ರೋಟರಿ ಸೆಂಟ್ರಲ್‌ನಿಂದ ಮಕ್ಕಳಿಗೆ ಸಮವಸ್ತ್ರ ವಿತರಣೆ: ಶಿವರಾಜ್

ಶಿವಮೊಗ್ಗ: ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ಉಪಯುಕ್ತ ಆಗುವ ವಿಶೇಷ ಯೋಜನೆಗಳನ್ನು ರೋಟರಿ ಸಂಸ್ಥೆಯು ವಿಶ್ವಾದ್ಯಂತ ಮುನ್ನಡೆಸಿಕೊಂಡು ಬರುತ್ತಿದೆ. ಮಕ್ಕಳಿಗೆ ಅಗತ್ಯ ಸೌಕರ್ಯಗಳನ್ನು ಒದಗಿಸುವ ಕೆಲಸ ಮಾಡುತ್ತಿದೆ ರೋಟರಿ ಕ್ಲಬ್ ಶಿವಮೊಗ್ಗ ಸೆಂಟ್ರಲ್ ಅಧ್ಯಕ್ಷ ಶಿವರಾಜ್ ಎಚ್.ಪಿ. ಹೇಳಿದರು.
ರೋಟರಿ ಕ್ಲಬ್ ಶಿವಮೊಗ್ಗ ಸೆಂಟ್ರಲ್ ವತಿಯಿಂದ ಕೋಟೆ ಗಂಗೂರಿನಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅಂಗನವಾಡಿ ಮಕ್ಕಳಿಗೆ ಸಮವಸ್ತ್ರ ವಿತರಿಸಿ ಮಾತನಾಡಿ, ನಮ್ಮ ಸಂಸ್ಥೆಯು ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಸಿಗಲು ಪೂರಕ ವಾತಾವರಣವನ್ನು ಸೃಷ್ಠಿಸುವ ವಿಶೇಷ ಯೋಜನೆ ಗಳನ್ನು ಅನುಷ್ಠಾನ ಮಾಡುತ್ತಿದೆ ಎಂದು ತಿಳಿಸಿದರು.
ರೋಟರಿ ಸಹಾಯಕ ಗವರ್ನರ್ ರವಿ ಕೋಟೋಜಿ ಮಾತನಾಡಿ, ರೋಟರಿ ಕ್ಲಬ್ ವಿಶ್ವಾದ್ಯಂತ ಸಮಾಜಮುಖಿ ಕಾರ್ಯಗಳನ್ನು ನಡೆಸಿಕೊಂಡು ಬರುತ್ತಿದ್ದು, ಪಲ್ಸ್ ಪೊಲಿಯೋ ಕಾರ್ಯಕ್ರಮಗಳಲ್ಲಿ ಮಹತ್ತರ ಪಾತ್ರ ವಹಿಸಿತ್ತು ಎಂದರು.
ದೇಶದ ನೂರಾರು ಶಾಲೆಗಳಲ್ಲಿ ಸ್ವಚ್ಛತಾ ಕಾರ್ಯಕ್ರಮ ನಡೆಸಿ, ಅದರ ಮಹತ್ವ ಹಾಗೂ ಶುದ್ಧ ನೀರಿನ ಉಪಯೋಗದ ಬಗ್ಗೆ ಮಕ್ಕಳಿಗೆ ಅರಿವು ಮೂಡಿಸಲಾ ಗುತ್ತಿದೆ. ಶಾಲೆಗಳಿಗೆ ಅಗತ್ಯ ಉಪ ಕರಣಗಳನ್ನು ಒದಗಿಸುವ ಕೆಲಸ ರೋಟರಿ ಮಾಡುತ್ತಿದೆ. ಸೇವಾ ಕಾರ್‍ಯಗಳನ್ನು ನಿರಂತರ ವಾಗಿ ಹಮ್ಮಿ ಕೊಂಡು ಬರುತ್ತಿದೆ ಎಂದರು.
ರೋಟರಿ ಕ್ಲಬ್ ಶಿವಮೊಗ್ಗ ಸೆಂಟ್ರಲ್ ಕಾರ್ಯದರ್ಶಿ ಕಿರಣ್ ಕುಮಾರ್ ಮಾತನಾಡಿ, ಭಾರತ ದೇಶ ವಿವಿಧತೆಯಲ್ಲಿ ಏಕತೆ ಕಾಣುವಂತಹ ದೇಶ ಆಗಿದ್ದು, ಶಾಲೆಗಳಲ್ಲಿ ಎಲ್ಲರೂ ಒಂದೇ ಭಾವನೆಗಳನ್ನು ಮೂಡಿಸುವ ಉತ್ತಮ ಕಾರ್‍ಯ ಆಗುತ್ತದೆ. ಸಮ ವಸ್ತ್ರ ಎಲ್ಲರೂ ಒಗ್ಗೂಡಿಸಲು ಸಹ ಕಾರಿ ಆಗುತ್ತದೆ ಎಂದರು.
ಇದೇ ಸಂದರ್ಭದಲ್ಲಿ ಕೋಟೆ ಗಂಗೂರು ಅಂಗನವಾಡಿ ಕೇಂದ್ರ ದಲ್ಲಿ ಮಕ್ಕಳಿಗೆ ಸಮವಸ್ತ್ರಗಳನ್ನು ರೋಟರಿ ಕ್ಲಬ್ ಶಿವಮೊಗ್ಗ ಸೆಂಟ್ರ ಲ್ ವತಿಯಿಂದ ವಿತರಿಸಲಾಯಿತು.
ವಲಯ ಸೇನಾನಿ ಧರ್ಮೇ ಂದ್ರ ಸಿಂಗ್. ಜಿ ಯೋಜನಾ ಸಂಯೋಜಕ ಎನ್.ರಮೇಶ್, ಕ್ಲಬ್ ಸದಸ್ಯರಾದ ನಟರಾಜ್.ಕೆ. ಆರ್, ಬಲರಾಮ, ಬಸವರಾಜ, ಜಗದೀಶ್.ಯು, ಅಶ್ವಿನ್ ಹಾಗೂ ಶಾಲೆಯ ಎಸ್‌ಡಿಎಂಸಿ ಸದಸ್ಯರು, ಆರೋಗ್ಯ ಇಲಾಖೆಯ ಸಿಬ್ಬಂದಿ, ಶಿವಮೊಗ್ಗ ಸೆಂಟ್ರಲ್ ಕ್ಲಬ್ ಎ ಸದಸ್ಯರು ಉಪಸ್ಥಿತರಿದ್ದರು.