ಡಿ.೧೫: ಅವತರಿಸು ಬಾ ವಿಶೇಷ ಕಾರ್ಯಕ್ರಮ…

0
pm-sharada-sangeeta

ಶಿವಮೊಗ್ಗ : ಇಲ್ಲಿನ ಶ್ರೀ ಶಾರದಾ ಸಂಗೀತ ನೃತ್ಯ ವಿದ್ಯಾಲಯದ ವತಿಯಿಂದ ಡಿ.೧೫ರ ಸಂಜೆ ೬.೩೦ರಿಂದ ೮.೩೦ರವರೆಗೆ ಕುವೆಂಪು ರಂಗಮಂದಿರದಲ್ಲಿ ಅವತರಿಸು ಬಾ ಎಂಬ ವಿಶೇಷ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ವಿದ್ಯಾಲಯದ ಪ್ರಾಂಶುಪಾಲ ವಿದ್ವಾನ್ ಜಿ. ಅರುಣ್‌ಕುಮಾರ್ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ೩ರಿಂದ ೬೦ ವರ್ಷದವರಿಗಿನ ೧೦೦ಕ್ಕೂ ಹೆಚ್ಚು ವಿದ್ಯಾರ್ಥಿಗಳು ಹಾಡು, ನೃತ್ಯ ಹಾಗೂ ರೂಪಕದೊಂದಿಗೆ ರಂಗ ಮಂದಿರದ ಆವರಣದಲ್ಲಿ ಶ್ರೀ ಕೃಷ್ಣನ ಲೋಕದ ಅನಾವರಣ ಮಾಡುವ ವಿಭಿನ್ನ ಪ್ರಸ್ತುತಿ ಮೂಲಕ ಶ್ರೀ ಕೃಷ್ಣನ ಪರಿಪೂರ್ಣ ಜೀವನದ ಸಾರವನ್ನು ಈ ವಿಶೇಷ ಕಾರ್ಯಕ್ರಮದಲ್ಲಿ ನೀಡಲಿzರೆ ಎಂದರು.
ವಿದ್ಯಾಲಯದಿಂದ ಈಗಾಗಲೇ ರಾಜ್ಯಮಟ್ಟದ ಮನೋಧರ್ಮ ಸಂಗೀತ ಸ್ಪರ್ಧೆ, ಸೂರ್ಯೋದಯ ದಿಂದ ಸೂರ್ಯಾಸ್ತದವರೆಗೆ ನಿರಂತರ ನಡೆಸುವ ಸಂಗೀತ ಸೇರಿದಂತೆ ವಿವಿಧ ಕಾರ್ಯಕ್ರಮಗಳನ್ನು ಆಯೋಜಿ ಸಿದ್ದು, ಡಿ.೧೫ರಂದು ದ್ವಾಪರ ಯುಗದ ಆದಿಯಿಂದ ಅಂತ್ಯದ ವರೆಗೂ ಶ್ರೀ ಕೃಷ್ಣನ ಅವತಾರದ ಪರಿಪೂರ್ಣ ಚಿತ್ರಣವನ್ನು ನಿಖರ ವಾಗಿ ಎರಡು ಗಂಟೆಗಳ ಕಾರ್ಯಕ್ರಮದಲ್ಲಿ ವಿಭಿನ್ನ ರೀತಿ ಯಲ್ಲಿ ಕಟ್ಟಿಕೊಡುವ ಪ್ರಯತ್ನವಾಗಿದೆ ಎಂದರು.
ಶ್ರೀ ಕೃಷ್ಣ ಎಂದರೆ ಬೆಣ್ಣೆ ಕದಿಯುತ್ತಿದ್ದ, ನಾಟ್ಯವಾಡುತ್ತಿದ್ದ, ಕೊಳಲು ನುಡಿಸುತ್ತಿದ್ದ ಎಂಬ ಸಂಕುಚಿತ ಭಾವದಲ್ಲಿ ನೋಡುವ, ಮಾತಾಡುವ ಸಾಮಾನ್ಯರು ಶ್ರೀ ಕೃಷ್ಣನ ವ್ಯಕ್ತಿತ್ವದ ಪರಿಚಯವನ್ನು, ಮನುಷ್ಯನಾಗಿ ಅವತಾರ ತಾಳಿದ ಶ್ರೀಕೃಷ್ಣನ ಚಿಂತನೆಗಳನ್ನು ಅರಿತುಕೊಳ್ಳಲು ಈ ಕಾರ್ಯಕ್ರಮ ಸಹಕಾರಿಯೂ ಆಗಿದೆ ಎನ್ನಬಹುದು ಎಂದರು.
ನೃತ್ಯ ಸಂಯೋಜನೆಯನ್ನು ಕಥಕ್ ನೃತ್ಯ ಗುರುಗಳಾದ ವೀಣಾ ಅರುಣ್, ರೂಪಕಗಳನ್ನು ಪ್ರವೀಣ್ ಹಾಗೂ ಪವನ್ ಕಾರಂಜಿ ನಿರ್ವಹಿಸಿ zರೆ. ಸಂಗೀತ ಸಂಯೋಜನೆ ವಿದ್ವಾನ್ ಜಿ.ಅರುಣ್‌ಕುಮಾರ್ ಮಾಡಿದ್ದು, ನವನೀತ್ ಕೀಬೋರ್ಡ್ ಸಹಕಾರ ನೀಡಲಿದ್ದು, ರಾಘವೇಂದ್ರ ಪ್ರಭು ತಬಲಾದಲ್ಲಿ, ಅವಿನ್ ರಿದಂ ಪ್ಯಾಡ್‌ನಲ್ಲಿ ಹಾಗೂ ಶ್ರೀವತ್ಸ ಕೊಳಲು ವಾದನದಲ್ಲಿ ಸಹಕಾರ ನೀಡಲಿzರೆ ಎಂದರು.
ಕಲಾಸಕ್ತರು, ಕಲಾಪೋಷಕರು, ಸಾರ್ವಜನಿಕರು ಸಂಪೂರ್ಣ ಕಾರ್ಯಕ್ರಮವನ್ನು ವೀಕ್ಷಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿ ಕೊಡಬೇಕೆಂದು ಮನವಿ ಮಾಡಿಕೊಂಡರು.
ಪತ್ರಿಕಾಗೋಷ್ಠಿಯಲ್ಲಿ ವೀಣಾ ಅರುಣ್‌ಕುಮಾರ್, ಪವನ್ ಕಾರಂಜಿ, ಚಂದ್ರಶೇಖರ್ ಬಾಯರಿ, ಜ್ಯೋತಿ ಬಾಯಾರಿ, ನಾಗಶ್ರೀ, ಪ್ರತಿಮಾ ಶೇಟ್, ಸೌಜನ್ಯ, ಶಿಲ್ಪ, ವೀಣಾ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *