ಶಿವಮೊಗ್ಗಕ್ಕೆ ೫೦೦ ಹಾಸಿಗೆಗಳ ಸರ್ಕಾರಿ ಜಿ ಆಸ್ಪತ್ರೆ ಮಂಜೂರಿಗೆ ಆಗ್ರಹ
ಶಿವಮೊಗ್ಗ: ಶಿವಮೊಗ್ಗ ನಗರಕ್ಕೆ ೫೦೦ ಹಾಸಿಗೆಗಳ ಸರ್ಕಾರಿ ಜಿ ಆಸ್ಪತ್ರೆ ಮಂಜೂರು ಮಾಢಬೇಕು ಎಂದು ದಲಿತ ಸಂಘರ್ಷ ಸಮಿತಿ ಯ ರಾಜ್ಯ ಸಂಚಾಲಕ ಎಂ. ಗುರು ಮೂರ್ತಿ ಸರ್ಕಾರಕ್ಕೆ ಆಗ್ರಹಿಸಿ zರೆ.
ಅವರು ಇಂದು ಪ್ರೆಸ್ ಟ್ರಸ್ಟ್ ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಶಿವಮೊಗ್ಗ ನಗರದಲ್ಲಿ ಈಗ ಮೆಗ್ಗಾನ್ ಆಸ್ಪತ್ರೆ ಇದ್ದು, ಅದು ೨೦೦೭ರಲ್ಲಿ ಜಿ ಬೋಧನಾ ಆಸ್ಪತ್ರೆಯಾಗಿ ಮಾರ್ಪ ಟ್ಟಿದೆ. ಅಲ್ಲಿ ಕೇವಲ ೯೫೦ ಹಾಸಿಗೆ ಗಳಿವೆ. ಬೋಧನಾ ಆಸ್ಪತ್ರೆ ಆದ ನಂತರ ಅದು ಜಿ ಆಸ್ಪತ್ರೆಯಾಗಿ ಉಳಿದಿಲ್ಲ. ಹಾಗಾಗಿ ಪ್ರತ್ಯೇಕವಾದ ಜಿ ಆಸ್ಪತ್ರೆಯೊಂದು ಬೇಕಾ ಗಿದೆ.ಸರ್ಕಾರ ನಗರದ ಸುತ್ತಮುತ್ತ ಎದರೂ ೧೦ ಎಕರೆ ಜಗ ನೀಡಿ ಅಲ್ಲಿ ಕನಿಷ್ಠ ೫೦೦ ಹಾಸಿಗೆಗಳ ಆಸ್ಪತ್ರೆಯನ್ನುನಿರ್ಮಿಸಬೇಕು ಎಂದರು.
ಮೆಗ್ಗಾನ್ ಆಸ್ಪತ್ರೆಗೆ ಕೇವಲ ಶಿವಮೊಗ್ಗ ಅಲ್ಲದೆ ಸುತ್ತಮುತ್ತಲಿನ ಶಿರಸಿ, ಸಿzಪುರ, ದಾವಣಗೆರೆ, ಚಿತ್ರದುರ್ಗ, ಚಿಕ್ಕಮಗಳೂರು ಜಿಗಳಿಂದಲೂ ರೋಗಿಗಳು ಬರುತ್ತಾರೆ. ಪ್ರತಿನಿತ್ಯ ೧೫೦೦ಕ್ಕೂ ಹೆಚ್ಚು ರೋಗಿಗಳು ಬರುವುದರಿ ಂದ ಜಗವೂ ಸಾಕಾಗುತ್ತಿಲ್ಲ. ಮೆಗ್ಗಾನ್ ಆಸ್ಪತ್ರೆ ೧೦ ವರ್ಷಗಳ ಹಿಂದೆ ಹೇಗಿತ್ತೋ ಈಗಲೂ ಹಾಗೆಯೇ ಇದೆ. ಮೂಲಭೂತ ಸಮಸ್ಯೆಗಳು ಬಗೆಹರಿದಿಲ್ಲ. ಒಪಿಡಿ ಸಮಸ್ಯೆಯಂತೂ ತೀವ್ರವಾಗಿದೆ. ನಗರದಲ್ಲಿ ಹೊಸಹೊಸ ಖಾಸಗಿ ಆಸ್ಪತ್ರೆಗಳು ಹುಟ್ಟಿಕೊಳ್ಳುತ್ತಲೇ ಇವೆ. ಇವು ಬಡವರಿಗೆ ಎಟುಕು ತ್ತಿಲ್ಲ. ಹಾಗಾಗಿ ಸರ್ಕಾರಿ ಆಸ್ಪತ್ರೆ ಯನ್ನು ಮತ್ತಷ್ಟು ಉತ್ತಮಗೊಳಿ ಸಬೇಕಾಗಿದೆ ಎಂದರು.
ಈ ಎ ಹಿನ್ನೆಲೆಯಲ್ಲಿ ಶಿವ ಮೊಗ್ಗ ನಗರಕ್ಕೆ ಜಿ ಆಸ್ಪತ್ರೆ ಯನ್ನು ಮಂಜೂರು ಮಾಡಬೇ ಕೆಂದು ಅವರು ಆಗ್ರಹಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಪ್ರಮು ಖರಾದ ಶಿವಬಸಪ್ಪ, ಎಂ. ಏಳು ಕೋಟಿ, ಚಿಕ್ಕಮರಡಿ ರಮೇಶ್, ಎಡವಾಲ ಹನುಮಂತಪ್ಪ, ನವಿಲೆ ಪದ್ಮನಾಭ ಮುಂತಾದವರಿದ್ದರು.