ಪ್ರತಿಯೊಬ್ಬ ವಿದ್ಯಾರ್ಥಿಗೂ ಸ್ಕೌಟ್ಸ್, ಗೈಡ್ಸ್ ತಲುಪಿಸಿ…
ಶಿವಮೊಗ್ಗ: ಸ್ಕೌಟ್ಸ್ ಮತ್ತು ಗೈಡ್ಸ್ ಕುರಿತು ಪ್ರತಿ ಮನೆ ಮನೆಗೂ, ವಿದ್ಯಾರ್ಥಿಗಳಿಗೂ ತಲುಪಿಸಬೇಕು. ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಕಾರ, ಶಿಕ್ಷಣದ ಜತೆಯಲ್ಲಿ ಉತ್ತಮ ವ್ಯಕ್ತಿತ್ವ ನಿರ್ಮಾಣಕ್ಕೆ ಸಹಕಾರಿ ಆಗುತ್ತದೆ ಎಂದು ಶಿವಮೊಗ್ಗ ಜಿ ಸ್ಕೌಟ್ಸ್ ಆಯುಕ್ತ ಕೆ.ಪಿ.ಬಿಂದುಕುಮಾರ್ ಹೇಳಿದರು.
ಶಿವಮೊಗ್ಗ ಜಿ ಸ್ಕೌಟ್ ಭವನ ದಲ್ಲಿ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಜಿ ಸಂಸ್ಥೆಯು ಆಯೋಜಿಸಿದ್ದ ರಾಜ್ಯ ಪುರಸ್ಕಾರ ಪೂರ್ವಭಾಗಿ ಸಿದ್ಧತಾ ಶಿಬಿರದಲ್ಲಿ ಮಕ್ಕಳನ್ನು ಉದ್ದೇಶಿಸಿ ಮಾತನಾಡಿ, ಮಕ್ಕಳಿಗೆ ಶಿಕ್ಷಣ ಹಂತದಿಂದಲೇ ಸ್ಕೌಟ್ ಮತ್ತು ಗೈಡ್ ಮಹತ್ವ ತಿಳಿಸಬೇಕು. ಇದರಿಂದ ಸಮುದಾಯ ಚಟುವಟಿಕೆಗಳಲ್ಲಿ ಭಾಗವಹಿಸಲು ಹೆಚ್ಚಿನ ಆತ್ಮವಿಶ್ವಾಸ ದೊರೆಯುತ್ತದೆ ಎಂದು ತಿಳಿಸಿದರು.
ಪೋಷಕರು ಮಕ್ಕಳಿಗೆ ಸ್ಕೌಟ್ ಮತ್ತು ಗೈಡ್ಸ್‌ನಲ್ಲಿ ಸೇರಿಸಿರುವುದ ರಿಂದ ವಿದ್ಯಾರ್ಥಿಗಳಲ್ಲಿ ಉತ್ತಮ ಮನೋಭಾವ ಬೆಳೆಯುತ್ತದೆ. ಉತ್ತಮ ಸಮಾಜ ನಿರ್ಮಾಣಕ್ಕೆ ಸಹಕಾರಿ ಆಗುವ ಗುಣಗಳ ಕಲಿಕೆಗೆ ಅನುಕೂಲವಾಗುತ್ತದೆ. ವಿದ್ಯಾರ್ಥಿಗಳು ನಿರಂತರವಾಗಿ ಸ್ಕೌಟ್ ಮತ್ತು ಗೈಡ್ ಶಿಬಿರಗಳಲ್ಲಿ ಪಾಲ್ಗೊಳ್ಳಬೇಕು ಎಂದರು.
ಶಿಬಿರಗಳಲ್ಲಿ ಭಾಗವಹಿಸುವುದ ರಿಂದ ಜಿ, ರಾಜ್ಯ, ರಾಷ್ಟ್ರಮಟ್ಟದ ವೇದಿಕೆಗಳಲ್ಲಿ ಪಾಳ್ಗೊಳ್ಳಲು ಅವಕಾಶ ದೊರೆಯುತ್ತದೆ. ರಾಜ್ಯ ಪುರಸ್ಕಾರ ಪಡೆದುಕೊಳ್ಳುವ ದಿಸೆಯಲ್ಲಿ ಮುನ್ನಡೆಯಬೇಕು. ಅಭ್ಯಾಸ ಶಿಬಿರಗಳ ಸಂಪೂರ್ಣ ಪ್ರಯೋಜನ ಪಡೆದುಕೊಳ್ಳಬೇಕು ಎಂದು ತಿಳಿಸಿದರು.
ಜಿ ಕಾರ್ಯದರ್ಶಿ ಎಚ್. ಪರಮೇಶ್ವರ್, ಜಂಟಿ ಕಾರ್ಯದರ್ಶಿ ವೀರೇಶಪ್ಪ, ರಾಜ್ಯ ಸಹಾಯಕ ಸಂಘಟನಾ ಆಯುಕ್ತೆ ಭಾರತಿ ಡಯಾಸ್, ಜಿ ಖಜಂಚಿ ಚೂಡಾಮಣಿ ಪವಾರ್, ಪಿಆರ್‌ಒ ಜಿ.ವಿಜಯ್‌ಕುಮಾರ್, ಎ.ವಿ. ರಾಜೇಶ್, ಎಚ್. ಶಿವಶಂಕರ್, ಎಚ್.ಜ್ಯೋತಿ, ಸಿ.ಎಂ.ಪರಮೇಶ್ವರ್, ವಿನಯ್, ಗೀತಾ ಹಾಗೂ ೨೦೦ಕ್ಕೂ ಹೆಚ್ಚು ಶಿಬಿರಾರ್ಥಿಗಳು ಪಾಲ್ಗೊಂಡಿದ್ದರು.