪರವಾಗಿ ಇವರು ನಡೆಸಿದ ಪ್ರಚಾರ ವೈಖರಿ, ಪಕ್ಷ ಸಂಘಟನೆ, ನಾಯಕತ್ವ ಗುಣ, ಕಾರ್ಯಕರ್ತರೊಂದಿಗೆ ಸರಳವಾಗಿ ಬೆರೆಯುವ ಸ್ವಭಾವ ಮತ್ತಿತರೆ ಅಂಶಗಳ ಮೂಲಕ ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರ ಮನ ಸೆಳೆದರು.
ವಿಧಾನ ಪರಿಷತ್ತಿನ ನೈಋತ್ಯ ಪದವೀಧರರ ಕ್ಷೇತ್ರದ ಚುನಾವಣೆಯಲ್ಲಿ ಬಿಜೆಪಿ ಡಾ|ಧನಂಜಯ ಸರ್ಜಿ ಅವರನ್ನು ಅಭ್ಯರ್ಥಿಯನ್ನಾಗಿ ಘೋಷಿಸಿತು. ರಾಜ್ಯಸಭೆ, ಲೋಕಸಭೆ, ವಿಧಾನ ಪರಿಷತ್ ಹಾಗೂ ವಿಧಾನಸಭೆಯನ್ನು ಪ್ರವೇಶಿಸಿರುವ ದೇಶದ ಹಿರಿಯ, ಅನುಭವಿ ಹಾಗೂ ಅಪರೂಪದ ರಾಜಕಾರಣಿಯಾಗಿರುವ ಆಯನೂರು ಮಂಜುನಾಥ್ ಕಾಂಗ್ರೆಸ್ನಿಂದ ಇವರ ವಿರುದ್ಧ ಕಣಕ್ಕಿಳಿದರು. ಇವರ ಜೊತೆಗೆ ಇನ್ನೂ ೮ ಅಭ್ಯರ್ಥಿಗಳು ಕಣದಲ್ಲಿದ್ದರು.
ಚುನಾವಣೆಯಲ್ಲಿ ಭಾರೀ ಪೈಪೋಟಿ ಏರ್ಪಡಬಹುದು ಎಂಬ ನಿರೀಕ್ಷೆ ಇತ್ತು. ಆದರೆ ಇಂತಹ ಪೈಪೋಟಿ ಕೇವಲ ಪ್ರಚಾರದಲ್ಲಿ ಮಾತ್ರ ಕಂಡು ಬಂತೇ ಹೊರತು ಮತ ಎಣಿಕೆಯ ವಿವಿಧ ಸುತ್ತುಗಳ ಸಂದರ್ಭದಲ್ಲಿ ಪ್ರತಿಸ್ಪರ್ಧಿಗಳು ಡಾ| ಸರ್ಜಿ ಅವರು ಗಳಿಸಿದ ಮತಗಳ ಸನಿಹಕ್ಕೂ ಬರಲು ಸಾಧ್ಯವಾಗಲಿಲ್ಲ. ಅಂತಿಮ ಸುತ್ತಿನ ಮತ ಎಣಿಕೆ ಪೂರ್ಣಗೊಂಡಾಗ ರಾಜಕೀಯಕ್ಕೆ ಹೊಸ ಮುಖದವರು ಎಂದೆನಿಸಿಕೊಳ್ಳುತ್ತಿದ್ದ ಡಾ|ಸರ್ಜಿ ಅವರು ಅಭೂರ್ತಪೂರ್ವ ಜಯಗಳಿಸಿದರು.
