ಮಹಾ ಸಂಪರ್ಕ ಅಭಿಯಾನ ಕಾರ್ಯಕ್ರಮದಡಿ ಸಾರ್ವಜನಿಕರಿಗೆ ಕರಪತ್ರ ವಿತರಣೆ:ಎಂಪಿಆರ್

ಹೊನ್ನಾಳಿ : ೨೬ ಪಕ್ಷಗಳು ಸೇರಿಕೊಂಡು ಮಹಾಘಟ ಬಂದ ನ್‌ಗೆ ಮಾಡಿಕೊಂಡಿದ್ದು ನಾನು ಮಹಾಘಟಬಂದನ್‌ಗೆ ಸವಾಲು ಹಾಕುತ್ತೇನೆ ನಿಮ್ಮ ಮುಂದಿನ ಪ್ರಧಾನಮಂತ್ರಿ ಅಭ್ಯರ್ಥಿ ಯಾರು ಎಂದು ಘೋಷಣೆ ಮಾಡಲಿ ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ಹೇಳಿದರು.
ತಾಲೂಕಿನ ಬೇಲಿಮಲ್ಲೂರು ಗ್ರಾಮದಲ್ಲಿ ಕೇಂದ್ರ ಸರ್ಕಾರದ ಒಂಬತ್ತನೆಯ ವರ್ಷದ ಸಾಧನೆ ಮತ್ತು ಮಹಾ ಸಂಪರ್ಕ ಅಭಿ ಯಾನ ಕಾರ್ಯಕ್ರಮದಡಿಯಲ್ಲಿ ಸಾರ್ವಜನಿಕರಿಗೆ ಕರಪತ್ರಗಳನ್ನು ವಿತರಿಸಿ ಅವರು ಮಾತನಾಡಿದರು.
೨೬ ಪಕ್ಷಗಳು ಮಹಾಘಟ ಬಂದನ್ ಮಾಡಿಕೊಂಡಿದ್ದು ಈಗಾ ಗಲೇ ಎರಡು ಸಭೆಗಳನ್ನು ಮಾಡಿ ದ್ದು, ಅವರು ಸೇರಿದ್ದು ಪೋಟೋ ಶೂಟಿಗೆ, ಬಂದಪುಟ್ಟ ಹೋದ ಪುಟ್ಟ ಎಂದ ರೇಣುಕಾಚಾರ್ಯ, ೩ನೇ ಸಭೆಗೆ ಮಹಾ ಘಟ ಬಂದನ್ ಚಿದ್ರವಾಗಲಿದೆ ಎಂದರು.
ಈಗಾಗಲೇ ಬಿಜೆಪಿಯಿಂದ ನರೇಂದ್ರಮೋದಿಜಿಯವರು ಪ್ರಧಾನ ಅಭ್ಯರ್ಥಿ ಎಂದು ಷೋಷಣೆ ಮಾಡಿದ್ದು, ಮಹಾ ಘಟ ಬಂದನ್‌ನಲ್ಲಿ ಪ್ರಧಾನಿ ಅಭ್ಯರ್ಥಿ ಯಾರು ಎಂದು ಘೋ ಷಣೆ ಮಾಡಲಿ ಎಂದು ಸವಾಲು ಹಾಕಿದರು.
ನರೇಂದ್ರ ಮೋದಿಜಿಯವರು ಪ್ರಧಾನಮಂತ್ರಿಯಾಗಿ ೯ ವರ್ಷ ಪೂರೈಸಿದ್ದು ಭ್ರಷ್ಟಾಚಾರ ರಹಿತ ಆಡಳಿತ ನೀಡಿzರೆಂದ ರೇಣುಕಾ ಚಾರ್ಯ, ಕೇಂದ್ರ ಸರ್ಕಾರ ಒಂಬ ತ್ತು ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರದ ಸಾಧನೆಗಳನ್ನು ಜನರ ಮನೆ ಬಾಗಿಲಿಗೆ ತಲುಪಿ ಸುವ ಕೆಲಸವನ್ನು ಕಾರ್ಯಕರ್ತರು ಮಾಡ ಬೇಕೆಂದರು.
ಗೋಲಿ ಆಟವಾಡಿ ಗಮನ ಸೆಳೆದ ರೇಣುಕಾಚಾರ್ಯ : ಬೇಲಿಮಲ್ಲೂರು ಗ್ರಾಮದಲ್ಲಿ ಕೇಂದ್ರ ಸರ್ಕಾರದ ಒಂಬತ್ತನೆ ವರ್ಷದ ಸಾಧನೆ ಮತ್ತು ಮಹಾ ಸಂಪರ್ಕ ಅಭಿಯಾನ ಕಾರ್ಯ ಕ್ರಮದಡಿಯಲ್ಲಿ ಗ್ರಾಮಸ್ಥರಿಗೆ ಕರಪತ್ರಗಳನ್ನು ವಿತರಿಸಲು ತೆರಳಿದ್ದ ರೇಣುಕಾಚಾರ್ಯ ಮಕ್ಕಳೊಂದಿಗೆ ಗೋಲಿ ಆಟವಾಡಿ ಗಮನ ಸೆಳೆದರು. ಮಕ್ಕಳೊಂದಿಗೆ ಮಕ್ಕಳಾಗಿ ಗೋಲಿಆಟವಾಡಿದ ರೇಣುಕಾಚಾರ್ಯ ಕರಪತ್ರಗಳನ್ನು ನೀಡಿ ನರೇಂದ್ರ ಮೋದಿಜಿಯವರ ಜನಪರ ಕೆಲಸಗಳ ಬಗ್ಗೆ ಮಾಹಿತಿ ನೀಡಿದರು.
ಈ ವೇಳೆ ಜಿಪಂ ಮಾಜಿ ಉಪಾಧ್ಯಕ್ಷ ಸುರೇಂದ್ರನಾಯ್ಕ, ಕಾರ್ಯದರ್ಶಿ ಅರಕೆರೆ ನಾಗ ರಾಜ್,ಎಸ್ಸಿಮೋರ್ಷ ತಾಲೂಕು ಅಧ್ಯಕ್ಷ ಉಮೇಶ್, ಮುಖಂಡ ರಾದ ಸಿದ್ದಪ್ಪ, ಹನುಮಂತಪ್ಪ, ಪ್ರವೀಣ್, ಚಂದ್ರು ಸೇರಿದಂತೆ ಮತ್ತೀತರರಿದ್ದರು.