೧೩೦ ತಾಲೂಕು ಬರಗಾಲ ಪೀಡಿತ ಎಂದು ಘೋಷಿಸಿ: ರೈತ ಸಂಘದಿಂದ ಒತ್ತಾಯ
ಶಿವಮೊಗ್ಗ: ರಾಜ್ಯದ ೧೩೦ ತಾಲೂಕುಗಳನ್ನು ಬರಗಾಲ ಪೀಡಿತ ಎಂದು ಘೋಷಣೆ ಮಾಡಬೇಕು ಎಂದು ರೈತ ಸಂಘದ ರಾಜಧ್ಯಕ್ಷ ಹೆಚ್.ಆರ್. ಬಸವರಾಜಪ್ಪ ಸುದ್ದಿಗೋಷ್ಠಿಯಲ್ಲಿ ಆಗ್ರಹಿಸಿದರು.
ರಾಜ್ಯದಲ್ಲಿ ಮಳೆ ಇಲ್ಲದೆ ತೀವ್ರತರ ಬರಗಾಲವಿದೆ. ಸುಮಾರು ಒಂದು ತಿಂಗಳಿಂದ ಸರಿಯಾಗಿ ಮಳೆ ಬಂದಿಲ್ಲ. ಬೆಳೆ ಸಂಪೂರ್ಣ ನಾಶವಾಗಿದೆ. ಈಗ ಮಳೆ ಬಂದರೂ ಬೆಳೆ ಚೇತರಿಸಿ ಕೊಳ್ಳುವುದಿಲ್ಲ. ಕಂದಾಯ ಸಚಿವರೇ ೧೨೦ ತಾಲೂಕುಗಳಲ್ಲಿ ಬರಗಾಲದ ಛಾಯೆ ಇದೆ ಎಂದು ಹೇಳಿzರೆ. ಆದ್ದರಿಂದ ಸರ್ಕಾರ ೧೩೦ ತಾಲೂಕುಗಳನ್ನು ಬರಗಾಲ ಪೀಡಿತ ಎಂದು ಘೋಷಿಸಿ ಪರಿಹಾರ ರೂಪವಾಗಿ ಎಕರೆಗೆ ೨೫ ಸಾವಿರ ನೀಡಬೇಕು. ಫಸಲ್ ವಿಮಾ ಮಾಡಿಸಿದ ರೈತರಿಗೆ ಮಧ್ಯಂತರ ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು.
ಇದರ ಜೊತೆಗೆ ರೈತರ ಐಪಿ ಸೆಟ್‌ಗಳಿಗೆ ಹಗಲು ಹೊತ್ತು ಕನಿಷ್ಠ ೧೦ ಗಂಟೆಗಳ ಸಮರ್ಪಕ ವಿದ್ಯುತ್ ನೀಡಬೇಕು. ಐಪಿ ಸೆಟ್‌ಗಳಿಗೆ ಆಧಾರ್ ಕಾರ್ಡ್ ಜೋಡಣೆಗ ಒತ್ತಾಯಿಸಬಾರದು. ಇದರ ಹಿಂದೆ ಖಾಸಗೀಕರಣದ ಹುನ್ನಾರ ಅಡಗಿದೆ. ಆಧಾರ್ ಕಾರ್ಡ್ ಜೋಡಣೆ ಮಾಡಿದರೆ ಮುಂದೆ ಮೊಬೈಲ್‌ಗಳಿಗೆ ಕರೆನ್ಸಿ ಹಾಕಿಸಿ ಕೊಂಡು ಉಪಯೋಗಿಸುವ ರೀತಿಯಲ್ಲಿ ಬಳಸಬೇಕಾಗುತ್ತದೆ ಎಂದು ದೂರಿದರು.
ಅ.೨ರಂದು ತೆಂಗು ಬೆಳೆಗಾರ ರನ್ನು ಬೆಂಬಲಿಸಿ ಬೆಂಗಳೂರು ಚಲೋ ಕಾರ್ಯಕ್ರಮ ಹಮ್ಮಿಕೊಂ ಡಿದ್ದು, ರೈತರು ಹೆಚ್ಚಿನ ಪ್ರಮಾಣ ದಲ್ಲಿ ಭಾಗವಹಿಸುವಂತೆ ಕೋರಲಾಗಿದೆ. ಪದಾಧಿಕಾರಿಗ ಳಾದ ಎಸ್. ಶಿವಮೂರ್ತಿ, ಚಂದ್ರಪ್ಪ, ಹಿಟ್ಟೂರು ರಾಜು, ರಾಘವೇಂದ್ರ, ಮಂಜಪ್ಪ ಇದ್ದರು.