ಮಾದಕ ವಸ್ತುಗಳ ನಿಯಂತ್ರಣಕ್ಕೆ ಡಿಸಿ ಸೂಚನೆ
ಶಿವಮೊಗ್ಗ : ಮಾದಕ ಪದಾ ರ್ಥಗಳ ಉತ್ಪಾದನೆ, ಸಾಗಾಟ, ಮಾರಾಟ, ವಿತರಣೆ ಹಾಗೂ ಇದರ ದುರ್ಬಳಕೆಯನ್ನು ತಡೆಗ ಟ್ಟುವ ನಿಟ್ಟಿನಲ್ಲಿ ಜಿಯ ಎ ಇಲಾಖೆಗಳ ಅಧಿಕಾರಿಗಳೊಂದಿಗೆ ಸಾರ್ವಜನಿಕರೂ ಸಹಕರಿಸುವಂತೆ ಜಿಧಿಕಾರಿ ಡಾ|| ಆರ್. ಸೆಲ್ವಮಣಿ ಅವರು ಹೇಳಿದರು.
ಅವರು ಇಂದು ತಮ್ಮ ಕಚೇರಿ ಸಭಾಂಗಣದಲ್ಲಿ ಮಾದಕ ವಸ್ತುಗಳ ನಿಯಂತ್ರಣದ ಕುರಿತಾಗಿ ಏರ್ಪ ಡಿಸಲಾಗಿದ್ದ ಜಿ ಮಟ್ಟದ ವಿವಿಧ ಇಲಾಖಾಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡು ತ್ತಿದ್ದರು. ಮಾದಕ ವಸ್ತುಗಳಿಂದಾ ಗುವ ಪರಿಣಾಮಗಳ ಬಗ್ಗೆ ಜನರಲ್ಲಿ ಜಗೃತಿ ಮೂಡಿಸುವ ಬಗ್ಗೆ ವಿವಿಧ ಇಲಾಖೆಗಳ ತಮ್ಮ ಕಾರ್ಯಕ್ಷೇತ್ರದ ವ್ಯಾಪ್ತಿಯಲ್ಲಿ ಕಾರ್ಯಕ್ರಮಗಳನ್ನು ರೂಪಿಸಿ ಅನುಷ್ಠಾನಗೊಳಿಸುವಂತೆ ಅವರು ಸಲಹೆ ನೀಡಿದರು.
ಶಾಲಾ-ಕಾಲೇಜುಗಳಲ್ಲಿ ಮತ್ತು ಹಾಸ್ಟೆಲ್ ವಿದ್ಯಾರ್ಥಿಗಳು ಮಾದಕ ಪದಾರ್ಥಗಳ ಸೇವನೆ ಯಲ್ಲಿ ತೊಡಗಿದ್ದರೆ ಮಾಹಿತಿ ನೀಡಬೇಕು. ಇದರ ವಿತರಣೆ ಮತ್ತು ಸರಬರಾಜು ಆಗುತ್ತಿರುವ ಬಗ್ಗೆ ಮಾಹಿತಿ ಸಂಗ್ರಹಿಸಿ ಮಾಹಿತಿ ನೀಡಬೇಕು ಇದರ ಬಗ್ಗೆ ಆಯಾ ಶಾಲಾ-ಕಾಲೇಜುಗಳ ಪ್ರಾಂಶುಪಾ ಲರಿಂದ ಮಾಹಿತಿ ಪಡೆಯಬೇಕು ಹಾಗೂ ವಿದ್ಯಾರ್ಥಿಗಳಲ್ಲಿ ಜಗೃತಿ ಮೂಡಿಸಲು ಕ್ರಮ ಕೈಗೊಳ್ಳು ವಂತೆ ಸೂಚಿಸಿದರು.
ಜಿಯ ಬಹುತೇಕ ಎ ಜಿಗಳಲ್ಲಿ ಗಾಂಜ ಬೆಳೆ ಬೆಳೆದ ಪ್ರಕರಣಗಳು ದಾಖಲಾಗಿರುವು ದನ್ನು ಗಮನಿಸಲಾಗಿದೆ. ವಿಶೇಷ ವಾಗಿ ಶಿಕಾರಿಪುರ, ಸೊರಬ, ಆನವಟ್ಟಿ, ಶಿರಾಳಕೊಪ್ಪ, ಕುಂಸಿ, ಶಿವಮೊಗ್ಗ ಗ್ರಾಮಾಂತರ, ಭದ್ರಾ ವತಿ ಗ್ರಾಮಾಂತರ, ರಿಪ್ಪನ್ ಪೇಟೆ, ಸಾಗರ ಗ್ರಾಮಾಂತರ ಹಾಗೂ ಹೊಸನಗರ ಪ್ರದೇಶಗಳ ವ್ಯಾಪ್ತಿಯಲ್ಲಿ ಗಾಂಜ ಅಕ್ರಮ ಸಾಗುವಳಿಯನ್ನು ಜಿಡಳಿತ ಗಂಭೀರವಾಗಿ ಪರಗಣಿಸಿದ್ದು, ಅದರ ನಿಯಂತ್ರಣಕ್ಕೆ ಕಠಿಣ ಕ್ರಮ ಕೈಗೊಳ್ಳಲು ಹಾಗೂ ನಿಗಾ ವಹಿ ಸಲು ಸಂಬಂಧಿತ ಎ ಇಲಾ ಖೆಗಳ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ ಎಂದರು.