ಸರ್ಜಿಕಲ್ ಸ್ಟ್ರೈಕ್:
೨೯ ಸೆಪ್ಟೆಂಬರ್ ೨೦೧೬ ಇಡೀ ಜಗತ್ತು ಅಚ್ಚರಿಯಿಂದ ಭಾರತದ ಕಡೆಗೆ ನೋಡಿದ ದಿನವಿದು. ಭಾರತೀಯ ಸೇನೆಯು ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿನ ಭಯೋತ್ಪಾದನಾ ಶಿಬಿರಗಳ ಮೇಲೆ ಅತಿ ದೊಡ್ಡ ಸರ್ಜಿಕಲ್ ಸ್ಟ್ರೈಕ್ (ನಿಖರ ದಾಳಿ) ನಡೆಸಿ ಗಡಿ ನಿಯಂತ್ರಣ ರೇಖೆ (ಎಲ್ಒಸಿ) ಉದ್ದಕ್ಕೂ ಇದ್ದ ಉಗ್ರರ ನೆಲೆಗಳನ್ನು ಛಿದ್ರಗೊಳಿಸಿತ್ತು.
ಅಂತೆಯೇ ಪ್ರಧಾನಿ ಮೋದಿಯವರ ಪ್ರಭಾವ, ವ್ಯಕ್ತಿತ್ವ ಹಾಗೂ ಜನಪರ ಚಿಂತನೆಯಿಂದ ಸಾಮಾಜಿಕ ಸೇವೆ ಮಾಡಲು ರಾಜಕೀಯ ಪ್ರವೇಶಿಸುವುದಾಗಿ ಘೋಷಿಸಿದ್ದ ಡಾ| ಎಸ್. ಆರ್. ಧನಂಜಯ ಸರ್ಜಿ ಅವರು ಎಲೆಕ್ಷನ್ ಎಂಬ ಕುರುಕ್ಷೇತ್ರದಲ್ಲಿ ಸರ್ಜಿಕಲ್ ಸ್ಟ್ರೈಕ್ ನಡೆಸಿ ಪ್ರಬುದ್ಧ ರಾಜಕಾರಣಿಗಳಿಗೆ ಸರಿಸಾಟಿಯಾಗಿ ಹೊರಹೊಮ್ಮಿದ್ದು, ಹೊಸ ಭರವಸೆಯ ಬೆಳಕು ಮೂಡಿಸಿzರೆ.
ಜನಪರ- ಜೀವಪರ
ಎಂಬ ಧ್ಯೇಯ:
ಮಕ್ಕಳಿಗೆ ಚಿಕಿತ್ಸೆ ನೀಡಬೇಕೆಂದರೆ ಕೇವಲ ವೈದ್ಯ ಶಿಕ್ಷಣದ eನವಷ್ಟೇ ಸಾಲದು, ಮಕ್ಕಳ ಮನಸ್ಸನ್ನು ಅರ್ಥೈಸಿಕೊಂಡು ಅವರ ಭಾಷೆಗೆ ಹೊಂದಿಕೊಳ್ಳಬೇಕು. ಮಕ್ಕಳ ನೋವನ್ನು ತಾಯಿ ಮಾತ್ರ ಸಮರ್ಥವಾಗಿ ಅರ್ಥ ಮಾಡಿಕೊಳ್ಳಲು ಸಾಧ್ಯ. ಮಗುವನ್ನು ಮಾತೃಹದಯಿಯಾಗಿ ಅರ್ಥೈಸಿಕೊಂಡಾಗ ಮಾತ್ರ ಯಶಸ್ವಿಯಾಗಿ ಚಿಕಿತ್ಸೆ ನೀಡಲು ಸಾಧ್ಯ. ಇಂತಹ ಪ್ರಖ್ಯಾತ ಹಾಗೂ ಪ್ರತಿಭಾನ್ವಿತ ಮಕ್ಕಳ ತಜ್ಞ ಡಾ| ಧನಂಜಯ ಸರ್ಜಿ. ಜನಪರ- ಜೀವಪರ ಎಂಬ ಧ್ಯೇಯದೊಂದಿಗೆ ಕಾರ್ಯ ನಿರ್ವಹಿಸುತ್ತಿzರೆ.
