ದಕ್ಷಿಣ ಭಾರತದ ೧೦ ವೈದ್ಯರುಗಳಲ್ಲಿ ಘಂಟ್ಯಾಪುರದ ಡಾ| ಜಿ.ಎಂ.ಅರವಿಂದ್ ಅತ್ಯುತ್ತಮ ವೈದ್ಯರಾಗಿ ಆಯ್ಕೆ

best-doctor-S1p1

ಹೊನ್ನಾಳಿ: ತಾಲ್ಲೂಕಿನ ಘಂಟ್ಯಾಪುರ ಗ್ರಾಮದ ತುಂಗಾಭದ್ರಾ ಫಾರಂನ ನಿವಾಸಿ ನಿವೃತ್ತ ಸಹಾಯಕ ಕೃಷಿ ನಿರ್ದೇಶಕ ಜಿ. ಮಹೇಶ್ವರಪ್ಪ ಮತ್ತು ಮೀನಾಕ್ಷಮ್ಮ ಇವರ ಪುತ್ರ ಡಾ. ಜಿ.ಎಂ. ಅರವಿಂದ್ ಅತ್ಯುತ್ತಮ ವೈದ್ಯರೆಂಬ ಹೆಗ್ಗಳಿಕೆಗೆ ಪಾತ್ರರಾಗಿ ಹೊನ್ನಾಳಿ ತಾಲ್ಲೂಕಿಗೆ ಕೀರ್ತಿ ತಂದಿzರೆ.
ಪ್ರತಿಷ್ಠಿತ ನೆಬ್ಕಾರ್ ಮೀಡಿಯ ದವರು ನಡೆಸಿದ ಸಮೀಕ್ಷೆಯಲ್ಲಿ ದಕ್ಷಿಣ ಭಾರತದ ೧೦ ವೈದ್ಯರುಗಳಲ್ಲಿ ಡಾ| ಜಿ.ಎಂ.ಅರವಿಂದ್ ಇವರು ಅತ್ಯುತ್ತಮ ವೈದ್ಯರಾಗಿ ಹೊರ ಹೊಮ್ಮಿzರೆ. ಇದು ಪ್ರತಿಷ್ಠಿತ ೨೦೨೩ರ ಔಟ್‌ಲುಕ್ ವಾರಪತ್ರಿಕೆಯಲ್ಲಿ ಪ್ರಕಟವಾಗಿದೆ.
ಇವರ ಆರೋಗ್ಯ ಕ್ಷೇತ್ರದಲ್ಲಿನ ಅತ್ಯುತ್ತಮ ಸೇವೆಗೆ ಇವರಿಗೆ ಅತ್ಯುತ್ತಮ ವೈದ್ಯ ಎಂಬ ಪ್ರಶಸ್ತಿಯೂ ಲಭಿಸಿದೆ. ಇವರಿಗೆ ೨೦೨೨ರ ಜುಲೈ ತಿಂಗಳಲ್ಲಿ ಇಂಡಿಯಾ ಟುಡೇ ವಾರ ಪತ್ರಿಕೆ ಯವರೂ ನಡೆಸಿದ ಸಮೀಕ್ಷೆ ಯಲ್ಲಿಯೂ ಸಹ ಇವರನ್ನು ಅತ್ಯುತ್ತಮ ವೈದ್ಯರೆಂದು ಘೋಷಿಸಲಾಗಿತ್ತು.
ಡಾ| ಜಿ.ಎಂ.ಅರವಿಂದ್ ಅವರು ಪ್ರಸ್ತುತ ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಯ ಮೆಡಿಷನ್ ವಿಭಾಗದಲ್ಲಿ ಕಳೆದ ೧೫ ವರ್ಷ ಗಳಿಂದ ತಮ್ಮ ಸೇವೆಯನ್ನು ಸಲ್ಲಿಸುತ್ತಿzರೆ. ಇವರು ಪ್ರಾಥಮಿಕ ಶಾಲೆಯಿಂದ ಪಿಯುಸಿವರೆಗೆ ಶಿವಮೊಗ್ಗದಲ್ಲಿ ತಮ್ಮ ವಿದ್ಯಾಭ್ಯಾಸ ವನ್ನು ಮುಗಿಸಿ ನಂತರ ಮೈಸೂರಿನ ಜೆ.ಎಸ್.ಎಸ್. ಕಾಲೇಜಿನಲ್ಲಿ ಎಂ.ಬಿ.ಬಿ.ಎಸ್. ಮುಗಿಸಿ ನಂತರ ದಾವಣಗೆರೆಯ ಜೆ.ಎಂ.ಎಂ. ಮೆಡಿಕಲ್ ಕಾಲೇಜಿನಲ್ಲಿ ಎಂ.ಡಿ. ಪೂರ್ಣಗೊಳಿಸಿದಾರೆ.