m2

ಶಿವಮೆಗ್ಗ : ಕಾಯಿಲೆಗಳ ಪ್ರಮಾಣ ಕಡಿಮೆಯಾಗಿದೆ ಎಂದು ನಿರ್ಲಕ್ಷ್ಯ ಬೇಡ ಜಗತರಾಗಿ ಇರಬೇಕು ಎಂದು ಜಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ನಟರಾಜ್ ಅವರು ತಿಳಿಸಿದರು.
ಅವರು ಇಂದು ಆಚಾರ್ಯ ತುಳಸಿ ರಾಷ್ಟ್ರೀಯ ವಾಣಿಜ್ಯ ಸಂಜೆ ಕಾಲೇಜಿನಲ್ಲಿ ಜಿಡಳಿತ, ಜಿ ಪಂಚಾಯತ, ಜಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ರಾಷ್ಟ್ರೀಯ ರೋಗಾವಾಹಕ ಆಶ್ರಿತ ರೋಗಗಳ ನಿಯಂತ್ರಣ ಕಾರ್ಯಕ್ರಮದ ವತಿಯಿಂದ ಆಯೋಜಿಸಿದ ವಿಶ್ವ ಮಲೇರಿಯಾ ದಿನಚರಣೆ ಉದ್ಘಾಟಿಸಿ ಮಾತನಾಡಿದರು.


ಕಾಯಿಲೆಗಳನ್ನು ಇಂದಿನ ಜನಾಂಗ ಸಾಕಷ್ಟು ನಿರ್ಲಕ್ಷಿಸುತ್ತಿzರೆ ಮೊಬೈಲ್ ಮೂಲಕ ಪ್ರತಿಯೊ ಂದನ್ನು ಕ್ಷಣದಲ್ಲಿ ತಿಳಿದುಕೊಳ್ಳುವ ಸೌಲಭ್ಯ ಇರುವುದರಿಂದ ಕಾಯಿಲೆ ಗಳ ಬಗ್ಗೆ ಭಯವಿಲ್ಲದಂತಾಗಿದೆ. ಮಲೇರಿಯಾ ಕಾಯಿಲೆ ಈಗ ಕಡಿಮೆಯಾಗಿದೆ ಎಂದು ನಿರ್ಲಕ್ಷ್ಯ ಮಾಡಬಾರದು ಈ ಕಾರ್ಯಕ್ರಮ ಗಳ ಮೂಲಕ ಮಾಹಿತಿ ಪಡೆದು ವಿದ್ಯಾರ್ಥಿಗಳು ತಮ್ಮ ಮನೆ ಮತ್ತು ಸುತ್ತಮುತ್ತಲಿನ ಜನರಿಗೆ ಈ ಕಾಯಿಲೆ ಕುರಿತು ಅರಿವು ಮೂಡಿಸಿ ಕಾಯಿಲೆಯನ್ನು ತಡೆಗಟ್ಟಲು ಮುಂದಾಗಬೇಕಾಗಿದೆ ಎಂದರು.
ಜಿ ರೋಗಾವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ ಡಾ.ಗುಡದಪ್ಪ ಕಸಬಿ ಮಾತನಾಡಿ ಮಲೇರಿಯಾ ಕಾಯಿಲೆ ಪುರಾತನ ಕಾಲದಿಂದಲೂ ಎಡೆಬಿಡದೇ ಕಾಡಿಸುತ್ತಿದೆ ಇಂದಿಗೂ ಪ್ರತಿ ವರ್ಷ ಮಲೇರಿಯಾದಿಂದ ೨೦ ಸಾವಿರಕ್ಕೂ ಅಧಿಕ ಜನರು ಸಾವನ್ನಪ್ಪುತ್ತಿzರೆ. ಹೆಣ್ಣು ಸೊಳ್ಳೆ ಕಚ್ಚುವುದರಿಂದ ಮಲೇರಿಯಾ ಕಾಯಿಲೆ ಬರುತ್ತದೆ ನಮ್ಮ ಸುತ್ತಮುತ್ತಲಿನ ಪರಿಸರದಲ್ಲಿ ಸೊಳ್ಳೆಗಳು ಸುಳಿಯದಂತೆ ಎಚ್ಚರ ವಹಿಸಬೇಕು ೨೦೦೫ ರಾಷ್ಟ್ರೀಯ ಕೀಟಜನ್ಯ ನಿಯಂತ್ರಣ ಕಾರ್ಯ ಕ್ರಮದ ಮೂಲಕ ಮಾಹಿತಿಯನ್ನು ಪಡೆದುಕೊಳ್ಳಬಹುದು ಎಂದರು.
ಮಲೇರಿಯಾ ಕಾಯಿಲೆ ಹೇಗೆ ಹರಡುತ್ತದೆ, ನಿಯಂತ್ರಿಸುವ ಕುರಿತು ಇರುವ ಯೋಜನೆಗಳು, ಇಲಾಖೆ ಸೌಲಭ್ಯಗಳ ಬಗ್ಗೆ ಪ್ರತಿ ಯೊಬ್ಬರು ಮಾಹಿತಿ ತಿಳಿಯುವುದು ಅಗತ್ಯವಾಗಿದೆ. ಮಲೇರಿಯಾ ವಿರುದ್ಧ ನಿರಂತರವಾಗಿ ಹೋರಾಟ ಫಲವಾಗಿ ಜಿಯಲ್ಲಿ ೨೦೨೪ರ ಅವಧಿಗೆ ೩ ಜನರಿಗೆ ಮಾತ್ರ ಸೋಂ ಕು ಕಾಣಿಸಿಕೊಂಡಿದೆ ಎಂದರು.
ಕಾರ್ಯಕ್ರಮದಲ್ಲಿ ಜಿ ಆರ್‍ಸಿಹೆಚ್ ಅಧಿಕಾರಿ ಡಾ.ನಾಗರಾಜ ನಾಯ್ಕ್,ಜಿ ಸರ್ವೇಕ್ಷಣಾಧಿಕಾರಿ ಡಾ.ಮಲ್ಲಪ್ಪ, ತಾಲ್ಲೂಕ್ ಆರೋ ಗ್ಯಾಧಿಕಾರಿ ಡಾ.ಚಂದ್ರಶೇಖರ್ ,ಆರೋಗ್ಯ ಇಲಾಖೆಯ ಡಾ.ಧನಂ ಜಯ್, ನಾರಾಯಣ, ರೋಟರಿ ಸಂಸ್ಥೆ ಅಧ್ಯಕ್ಷರಾದ ಸತೀಶ್ ಚಂದ್ರ, ರೋಟರಿ ಮಾಜಿ ಅಸಿಸ್ಟೆಂಟ್ ಗವರ್ನರ್ ವಿಜಯಕುಮಾರ್ ಜಿ, ಕಾಲೇಜಿನ ಪ್ರಾಂಶುಪಾಲರಾದ ಪ್ರೋ.ಮಮತ, ಎನ್‌ಎಸ್‌ಎಸ್ ಕಾರ್ಯಕ್ರಮ ಅಧಿಕಾರಿ ನಾಗರಾಜ ಕೆ.ಎಂ, ಪ್ರೋ ಜಗದೀಶ್, ಕಾಲೇಜಿನ ಉಪನ್ಯಾಶಕರು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.