ಡಿ.೧೪:ಶ್ರೀ ಕನಕದಾಸರ ಕೀರ್ತನೋತ್ಸವ- ಗೀತಗಾಯನ ಸ್ಪರ್ಧೆ…

0
pm-patanjali

ಶಿವಮೊಗ್ಗ : ಶ್ರೀ ಕನಕದಾಸರ ೫೩೭ನೇ ಜಯಂತ್ಯೋತ್ಸವ ಮತ್ತು ಪತಂಜಲಿ ಸಂಸ್ಥೆಯ ೨೭ನೇ ವರ್ಷದ ಅಂಗ ವಾಗಿ ಡಿ.೧೪ರಂದು ಬೆಳಿಗ್ಗೆ ೯ಗಂಟೆ ಯಿಂದ ಕುವೆಂಪು ರಂಗಮಂದಿರ ದಲ್ಲಿ ರಾಜ್ಯಮಟ್ಟದ ಶ್ರೀ ಕನಕ ದಾಸರ ಕೀರ್ತನೋತ್ಸವ ಗೀತಾ ಗಾಯನ ಸ್ಪರ್ಧೆ ಆಯೋಜಿಸಲಾ ಗಿದೆ ಎಂದು ಯೋಗಾಚಾರ್ಯ ಪತಂಜಲಿ ಜೆ.ನಾಗರಾಜ್ ಸುದ್ದಿಗೋಷ್ಟಿಯಲ್ಲಿ ತಿಳಿಸಿದರು.
ಅಂದು ರಾಜ್ಯಮಟ್ಟದ ಕನಕ ಕಥಾಕೀರ್ತನ ಮಹೋತ್ಸವ ಸಮ್ಮೇಳನ ತರಬೇತಿ ಕಾರ್ಯಾಗಾರ ಹಾಲುಮತ ಸಂಸ್ಕೃತಿ ಕನಕ ಕಲಾ ವೈಭವ ಗೀತಾಗಾಯನ ನೃತ್ಯ ರೂಪಕ ವೈವಿಧ್ಯಮಯ ಸಾಂಸ್ಕೃತಿಕ ಕಾರ್‍ಯಕ್ರಮ ಆಯೋಜಿಸಿದೆ ಎಂದರು.
೨೭ ಕಲಾ ತಂಡದ ೪೦೦ ಜನ ಕಲಾವಿದರ ಮೂಲಕ ರಾಜ್ಯ ಮಟ್ಟದ ಶ್ರೀ ಕನಕದಾಸರ ಗೀತಾ ಗಾಯನ ಸ್ಪರ್ಧೆಯಲ್ಲಿ ಶಿವಮೊಗ್ಗ ಚಿಕ್ಕಮಗಳೂರು ದಾವಣಗೆರೆ ಚಿತ್ರದುರ್ಗ ಬಳ್ಳಾರಿ ಜಿಯಿಂದ ಕಲಾವಿದರು ಸ್ಪರ್ಧೆಯಲ್ಲಿ ಭಾಗವ ಹಿಸಲಿzರೆ. ಶ್ರೀ ಕನಕದಾಸರ ತತ್ವ ಆದರ್ಶ ಕೀರ್ತನೆಗಳನ್ನು ಮುಂದಿನ ಪೀಳಿಗೆಗೆ ಉಳಿಸಿ ಬೆಳೆಸುವ ಅಭಿಯಾನ ಆಯೋಜಿಸಲಾಗಿದೆ ಎಂದರು.
ಕನಕ ಗುರುಪೀಠ ಹೊಸದುರ್ಗ ಶಾಖಾಮಠದ ಶ್ರೀ ಈಶ್ವರಾನಂದಪುರಿ ಮಹಾ ಸ್ವಾಮೀಜಿ ಕಾರ್ಯಕ್ರಮ ಉದ್ಘಾಟಿಸಲಿದ್ದು, ಪತಂಜಲಿ ಸಂಸ್ಥೆ ಗೌರವ ಅಧ್ಯಕ್ಷ ಎಂ.ಈಶ್ವರಪ್ಪ ನವುಲೆ ಅಧ್ಯಕ್ಷತೆ ವಹಿಸಲಿದ್ದಾರೆ.
