ಸಾಗರದಲ್ಲಿ ಕಾಂಗ್ರೆಸ್ – ಆಮ್ ಆದ್ಮಿ ನಡುವೆ ನೇರ ಫೈಟ್…

ಶಿವಮೊಗ್ಗ: ಸಾಗರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಬೇಳೂರು ಗೋಪಾಲಕೃಷ್ಣ ಮತ್ತು ಆಮ್ ಆದ್ಮಿ ಪಾರ್ಟಿಯಿಂದ ಸ್ಪರ್ಧಿಸಿರುವ ನನ್ನ ಮಧ್ಯೆ ನೇರ ಸ್ಪರ್ಧೆ ಇದೆ. ಇಲ್ಲಿ ಬಿಜೆಪಿ ೩ನೇ ಸ್ಥಾನಕ್ಕೆ ತಳ್ಳಲ್ಪಡುತ್ತದೆ ಎಂದು ಆಮ್ ಆದ್ಮಿ ಪಾರ್ಟಿಯ ಸಾಗರ ವಿಧಾನ ಸಭಾ ಕ್ಷೇತ್ರದ ಅಭ್ಯರ್ಥಿ ಕೆ. ದಿವಾಕರ್ ಹೇಳಿ ದರು.
ಪ್ರೆಸ್ ಟ್ರಸ್ಟ್ ಮತ್ತು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಆಶ್ರಯದಲ್ಲಿ ಪತ್ರಿಕಾ ಭವನದಲ್ಲಿ ಆಯೋಜಿಸಿದ್ದ ಸರಣಿ ಸಂವಾದ ಕಾರ್ಯಕ್ರಮದಲಿ ಮಾತನಾಡಿದ ಅವರು, ಸಾಗರದ ಜನತೆ ಹೊಸತನ್ನು ಬಯಸುತ್ತಿ ದ್ದಾರೆ. ಆಪ್ ಕೂಡ ರಾಷ್ಟ್ರೀಯ ಪಕ್ಷವಾಗಿದೆ. ಪ್ರಸ್ತುತ ಭ್ರಷ್ಟಾಚಾರ ನಡುವೆ ನಮ್ಮದು ಕಳಂಕರಹಿತ ಪಕ್ಷ. ನಾನು ಕಳೆದ ೨೫ ವರ್ಷಗಳಿಂದ ಸಾಮಾಜಿಕ ಚಟುವಟಿಕೆಗಳ ಮೂಲಕ ರಾಜಕೀಯ ಮತ್ತು ಸಂಘ ಸಂಸ್ಥೆಗಳಲ್ಲಿ ತೊಡಗಿಸಿ ಕೊಳ್ಳುವ ಮೂಲಕ ಗುರುತಿಸಿ ಕೊಂಡಿದ್ದೇನೆ. ನನಗೆ ಪ್ರಚಾರ ಮಾಡುವುದು ಕಷ್ಟವಾಗುವುದಿಲ್ಲ. ಈ ಬಾರಿ ಗೆಲ್ಲುವ ಅವಕಾಶ ನನಗೇ ಹೆಚ್ಚಿದೆ ಎಂದರು.


ಕುಟುಂಬ ರಾಜಕಾರಣದ ವಿರೋಧಿ ನಾನು. ಈಗಿರುವ ಹಾಲಪ್ಪನವರಾಗಲಿ, ಬೇಳೂರು ಗೋಪಾಲಕೃಷ್ಣರಾಗಲಿ, ಕಾಗೋಡು ತಿಮ್ಮಪ್ಪನವರಾಗಲಿ, ರಾಜನಂದಿನಿ ಯಾಗಲಿ ಎಲ್ಲರೂ ಒಂದು ಕುಟುಂಬದಿಂದಲೆ ಟಿಸಿಲೊಡೆದು ಬಂದವರು. ನಾನು ಮಾತ್ರ ಯಾವ ರಾಜಕಾರಣದ ಕುಟುಂಬದಿಂದ ಬಂದವನಲ್ಲ. ಚುನಾವಣಾ ರಾಜಕಾರಣಕ್ಕೆ ಹೊಸತಾಗಿ ಪ್ರವೇಶಿಸಿದ್ದೇನೆ. ಬೇರೆಯವರ ಉತ್ಪನ್ನ ಸೇಲ್ ಮಾಡುತ್ತಿದ್ದ ನಾನು ಈಗ ನನ್ನ ಉತ್ಪನ್ನವನ್ನೇ ಸೇಲ್ ಮಾಡಲು ಹೊರಟಿದ್ದೇನೆ ಎಂದರು.
ನಿಧಾನವಾಗಿ ನಮ್ಮ ಪಕ್ಷ ರಾಜ್ಯ ದಲ್ಲಿ ಅಲ್ಲದೆ ಜಿಲ್ಲೆಯಲ್ಲಿ ಬೇರೂ ರಲಿದೆ. ಈಗಾಗಲೇ ರಾಜ್ಯದಲ್ಲಿ ೨೧೦ ಸ್ಥಾನಗಳಿಗೆ ಸ್ಪರ್ಧಿಸಿದ್ದು, ಜಿಲ್ಲೆಯ ಎಲ್ಲಾ ಏಳು ಕ್ಷೇತ್ರಗಳಿಗೂ ನಾವು ಸ್ಪರ್ಧೆ ನೀಡಿದ್ದೇವೆ. ರಾಜ್ಯ ದಲ್ಲಿ ೨೦ ಸ್ಥಾನಗಳು, ಜಿಲ್ಲೆಯಲ್ಲಿ ಮೂರರಿಂದ ನಾಲ್ಕು ಸ್ಥಾನಗಳನ್ನು ಗೆಲ್ಲಲಿದೆ ಎಂದರು.