ಸರ್ಜಿ ಕೌಟುಂಬಿಕ ಹಿನ್ನೆಲೆ:
ಸರ್ಜಿ ಕುಟುಂಬದವರಾದ ಧನಂಜಯ ಮೂಲತಃ ಅವಿಭಜಿತ ಶಿವಮೊಗ್ಗ ಜಿಯ, ಪ್ರಸ್ತುತ ದಾವಣಗೆರೆ ಜಿಯ ಚನ್ನಗಿರಿ ತಾಲ್ಲೂಕಿನ ಗೊಪ್ಪೇನಹಳ್ಳಿಯವರು. ತಂದೆ ಸರ್ಜಿ ರುದ್ರಪ್ಪ, ತಾಯಿ ರೇಣುಕಾ.
ದಾವಣಗೆರೆಯಲ್ಲಿ ವೈದ್ಯಕೀಯ ಶಿಕ್ಷಣ, ಮಣಿಪಾಲ್ನಲ್ಲಿ ಎಂ.ಡಿ. ಪದವಿ. ನಂತರ ಬೆಂಗಳೂರು, ಶಿವಮೊಗ್ಗದ ವಾತ್ಸಲ್ಯ ಆಸ್ಪತ್ರೆಯಲ್ಲಿ ಕೆಲಸ. ತದನಂತರ ೨೦೦೭ರಲ್ಲಿ ಶಿವಮೊಗ್ಗದ ಸವಳಂಗ ರಸ್ತೆಯಲ್ಲಿ ಸರ್ಜಿ ಚೈಲ್ಡ್ ಕೇರ್ ಸೆಂಟರ್, ೨೦೧೪ರಲ್ಲಿ ಸರ್ಜಿ ಆಸ್ಪತ್ರೆ ಆರಂಭ.
ಕಳೆದ ೮ ವರ್ಷಗಳಲ್ಲಿ ಸರ್ಜಿ ಮದರ್ ಅಂಡ್ ಕೇರ್ ಸೆಂಟರ್, ಸರ್ಜಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ, ಸರ್ಜಿ ಪುಷ್ಯ, ಸರ್ಜಿ ಅಮೃತ ನಾಡಿ, ಸರ್ಜಿ ಇನ್ಸ್ಟಿಟ್ಯೂಟ್ ಹಾಗೂ ಸರ್ಜಿ ಬಂಜೆತನ ನಿವಾರಣಾ ಕೇಂದ್ರ ಹೀಗೆ ೬ ಆಸ್ಪತ್ರೆಗಳ ಸಮೂಹ ಪ್ರಾರಂಭ. ಶಿವಮೊಗ್ಗದಲ್ಲಿ ಮೊಟ್ಟ ಮೊದಲ ಬಾರಿಗೆ ನವಜತಾ ಶಿಶುಗಳಿಗೆ ಐಸಿಯು ಘಟಕ ಸ್ಥಾಪಿಸಿದ ಶ್ರೇಯಸ್ಸು ಇವರದ್ದು.
ನೆರೆ- ಕೋವಿಡ್ ಸಂದರ್ಭದಲ್ಲಿ ನೆರವಿನ ಹಸ್ತ:
೨೦೧೯ರಲ್ಲಿ ಶಿವಮೊಗ್ಗ ನಗರದಲ್ಲಿ ತುಂಗಾ ನದಿ ಪ್ರವಾಹದಿಂದಾಗಿ ನೆರೆ ಹಾವಳಿ ಉಂಟಾದಾಗ ನೆರೆಪೀಡಿತ ಪ್ರದೇಶಗಳಲ್ಲಿ ನೀರಿನ ಉಬ್ಬರ- ಅಬ್ಬರವನ್ನು ಲೆಕ್ಕಿಸದೆ ಜೀವದ ಹಂಗು ತೊರೆದು ೧,೨೦೦ ಮಂದಿಗೆ ಅಗತ್ಯವಿರುವ ಟೈಫಾಯಿಡ್ ಲಸಿಕೆ, ಉಚಿತ ಚಿಕಿತ್ಸೆಯೊಂದಿಗೆ ಔಷಧಿಗಳನ್ನು ಸಹ ನೀಡಿದರು.
