ಡಿ.೧೩: ಕೋರ್ಟ್‌ನಲ್ಲಿ ವಕೀಲ ದಿ|ಮಧು ಅವರ ಭಾವಚಿತ್ರ ಅನಾವರಣ…
ಶಿವಮೊಗ್ಗ : ರಾಷ್ಟ್ರೀಯ ಶಿಕ್ಷಣ ಸಮಿತಿ ಹಾಗೂ ಸಿ.ಬಿ.ಆರ್ ಕಾನೂನು ಮಹಾ ವಿದ್ಯಾಲಯದ ವತಿಯಿಂದ ಡಿ. ೧೩ರ ನಾಳೆ ಬೆಳಿಗ್ಗೆ ೧೦.೩೦ಕ್ಕೆ ಕಾಲೇಜಿನ ಚಂದನ ಸಭಾಂಗಣದಲ್ಲಿ ವಿಶೇಷ ಉಪನ್ಯಾಸ ಕಾರ್ಯಕ್ರಮ ಏರ್ಪಡಿಸಲಾಗಿದೆ.
ಕಾರ್ಯಕ್ರಮದಲ್ಲಿ ಸಾರ್ವಜನಿಕ ಆಡಳಿತದಲ್ಲಿ ಲೋಕಾಯುಕ್ತರ ಪಾತ್ರ ಕುರಿತಾಗಿ ಕರ್ನಾಟಕ ಉಪ ಲೋಕಾಯುಕ್ತ ನ್ಯಾ. ಕೆ.ಎನ್. ಫಣೀಂದ್ರ ಮಾತನಾಡಲಿದ್ದಾರೆ. ಎನ್‌ಇಎಸ್ ಅಧ್ಯಕ್ಷ ಜಿ.ಎಸ್. ನಾರಾಯಣರಾವ್, ಕಾರ್‍ಯದರ್ಶಿ ಎಸ್.ಎನ್. ನಾಗರಾಜ, ಕಾಲೇಜಿನ ಪ್ರಾಂಶುಪಾಲೆ ಡಾ. ಎ.ಅನಲ ಭಾಗವಹಿಸಲಿದ್ದಾರೆ.
ವಕೀಲ ಜಿ. ಮಧು ಭಾವಚಿತ್ರ ಅನಾವರಣ : ಜಿಲ್ಲಾ ವಕೀಲರ ಸಂಘದಲ್ಲಿ ಸಕ್ರಿಯರಾಗಿದ್ದ ಹಾಗೂ ಖ್ಯಾತ ವಕೀಲರಾಗಿದ್ದ ಜಿ.ಮಧು ಅವರ ನೆನಪಿಗಾಗಿ ಕಿರಿಯ ವಕೀಲರ ಬಳಗ ಮತ್ತು ಕುಟುಂಬಸ್ಥರ ವತಿಯಿಂದ ಡಿ. ೧೩ರ ನಾಳೆ ಸಂಜೆ ೬.೩೦ಕ್ಕೆ ಜಿಲ್ಲಾ ನ್ಯಾಯಾಲಯದ ಆವರಣದಲ್ಲಿ ಜಿ.ಮಧು ಅವರ ಭಾವಚಿತ್ರ ಅನಾವರಣ ಕಾರ್ಯಕ್ರಮ ಏರ್ಪಡಿಸಲಾಗಿದೆ.
ರಾಜ್ಯ ಉಪಲೋಕಾಯುಕ್ತ ನ್ಯಾಯಮೂರ್ತಿ ಕೆ.ಎನ್. ಫಣೀಂದ್ರ ಭಾವಚಿತ್ರ ಅನಾವರಣ ಗೊಳಿಸಲಿದ್ದು, ಅತಿಥಿಗಳಾಗಿ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಮಂಜುನಾಥ ನಾಯಕ್ ಭಾಗವಹಿಸಲಿದ್ದಾರೆ. ಹಿರಿಯ ವಕೀಲರಾದ ಜಿ.ಎಸ್. ನಾಗರಾಜ, ಎನ್. ದೇವೇಂದ್ರಪ್ಪ ಉಪಸ್ಥಿತರಿರುವರು. ವಕೀಲರ ಸಂಘದ ಅಧ್ಯಕ್ಷ ಜಿ.ಆರ್. ರಾಘವೇಂದ್ರ ಸ್ವಾಮಿ ಅಧ್ಯಕ್ಷತೆ ವಹಿಸಲಿದ್ದಾರೆ.
ಇದಕ್ಕೂ ಮುನ್ನ ವಿದುಷಿ ವಿಜಯ ಲಕ್ಷ್ಮೀ ಅವರಿಂದ ವೀಣಾ ವಾದನ ನಡೆಯಲಿದ್ದು, ಎಲ್ಲಾ ವಕೀಲ ವೃಂದ ದವರು ಹಾಗೂ ಜಿ.ಮಧು ಹಿತೈಷಿಗಳು ಭಾಗವಹಿಸಲು ಕೋರಲಾಗಿದೆ.