ಬಿಜೆಪಿಗೆ ಯಾವ ಅಭಿವೃದ್ಧಿ ವಿಷಯವನ್ನೂ ಮಾತನಾಡುವ ಅರ್ಹತೆ ಇಲ್ಲ. ಗ್ರಾಮೀಣ ಪ್ರದೇಶ ದಲ್ಲಿ ಅಭಿವೃದ್ಧಿಯೂ ಆಗಿಲ್ಲ. ಶೇ.೪೦ರ ಕಮಿಷನ್ ಮಾತ್ರ ಸುದ್ದಿಯಾಗಿದೆ ಅಷ್ಟೆ. ಭಾವನೆಗಳ ಆಧಾರದಲ್ಲಿ ಬಿಜೆಪಿ ಗೆಲ್ಲುವುದು ಬಿಟ್ಟರೆ ಮತ್ತೇನೂ ಅಲ್ಲ ಎಂದರು.
ನಾನು ಶಾಸಕನಾದರೆ ಆಧುನಿಕ ತಂತ್ರಜನ ಸಾಗರದ ಗ್ರಾಮಾಂ ತರ ಪ್ರದೇಶಗಳಿಗೆ ಲಭ್ಯವಾಗು ವಂತೆ ಮಾಡುವುದು, ಸರಕಾರಿ ಇಂಜಿನಿಯರಿಂಗ್ ಕಾಲೇಜು ಸ್ಥಾಪನೆ, ಅಡಿಕೆ ಬೆಳೆಗಾರರ ಹಿತ ಕಾಪಾಡುವ ಕಾನೂನು ರಚನೆ, ಶರಾವತಿ ಸಂತ್ರಸ್ತರ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡು ಕೊಳ್ಳು ವುದು ನನ್ನ ಆದ್ಯತೆ ಎಂದರು.
ಮಂಗನ ಕಾಯಿಲೆಗೆ ಈವರೆಗೆ ಸೂಕ್ತ ಚಿಕಿತ್ಸೆ ಲಭ್ಯವಿಲ್ಲ. ಪ್ರತಿವರ್ಷ ಜಿಲ್ಲೆಯ ಹಲವೆಡೆ ಇದು ಕಾಡು ತ್ತಿದೆ. ಇದಕ್ಕೆ ಅವಶ್ಯಕ ಚುಚ್ಚು ಮದ್ದು ಸಿಗುವಂತೆ ಮಾಡಬೇಕಿದೆ. ಬೀದಿ ವ್ಯಾಪಾರಿಗಳಿಗೆ ಸೂಕ್ತ ನೆಲೆ ಒದಗಿಸಬೇಕಿದೆ. ಮೆಬೈಲ್ ನೆಟ್ ವರ್ಕ್ ಸಮಸ್ಯೆ ಸಾಗರ ಮತ್ತು ಹೊಸನಗರ ತಾಲೂಕಿನ ಗ್ರಾಮ ಗಳ ಅತಿ ದೊಡ್ಡ ಸಮಸ್ಯೆ. ಸರಕಾರ ಕೇವಲ ಭರವಸೆ ಕೊಡುತ್ತಿದೆಯೆ ವಿನಾ ಅದನ್ನು ನೀಡುವ ಕೆಲಸ ಮಾಡುತ್ತಿಲ್ಲ. ಚುನಾವಣೆ ಬಂದಾಗ ಈ ವಿಚಾರ ಪ್ರಸ್ತಾಪವಾಗುತ್ತದೆ. ಅತ್ಯಂತ ವೇಗದ ತಂತ್ರಜನದ ನೆಟ್ ವರ್ಕ್ ಟವರ್ ಗಳನ್ನು ಅಳವಡಿಸುವುದಕ್ಕೆ ಮುಂದಾ ಗುತ್ತೇನೆ ಎಂದು ಭರವಸೆ ನೀಡಿದರು.ಅಡಿಕೆ ಬೆಳೆಗಾರರ ಸಮಸ್ಯೆಯನ್ನೇ ಬಿಜೆಪಿ ಲಾಭ ಮಾಡಿಕೊಳ್ಳುತ್ತಿದೆ. ಬೆಳೆಗಾರರಿಗೆ ಸದಾ ದ್ರೋಹ ಮಾಡುತ್ತ ಬಂದಿರುವ ಪಕ್ಷ ಅದು. ಸಮಸ್ಯೆ ಪರಿಹರಿಸದೆ ಜೀವಂತವಾಗಿರಿಸಿದೆ. ಗುಟ್ಕಾ ನಿಷೇಧದ ಬಗ್ಗೆ ಖಚಿತ ನಿಲುವಿಲ್ಲ. ಅಡಿಕೆ ಬೆಳೆಗೆ ರೋಗ ಬಂದರೂ ಅದಕ್ಕೆ ಪರಿಹಾರ ಕೊಡದೆ ರೈತರನ್ನು ಹಿಂಡಿದೆ ಎಂದು ಹೇಳಿದರು.
ಸಂವಾದದಲ್ಲಿ ಟ್ರಸ್ಟ್ ಅಧ್ಯಕ್ಷ ಎನ್. ಮಂಜುನಾಥ, ಕಾರ್ಯದರ್ಶಿ ನಾಗರಾಜ ನೇರಿಗೆ, ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಗೋಪಾಲ ಯಡಗೆರೆ ಉಪಸ್ಥಿತರಿದ್ದರು.