ಗಾಂಧಿ ಪ್ರತಿಮೆ ಧ್ವಂಸಗೊಳಿಸಿದ ಕಿಡಿಗೇಡಿಗಳ ಬಂಧನಕ್ಕೆ ಆಗ್ರಹ

ಶಿವಮೊಗ್ಗ: ಹೊಳೆಹೊನ್ನೂರಿನ ಹೃದಯ ಭಾಗದ ಸರ್ಕಲ್‌ನಲ್ಲಿದ್ದ ಮಹಾತ್ಮ ಗಾಂಧಿ ಪ್ರತಿಮೆಯನ್ನು ಧ್ವಂಸ ಗೊಳಿಸುವ ಮೂಲಕ ದೇಶ ವಿರೋಧಿ ಕೃತ್ಯವನ್ನು ಕೆಲ ಕಿಡಿಗೇಡಿಗಳು ನಡೆಸಿದ್ದು, ಈ ಕೃತ್ಯವನ್ನು ಶಿವಮೊಗ್ಗ ಗ್ರಾಮಾಂತರ ಎನ್‌ಎಸ್‌ಯುಐ ತೀವ್ರವಾಗಿ ಖಂಡಿಸಿ ಜಿಲ್ಲಾ ರಕ್ಷಣಾಧಿಕಾರಿಗಳಿಗೆ ಮನವಿ ನೀಡಿದ್ದಾರೆ.
ಮಹಾತ್ಮಾಗಾಂಧಿ ಅವರು ವಿಶ್ವಶಾಂತಿಯನ್ನು ಬಯಸಿದವರು. ಶಾಂತಿಯ ಮಾರ್ಗದಿಂದಲೇ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟು ರಾಷ್ಟ್ರಪಿತ ಎನಿಸಿಕೊಂಡಿದ್ದಾರೆ. ಈ ನೆಲದ ಸ್ವಾತಂತ್ರ್ಯ ಚಳುವಳಿಯ ಹಿನ್ನಲೆ ತಿಳಿಯದ, ಸಂವಿಧಾನ ಮತ್ತು ಕಾನೂನಿಗ ಬಗ್ಗೆ ಗೌರವ ಇರದ ಕಿಡಿಗೇಡಿಗಳು ನಡುರಾತ್ರಿ ಯಲ್ಲಿ ರಾಷ್ಟ್ರಪಿತನ ಪ್ರತಿಮೆಯನ್ನು ಧ್ವಂಸಗೊಳಿಸಿ ವಿಕೃತಿ ಮೆರೆದಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಜಿಲ್ಲಾ ರಕ್ಷಣಾಧಿಕಾರಿಗಳು ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿ ಕೂಡಲೇ ದೇಶದ್ರೋಹಿ ಕೃತ್ಯವನ್ನೆಸಗಿದ ಕಿಡಿಗೇಡಿಗಳನ್ನು ಬಂಧಿಸಿ ಕಾನೂನು ಕ್ರಮ ಕೈಗೊಳ್ಳಬೇಕೆಂದು ಮನವಿಯಲ್ಲಿ ಆಗ್ರಹಿಸಲಾಗಿದೆ.
ಎನ್‌ಎಸ್‌ಯುಐ ಜಿಲ್ಲಾಧ್ಯಕ್ಷ ವಿಜಯ, ಕಾರ್ಯಾಧ್ಯಕ್ಷ ರವಿ ಕಟಿಕೆರೆ, ಶಿವಮೊಗ್ಗ ಗ್ರಾಮಾಂತರ ಅಧ್ಯಕ್ಷ ಹರ್ಷಿತ್ ಗೌಡ, ನಗರ ಅಧ್ಯಕ್ಷ ಚರಣ್ ಶೆಟ್ಟಿ, ಧನರಾಜ್, ಚಂದ್ರೋಜಿ ರಾವ್, ಪ್ರದೀಪ, ಅಶೋಕ, ಕೀರ್ತಿ, ಸಾಗರ್, ಸುಜನ್, ನಿಖಿಲಾ, ವಿಷ್ಣು, ಸೂರಜ್ ದೇವಿ ಕುಮಾರ್, ಕಾರ್ತಿಕ್, ಮಣಿ ಇನ್ನಿತರರಿದ್ದರು.