ನೈರುತ್ಯ ಪದವೀಧರ ಕ್ಷೇತ್ರಕ್ಕೆ ಬಿಜೆಪಿ ಅಭ್ಯರ್ಥಿಯಾಗಿ ಡಾ| ಸರ್ಚಿ…
ಶಿವಮೊಗ್ಗ: ಕೇಂದ್ರಿಯ ಚುನಾವಣಾ ಸಮಿತಿಯು ನೈಋತ್ಯ ಪದವೀಧರ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯನ್ನಾಗಿ ಶಿವಮೊಗ್ಗದ ಹೆಸರಾಂತ ಮಕ್ಕಳ ತಜ್ಞ ಡಾ| ಧನಂಜಯ ಸರ್ಜಿ ಅವರ ಹೆಸರನ್ನು ಘೋಷಿಸಿದ ಹಿನ್ನೆಲೆಯಲ್ಲಿ ಡಾ| ಸರ್ಜಿ ದಂಪತಿಗಳು ಸಂಸದ ಬಿ.ವೈ.ರಾಘವೇಂದ್ರ ಅವರ ವಿನೋಬನಗರ ನಿವಾಸಕ್ಕೆ ತೆರಳಿ ಸಂತಸ ಹಂಚಿಕೊಂಡರು. ಈ ಸಂದರ್ಭದಲ್ಲಿ ಬಿ.ವೈ.ರಾಘವೇಂದ್ರ ಅವರು ಸಿಹಿ ತಿನ್ನಿಸಿ ಶುಭಾಶಯ ಕೋರಿದರು. ಪಕ್ಷದ ಯುವ ಮುಖಂಡ ಮಂಗೋಟೆ ರುದ್ರೇಶ್, ವಿರೂಪಾಕ್ಷಪ್ಪ, ಬಾಳೆಕಾಯಿ ಮೋಹನ್, ತಮ್ಮಡಿಹಳ್ಳಿ ನಾಗರಾಜ್, ಡಿ.ಎಂ. ಶಂಕರಪ್ಪ, ಅಶೋಕ್ ಮತ್ತಿತರರು ಉಪಸ್ಥಿತರಿದ್ದರು.