ಜಿ ಉಸ್ತುವಾರಿ ಸಚಿವ ಮಧುಬಂಗಾರಪ್ಪ, ಸಂಸದ ಬಿ.ವೈ. ರಾಘವೇಂದ್ರ, ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಸೇರಿದಂತೆ ರಾಜಕೀಯ ಗಣ್ಯರು ಪಾಲ್ಗೊಳ್ಳುವರು ಎಂದರು.
ಅಪರೂಪದ ವನ್ಯಜೀವಿ ಪರಿಸರ ಛಾಯಾಚಿತ್ರ ಪ್ರದರ್ಶನ ಶಿವಮೊಗ್ಗ ನಾಗರಾಜ್ (ಪ್ರಜವಾಣಿ), ಕೆ.ಪಿ. ಪೂರ್ಣಚಂದ್ರ ತೇಜಸ್ವಿ ವನ್ಯಜೀವಿ ಛಾಯಾಗ್ರಾಹಕರ ಬಳಗ ತೀರ್ಥಹಳ್ಳಿ, ಮಂಡಗz ನಟರಾಜ್, ಡಿ.ಬಿ.ಹಳ್ಳಿ, ತೀರ್ಥಹಳ್ಳಿ ವಿನಾಯಕ್ ಗುಜ್ಜರ್, ಸತೀಶ್ ಸಾಗರ, ವಸುಮ ಮಂಜುನಾಥ್ ಶಿವಮೊಗ್ಗ, ನಾಗರಾಜ್ ಡಿ.ಬಿ.ಹಳ್ಳಿ, ಭದ್ರಾವತಿ, ಪ್ರದೀಪ್ ಕುಣಿಬೈಲ್, ತೀರ್ಥಹಳ್ಳಿ ಇವರಿಂದ ಏರ್ಪಡಿಲಾಗಿದೆ ಎಂದರು.
ಪತಂಜಲಿ ಸಂಸ್ಥೆ ಗೌರವ ಉಪಾಧ್ಯಕ್ಷ ದಿ| ಕೆ.ದೇವೇಂದ್ರಪ್ಪ ಸ್ಮರಣಾರ್ಥ ಡಾ| ಡಿ.ಗೋಪಾಲ್ ಮತ್ತು ತಂಡ ಸಹ್ಯಾದ್ರಿ ನಾರಾಯಣ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಇವರಿಂದ ಕಲಾವಿದರಿಗೆ ಉಚಿತ ಆರೋಗ್ಯ ತಪಾಸಣಾ ಶಿಬಿರ ಏರ್ಪಡಿಸಲಾ ಗಿದ್ದು, ವಿವಿಧ ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸಿದ ಸಾಧಕರಿಗೆ ಕನಕಶ್ರೀ ಚೇತನ ಪತಂಜಲಿ ರತ್ನ ರಾಜ್ಯ ಪ್ರಶಸ್ತಿಯನ್ನು ಪ್ರಧಾನ ಮಾಡಿ ಸನ್ಮಾನಿಸಲಾಗುವುದು ಎಂದರು.
ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ಎಂ. ಈಶ್ವರಪ್ಪ ನವುಲೆ, ಡಾ. ಪಿ.ಬಾಲಪ್ಪ, ಎಂ. ಪೂವಯ್ಯ, ಪರಿಸರ ಸಿ.ರಮೇಶ್, ಸುಶೀಲ ಭವಾನಿಶಂಕರ್‌ರಾವ್, ಭವಾನಿಶಂಕರ್‌ರಾವ್, ನರಸಿಂಹ ಮೂರ್ತಿ, ಸರಳಾವಾಸನ್, ಶೋಭಾ ಅನಂದ್, ಸೌಭಾಗ್ಯ ಇನ್ನಿತರರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *