ಗೋವುಗಳ ತಲೆ ಕಡಿದು ನದಿಗೆಸೆದ ಮತಾಂದರ ವಿರುದ್ಧ ಕ್ರಮಕ್ಕೆ ಆಗ್ರಹ..
ತೀರ್ಥಹಳ್ಳಿ: ಅನ್ಯಕೋಮಿನ ಮತಾಂದ ಶಕ್ತಿಗಳು ಗೋವುಗಳನ್ನು ಅಮಾನುಷವಾಗಿ ಹತ್ಯೆ ಮಾಡಿದ್ದಲ್ಲದೆ ಅವುಗಳ ತಲೆಯನ್ನು ಧಾರ್ಮಿಕ ತೀರ್ಥ ಕ್ಷೇತ್ರವಾದ ಚಕ್ರತೀರ್ಥ ನದಿಗೆ ಎಸೆಯುವ ಮೂಲಕ ಹಿಂದೂಗಳ ಧಾರ್ಮಿಕ ಭಾವನೆಯನ್ನು ಕೆರಳಿಸುತ್ತಿದ್ದು, ಇಂತಹ ಮತಾಂದರನ್ನು ಕೂಡಲೇ ಬಂಧಿಸಿ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಹಿಂದೂ ಜನಜಗೃತಿ ಸಮಿತಿ ವತಿಯಿಂದ ತಾಲ್ಲೂಕು ಉಪ ತಹಶೀಲ್ದಾರ್ ಪಾಲಯ್ಯ ಅವರಿಗೆ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾ ಡಿದ ಸಮಿತಿ ಪ್ರಮುಖರು, ತೀರ್ಥಹಳ್ಳಿಯ ಇತಿಹಾಸ ಪ್ರಸಿದ್ಧ ಶ್ರೀ ರಾಮೇಶ್ವರ ದೇವಸ್ಥಾನದ ಬಳಿಯ ಚಕ್ರತೀರ್ಥ ನದಿ ಪಾವನ ನದಿಯಾಗಿದ್ದು ಇಲ್ಲಿಗೆ ಸಾವಿರಾರು ಭಕ್ತರು ಬಂದು ಈ ತೀರ್ಥಕ್ಷೇತ್ರದಲ್ಲಿ ಮಿಂದು ದೇವರ ದರ್ಶನ ಪಡೆಯುವ ಯೋಗ್ಯ ಆಚರಣೆ ಮಾಡುತ್ತಿದ್ದಾರೆ.
ಅನ್ಯಕೋಮಿನ ಮತಾಂದ ಶಕ್ತಿಗಳು ಹಿಂದೂಗಳು ಮಾತೆ ಎಂದು ಪೂಜಿಸುವ ಗೋವಿನ ತಲೆಯನ್ನು ಕಡಿದು ನದಿಗೆಸೆಯುವ ಮೂಲಕ ಪವಿತ್ರ ನದಿಗಳನ್ನು ಮಲಿನ ಗೊಳಿಸಿ, ಹಿಂದೂ ದೇವತೆಗಳನ್ನು ಅಪಮಾನ ಗೊಳಿಸುತ್ತಿರುವುದು ಖಂಡನೀಯ ಎಂದರು.
ಸಮಿತಿಯ ಪ್ರಮುಖರಾದ ನರೇಶ್, ಹರೀಶ್, ಕಾಂತೇಶ್ ಪ್ರಭು. ಶಿವು ಇನ್ನಿತರರು ಉಪಸ್ಥಿತರಿದ್ದರು.