ಶಿವಮೊಗ್ಗ: ಮಾಜಿ ಸಿಎಂ ಡಿ. ದೇವರಾಜ ಅರಸು ರವರ ೪೧ನೇ ವರ್ಷದ ಪುಣ್ಯಸ್ಮರಣೆ ನಿಮಿತ್ತವಾಗಿ ಜಿ ಕಾಂಗ್ರೆಸ್ ಸಮಿತಿ ಕಚೇರಿ ಯಲ್ಲಿ ಅರಸು ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಗೌರವ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಅರಸು ಅವರ ಸೇವೆ ಮತ್ತು ಸಾಧನೆಗಳನ್ನು ಸ್ಮರಿಸಿ ನುಡಿನಮನ ಸಲ್ಲಿಸಲಾ ಯಿತು.
ಕಾರ್ಯಕ್ರಮದಲ್ಲಿ ಜಿ ಕಾಂಗ್ರೆಸ್ ಸಮಿತಿ ಉಪಾಧ್ಯಕ್ಷ ಖಾಜಿ ಉಸ್ಮಾನ್ ಅಧ್ಯಕ್ಷತೆ ವಹಿಸಿ ದ್ದರು. ಕೆಪಿಸಿಸಿ ಸಂಯೋಜಕ ಸಿ.ಎಸ್. ಚಂದ್ರಭೂಪಾಲ್, ಶಿವಮೊಗ್ಗ ಜಿ ಕಾಂಗ್ರೆಸ್ ಸಮಿತಿ ಉಪಾಧ್ಯಕ್ಷ ಶ್ರೀಧರ ಮೂರ್ತಿ ನವಲೆ, ಎ.ಕೆ. ನಿಂಗಪ್ಪ, ಎಸ್.ಟಿ. ಚಂದ್ರಶೇಖರ್, ಪ್ರಧಾನ ಕಾರ್ಯದರ್ಶಿಗಳು ಮಹಮದ್ ಇಕ್ಬಾಲ್ ನೇತಾಜಿ, ಜಿ.ಕೆ. ವಸಂತಕುಮಾರ್ ಜಿ ಹಿಂದುಳಿದ ವರ್ಗಗಳ ವಿಭಾಗದ ಅಧ್ಯಕ್ಷರು ಇಕ್ಕೆರಿ ರಮೇಶ್, ಪರಿಶಿಷ್ಟ ಜತಿ ವಿಭಾಗದ ಅಧ್ಯಕ್ಷ ಟಿ.ಕೃಷ್ಣಪ್ಪ, ಕಾಂಗ್ರೆಸ್ ಪ್ರಮುಖ ರಾದ ಡಾ. ತಾನಾಜಿ, ಎನ್. ಮಂಜುನಾಥ್, ಸಿದ್ದಪ್ಪ, ಎಂ.ಪಿ. ದಿವಾಕರ, ಸಿ.ಎಂ. ಪ್ರದೀಪ್ ಕುಮಾರ್, ಎನ್.ಟಿ. ಕುಮಾರ್, ಮಹ್ಮದ್ ಬಾಷ, ಟಾಕ್ಯಾನಾಯ್ಕ, ಮಹಿಳಾ ಪ್ರಮುಖರಾದ ಸ್ಟೆ ಮಾರ್ಟಿನ್, ಸಂಧ್ಯಾ ರಾಣಿ, ಚಂದ್ರಕಲಾ ಇದ್ದರು.