ಡಾ. ಅಂಬೇಡ್ಕರ್ ಆದರ್ಶ ಪಾಲನೆ ಇಂದಿನ ಅಗತ್ಯ…
ಚನ್ನರಾಯಪಟ್ಟಣ: ಶ್ರೀ ವಿವೇಕಾನಂದ ಅಂತರಾಷ್ಟ್ರೀಯ ಶಾಲೆಯಲ್ಲಿ ಸಂವಿಧಾನ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.
ಈ ಕಾರ್ಯಕ್ರಮದಲ್ಲಿ ಶ್ರೀ ವಿವೇಕಾನಂದ ಅಂತರಾಷ್ಟ್ರೀಯ ಶಾಲೆಯ ಇತಿಹಾಸ ಶಿಕ್ಷಕರಾದ ಶ್ರೀ ಬಿ ಕೆ ಮಂಜುನಾಥ್ ಅವರು ಮಾತನಾಡಿ ನಮ್ಮ ದೇಶಕ್ಕೆ ಶ್ರೇಷ್ಠವಾದ ಸಂವಿಧಾನವನ್ನು ನೀಡಿದ ಡಾ.ಬಿ ಆರ್ ಅಂಬೇಡ್ಕರ್ ಅವರನ್ನು ಪ್ರತಿ ಒಬ್ಬರು ಸ್ಮರಿಸಿಕೊಂಡು ಅವರು ಹಾಕಿಕೊಟ್ಟ ತತ್ವ ಸಿದ್ಧಾಂತಗಳ ಆದರ್ಶಗಳನ್ನು ಮೈಗೂಡಿಸಿಕೊಂಡು ಸಾಗಬೇಕು ಎಂದು ತಿಳಿಸಿದರು. ರಾಷ್ಟ್ರದ ಗುರುತನ್ನು ರೂಪಿಸುವಲ್ಲಿ ಈ ದಿನದ ಮಹತ್ವವನ್ನು ಎತ್ತಿ ತೋರಿಸಿದರು.
೧೦ ನೇ ತರಗತಿಯ ವಿದ್ಯಾರ್ಥಿನಿ ಕುಮಾರಿ ಹೇಮಾ ಅವರು ಸಂವಿಧಾನದ ಪ್ರತಿeಯನ್ನು ನೇತತ್ವ ವಹಿಸಿದ್ದು, ಎ ವಿದ್ಯಾರ್ಥಿಗಳಲ್ಲಿ ಏಕತೆ, ದೇಶಭಕ್ತಿ ಮತ್ತು ಜವಾಬ್ದಾರಿಯ ಮನೋಭಾವವನ್ನು ಬೆಳೆಸಿದ ವಿಶೇಷ ಕ್ಷಣವಾಗಿದೆ.
ಇಂತಹ ಆಚರಣೆಗಳು ನಮ್ಮ ಸಂವಿಧಾನದಲ್ಲಿ ಪ್ರತಿಪಾದಿಸಿರುವ ಮಲ್ಯಗಳು ಮತ್ತು ತತ್ವಗಳು ನಮಗೆ ನಮ್ಮ ಜವಾಬ್ದಾರಿಗಳನ್ನು ನೆನಪಿಸುತ್ತವೆ, ನಮ್ಮ ರಾಷ್ಟ್ರದ ಪ್ರಜಪ್ರಭುತ್ವದ ಆದರ್ಶಗಳಿಗೆ ನಾವು ಬದ್ಧತೆಯಿಂದ ಸಾಗಬೇಕು ಎಂದು ತಿಳಿಸಿದರು. ಇದೇ ಸಂದರ್ಭದಲ್ಲಿ ಸಂಸ್ಥೆಯ ಸಂಯೋಜಕರಾದ ಮಂಜುನಾಥ್, ಶಿಕ್ಷಕರಾದ ಚಂದನ, ಕಾವ್ಯ, ಸೇರಿದಂತೆ ಇತರರು ಹಾಜರಿದ್ದರು.