ಎಫ್‌ಕೆಸಿಸಿಐ ಮ್ಯಾನೇಜಿಂಗ್ ಕಮಿಟಿ ಸದಸ್ಯರಾಗಿ ಡಿ.ಎಂ.ಶಂಕರಪ್ಪ

ಶಿವಮೊಗ್ಗ: ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆಯ ಮ್ಯಾನೇಜಿಂಗ್ ಕಮಿಟಿ ಸದಸ್ಯರಾಗಿ ಶಿವಮೊಗ್ಗ ಜಿ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಮಾಜಿ ಅಧ್ಯಕ್ಷ ಡಿ.ಎಂ. ಶಂಕರಪ್ಪ ಆಯ್ಕೆಯಾಗಿzರೆ.
ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆಗೆ ನಡೆದ ಚುನಾವಣೆಯಲ್ಲಿ ಡಿ.ಎಂ.ಶಂಕ ರಪ್ಪ ಅವರು ಸ್ಪರ್ಧಿಸಿ ಶಿವಮೊಗ್ಗ, ಚಿತ್ರದುರ್ಗ, ಬಳ್ಳಾರಿ, ದಾವಣ ಗೆರೆ ಸೇರಿ ೪ ಜಿಗಳ ಪರವಾಗಿ ಜಯಶೀಲರಾಗಿದ್ದು, ೪೮ ಜನರ ಆಡಳಿತ ಸಮಿತಿಯಲ್ಲಿ ಡಿ.ಎಂ. ಶಂಕರಪ್ಪ ಅವರು ಒಬ್ಬರಾಗಿ ಆಯ್ಕೆಯಾಗಿರುತ್ತಾರೆ.
ಡಿ.ಎಂ.ಶಂಕರಪ್ಪ ಅವರು ಶಿವಮೊಗ್ಗ ಜಿ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಮಾಜಿ ಅಧ್ಯಕ್ಷರು, ಮಂಡಿ ಮರ್ಚೆಂಟ್ ಬ್ಯಾಂಕ್ ಮಾಜಿ ಅಧ್ಯಕ್ಷರು, ರೋಟರಿ ಚಾರಿಟೇಬಲ್ ಟ್ರಸ್ಟ್ ನ ಮಾಜಿ ಅಧ್ಯಕ್ಷರು, ಹಾಲಿ ಅಡಕೆ ಮಂಡಿ ವರ್ತಕರ ಸಂಘದ ಅಧ್ಯ ಕ್ಷರು, ಉದ್ಯಮಿಯೂ ಆಗಿzರೆ.
ಶಿವಮೊಗ್ಗ ಜಿ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ಎನ್.ಗೋಪಿನಾಥ್, ಉಪಾಧ್ಯಕ್ಷ ಬಿ.ಗೋಪಿನಾಥ್, ಕಾರ್ಯದರ್ಶಿ ವಸಂತ್ ಹೋಬಳಿದಾರ್, ಖಜಂಚಿ ಎಂ.ರಾಜು, ಸಹ ಕಾರ್‍ಯದರ್ಶಿ ಜಿ.ವಿಜಯ್ ಕುಮಾರ್, ಎಂಎಲ್‌ಸಿ ಡಿ.ಎಸ್. ಅರುಣ್, ಎಸ್.ರುದ್ರೇಗೌಡ, ಗಣೇಶ್ ಅಂಗಡಿ, ರಾಕೇಶ್ ಗೌಡ ಎಫ್‌ಕೆಸಿಸಿಐ ಮಾಜಿ ಅಧ್ಯಕ್ಷ ಸುಧಾಕರ ಶೆಟ್ಟಿ, ಬಿ.ಎಲ್. ಶಂಕರಪ್ಪ, ರಾಮಕೃಷ್ಣ, ಪಿ.ಬಿ. ಶಿರೂರ್ ಅವರು ಡಿ.ಎಂ.ಶಂಕರಪ್ಪ ಅವರಿಗೆ ಅಭಿನಂದನೆ ಸಲ್ಲಿಸಿzರೆ.