ಕೋವಿಡ್ ಪೀಡಿತರಿಗೆ ಚಿಕಿತ್ಸೆ:
೨೦೧೯ರಲ್ಲಿ ಮಹಾಮಾರಿ ಕರೋನಾ ಬಂದಂತಹ ಸಂದರ್ಭ ದಲ್ಲಿ ಜಿ ಸಲಹಾ ಸಮಿತಿಯ ಸದಸ್ಯರಾಗಿ ಕಾರ್ಯನಿರ್ವಹಿಸಿzರೆ. ನಗರದ ೨ ಕಡೆಗಳಲ್ಲಿ ಸುಸಜ್ಜಿತವಾದ ಕೋವಿಡ್ ಕೇರ್ ಸೆಂಟರ್ಗಳನ್ನು ಸ್ಥಾಪಿಸಿ ಕಾಯಿಲೆ ಪೀಡಿತರಿಗೆ ಚಿಕಿತ್ಸೆ ನೀಡಿದರು. ಕೋವಿಡ್ ಪಾಸಿಟಿವ್ ಗರ್ಭಿಣಿಯರಿಗೆ ಸುಸೂತ್ರವಾಗಿ ಹೆರಿಗೆ ಮಾಡಿಸಿದ ಶ್ರೇಯಸ್ಸು ಇವರದ್ದು.
ಅಗ್ನಿ ದುರಂತ
ಮಕ್ಕಳ ಜೀವ ರಕ್ಷಣೆ:
೨೦೨೦ರಲ್ಲಿ ಶಿವಮೊಗ್ಗದ ಸರ್ಕಾರಿ ಮೆಗ್ಗಾನ್ ಆಸ್ಪತ್ರೆಯ ಐ.ಸಿ.ಯುನಲ್ಲಿ ಸಂಭವಿಸಿದ ಅಗ್ನಿ ದುರಂತದಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ೫೦ಕ್ಕೂ ಹೆಚ್ಚು ಮಕ್ಕಳನ್ನು ಜಿ ಆಡಳಿತ ಜಿಧಿಕಾರಿಗಳ ಸಮ್ಮುಖದಲ್ಲಿ ಸರ್ಜಿ ಆಸ್ಪತ್ರೆಗೆ ತುರ್ತು ಚಿಕಿತ್ಸೆಗೆಂದು ವರ್ಗಾಯಿಸಿತು. ಆ ಎ ಮಕ್ಕಳಿಗೆ ಚಿಕಿತ್ಸೆ ನೀಡಿ ಜೀವ ಸಂರಕ್ಷಿಸಿದರು.
ಡಾ| ಧನಂಜಯ ಸರ್ಜಿ ನಿರಂತರವಾಗಿ ಮಕ್ಕಳಲ್ಲಿನ ಅಪೌಷ್ಠಿಕತೆ, ರಕ್ತದಾನ, ನೇತ್ರದಾನ, ಉಚಿತ ಆರೋಗ್ಯ ತಪಾಸಣಾ ಶಿಬಿರ ನಡೆಸುತ್ತಿzರೆ. ಸ್ವತಃ ಸರ್ಜಿ ಅವರೇ ೬೨ ಬಾರಿ ರಕ್ತದಾನ ಮಾಡಿ ರಕ್ತದಾನಕ್ಕೆ ಪ್ರೇರೇಪಣೆ ನೀಡುತ್ತಿzರೆ.