ಈ ಭಾಗಗಳ ಅರಣ್ಯ ಪ್ರದೇಶ ಗಳಲ್ಲಿ ಅರಣ್ಯಕ್ಕೆ ಹೊಂದಿಕೊಂಡಂ ತಿರುವ ಜಮೀನುಗಳಲ್ಲಿ, ಅಕ್ರಮ ವಾಗಿ ಸಾಗುವಳಿ ಮಾಡುತ್ತಿರುವ ಜಮೀನುಗಳಲ್ಲಿ ಶುಂಠಿ, ಮೆಕ್ಕೆ ಜೋಳ ಸೇರಿದಂತೆ ಇತರೆ ಬೆಳೆಗ ಳೊಂದಿಗೆ ಸಾಗುವಳಿ ಮಾಡುತ್ತಿರು ವುದನ್ನು ಗುರುತಿಸಿ, ಪ್ರಕರಣಗ ಳನ್ನು ದಾಖಲಿಸಲಾಗಿದೆ ಎಂದ ಅವರು, ಪ್ರಕರಣಗಳನ್ನು ನಿರಂ ತರವಾಗಿ ದಾಖಲಿಸುತ್ತಿರುವು ದರಿಂದ ಗಾಂಜ ಅಕ್ರಮ ಸಾಗು ವಳಿಯ ಪ್ರಮಾಣ ಕಡಿಮೆಯಾ ಗಿದೆ ಎಂದರು.
ಶಾಲಾ-ಕಾಲೇಜುಗಳಲ್ಲಿ ಮಾದಕ ಪದಾರ್ಥ ದುರ್ಬಳಕೆಯ ಕುರಿತಾಗಿ ಜಗೃತ ಮೂಡಿಸಲು ಕಾರ್ಯಕ್ರಮಗಳನ್ನು ಆಯೋಜಿ ಸುವಂತೆ ಪದವಿಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕರು ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರಿಗೆ ಜಿಧಿಕಾರಿಗಳು ಸೂಚಿಸಿದರು.
ಗಾಂಜ ಅಕ್ರಮ ಸಾಗುವಳಿ ಮಾಡುತ್ತಿರುವ ಪ್ರದೇಶಗಳಲ್ಲಿ ಅಭಿವೃದ್ಧಿ ಯೋಜನೆಗಳನ್ನು ಅನು ಷ್ಠಾನಗೊಳಿಸಲು ಕ್ರಮ ಕೈಗೊಳ್ಳು ವಂತೆ ಹಾಗೂ ಜಿಯಲ್ಲಿನ ಮಾದಕ ವ್ಯಸನ ವಿಮುಕ್ತಿ ಮತ್ತು ಪುನರ್ವಸತಿ ಕೇಂದ್ರಗಳ ಉಸ್ತು ವಾರಿ ವಹಿಸುವ ಬಗ್ಗೆಯೂ ಅವರು ಸೂಚಿಸಿದರು.
ಈ ಕಾರ್ಯದಲ್ಲಿ ಶಿಕ್ಷಣ, ಅರಣ್ಯ, ಕಂದಾಯ, ಆರೋಗ್ಯ, ಔಷಧ ನಿಯಂತ್ರಣ, ಕೃಷಿ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ತಮ್ಮ ಕಾರ್ಯ ಕ್ಷೇತ್ರದಲ್ಲಿ ಜವಾಭ್ದಾರಿಯರಿತು ಕಾರ್ಯನಿರ್ವಹಿಸಬೇಕು ಎಂದರು.
ಸಭೆಯಲ್ಲಿ ಜಿ ಪೊಲೀಸ್ ವರಿಷ್ಠಾಧಿಕಾರಿ ಜಿ.ಕೆ.ಮಿಥುನ್ ಕುಮಾರ್, ಜಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ|| ರಾಜೇಶ್ಸುರಗೀಹಳ್ಳಿ, ಔಷಧ ನಿಯಂತ್ರಣಾಧಿಕಾರಿ ಡಾ|| ವೀರೇಶ್ಬಾಬು ಸೇರಿದಂತೆ ವಿವಿಧ ಇಲಾಖೆಗಳ ಜಿ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.