ಮಹಿಳಾ ಕುಸ್ತಿಪಟುಗಳಿಗೆ ಲೈಂಗಿಕ ಕಿರುಕುಳ ಬ್ರಿಜ್‌ಭೂಷಣ್ ಸಿಂಗ್ ಬಂಧನಕ್ಕೆ ಆಗ್ರಹ

ಶಿವಮೊಗ್ಗ: ರಾಷ್ಟ್ರೀಯ ಮಹಿಳಾ ಕುಸ್ತಿಪಟುಗಳಿಗೆ ಲೈಂಗಿಕ ಕಿರುಕುಳ ನೀಡಿದ ಕುಸ್ತಿ ಫೆಡರೇ ಷನ್ ಅಧ್ಯಕ್ಷ ಹಾಗೂ ಬಿಜೆಪಿ ಸಂಸದ ಬ್ರಿಜ್‌ಭೂಷಣ್ ಸಿಂಗ್ ಅವರನ್ನು ಬಂಧಿಸುವಂತೆ ಆಗ್ರಹಿಸಿ ಜಯಕರ್ನಾಟಕ ಸಂಘಟನೆ ಕಾರ್ಯಕರ್ತರು ಇಂದು ಜಿಧಿಕಾರಿಗಳ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಿದರು.

ಮಹಿಳಾ ಕುಸ್ತಿಪಟುಗಳು ವಿಶ್ವ ಪ್ರಖ್ಯಾತರಾಗಿzರೆ. ಭಾರತಕ್ಕೆ ಕೀರ್ತಿ ತಂದಿzರೆ. ಕುಸ್ತಿ ಫೆಡರೇಷನ್ ಅಧ್ಯಕ್ಷರು ಮಹಿಳಾ ಕುಸ್ತಿಪಟುಗಳಿಗೆ ಲೈಂಗಿಕ ಕಿರುಕುಳ ನೀಡಿzರೆ. ಈ ಬಗ್ಗೆ ಪೊಲೀಸರಿಗೆ ದೂರು ಕೂಡ ನೀಡಲಾಗಿದೆ. ಆದರೆ ಕೇಂದ್ರ ಸರ್ಕಾರ ಇವರಿಗೆ ರಕ್ಷಣೆ ನೀಡುತ್ತಿದೆ. ತಕ್ಷಣವೇ ಇವರನ್ನು ಬಂಧಿಸಬೇಕು. ಮಹಿಳಾ ಕ್ರೀಡಾಪಟುಗಳಿಗೆ ನ್ಯಾಯ ದೊರ ಕಿಸಿಕೊಡಬೇಕು ಎಂದು ಮನವಿದಾರರು ಆಗ್ರಹಿಸಿದರು.
ರಾಷ್ಟ್ರಾದ್ಯಂತ ಈ ವಿಚಾರವಾಗಿ ಹೋರಾಟಗಳು ನಡೆಯುತ್ತಿ ದ್ದರೂ ಕೂಡ ಕೇಂದ್ರ ಸರ್ಕಾರ ಸುಮ್ಮನಿದೆ. ಆದಕಾರಣ ರಾಷ್ಟ್ರಪತಿ ಯವರು ಮಧ್ಯ ಪ್ರವೇಶಿಸಿ ಸಿಬಿಐ ತನಿಖೆ ನಡೆಸಿ ಆರೋಪಿಯನ್ನು ಬಂಧಿಸಬೇಕು. ಸಂಸದ ಸ್ಥಾನದಿಂದ ವಜ ಮಾಡಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ.
ಈ ಸಂದರ್ಭದಲ್ಲಿ ಜಿಧ್ಯಕ್ಷ ಸುರೇಶ್ ಶೆಟ್ಟಿ, ಮಹಿಳಾ ಘಟಕದ ಜಿಧ್ಯಕ್ಷೆ ನಾಜೀಮಾ, ಪ್ರಮು ಖರಾದ ಪ್ರೇಮಾ ಶೆಟ್ಟಿ, ಪರಶು ರಾಮ್, ರೇಖಾ, ಮಮತಾ, ರವಿ, ತ್ಯಾಗರಾಜ್., ಟಿ.ಆರ್. ನಾಗರಾಜ್ ಸೇರಿದಂತೆ ಹಲವರಿ ದ್ದರು.