ಇವರ ಸಾಮಾಜಿಕ ಕಳಕಳಿ, ವೈದ್ಯಕೀಯ ಕ್ಷೇತ್ರದಲ್ಲಿನ ಅತ್ಯುತ್ತಮ ಸೇವೆಯನ್ನು ಪರಿಗಣಿಸಿ ವಿವಿಧ ಸಂಘ-ಸಂಸ್ಥೆಗಳು, ನಗರಸಭೆ, ಖಾಸಗಿ ಶಿಕ್ಷಣ ಸಂಸ್ಥೆಗಳು ಸನ್ಮಾನಿಸಿ ಗೌರವಿಸಿವೆ. ೨೦೧೯ರಲ್ಲಿ ಆಸ್ಪತ್ರೆಯ ಅತ್ಯುತ್ತಮ ಸೇವೆಯನ್ನು ಗಮನಿಸಿ ನ್ಯಾಷನಲ್ ಹೆಲ್ತ್ಕೇರ್ ಎಕ್ಸೆಲೆನ್ಸ್ ಪ್ರಶಸ್ತಿಯಾದ ಪ್ರಾಕ್ಸಿಸ್ ಮೀಡಿಯಾ ಪ್ರಶಸ್ತಿಯನ್ನು ಪಡೆದ ಹೆಗ್ಗಳಿಕೆ ಇವರzಗಿದೆ.
ಸಿಎನ್ಎನ್, ನ್ಯೂಸ್ ೧೮ ಟಿವಿ ಚಾನಲ್ ರಾಜ್ಯದ ಬೆಸ್ಟ್ ಮದರ್ ಅಂಡ್ ಚೈಲ್ಡ್ ಕೇರ್ ವಿಭಾಗದಲ್ಲಿ ಗಣನೀಯ ಸೇವೆಯನ್ನು ಗುರುತಿಸಿ ಅತ್ಯುತ್ತಮ ಹೆಲ್ತ್ ಕೇರ್ ಅವಾರ್ಡ್- ೨೦೨೨ ಅನ್ನು ಕಳೆದ ಜೂನ್ ಮಾಸಾಂತ್ಯದಲ್ಲಿ ನೀಡಿ ಪುರಸ್ಕರಿಸಿದೆ. ವಿಜಯ ಕರ್ನಾಟಕ ಪತ್ರಿಕೆಯು ಆಚೀವರ್ಸ್ ಆಫ್ ಕರ್ನಾಟಕ ಪ್ರಶಸ್ತಿ ನೀಡಿದೆ.
ಸರ್ಜಿ ಗ್ರೂಪ್ ಆಫ್ ಹಾಸ್ಪಿಟಲ್ಸ್ನ ಛೇರ್ಮನ್ ಆಗಿರುವ ಡಾ|| ಧನಂಜಯ ಸರ್ಜಿ ಕಠಿಣ ಪರಿಶ್ರಮ, ರೋಗಿಗಳ ಮೇಲಿನ ಕಾಳಜಿ, ಸರಳತೆ, ಸೌಜನ್ಯತೆ, ತ್ಯಾಗ, ಸಮರ್ಪಣಾ ಮನೋಭಾವದೊಂದಿಗೆ ಸಾಮಾಜಿಕ ಸೇವೆಯ ಸಾಕಾರ ಮೂರ್ತಿಯಾಗಿzರೆ.
ಇವರಿಗೀಗ ಜನಪ್ರತಿನಿಧಿಯಾಗುವ ಅವಕಾಶ ದೊರೆತಿದೆ. ವೈದ್ಯಕೀಯ, ಸಾಮಾಜಿಕ ಸೇವೆ, ಕೃಷಿ, ಇತಿಹಾಸ ಅಧ್ಯಯನದ ಹವ್ಯಾಸ… ಹೀಗೆ ಬಹುಮುಖಿಯಾಗಿರುವ ಡಾ|| ಧನಂಜಯ್ ಸರ್ಜಿ ಅವರು ಮಾದರಿ ರಾಜಕಾರಣಿಯಾಗಿ ಪದವೀಧರರು ಹಾಗೂ ಜನಸಾಮಾನ್ಯರ ಸಮಸ್ಯೆಗಳಿಗೆ ಸ್ಪಂದಿಸಲಿ ಎಂಬುವುದೇ ಆಶಯವಾಗಿದೆ.