ಶೈಕ್ಷಣಿಕವಾಗಿ ಪ್ರತಿಭಾವಂತರಾಗಲು ಸಂಸ್ಕೃತಿ- ಸಂಸ್ಕಾರ ಅಗತ್ಯ: ದಿನಕರ್

ದಾವಣಗೆರೆ: ಪ್ರಸ್ತುತ ದಿನಮಾನಗಳಲ್ಲಿ ವಿದ್ಯಾಭ್ಯಾಸವು ಕೇವಲ ಅಂಕಪಟ್ಟಿ -ಪದವಿಗಳಿಗೆ ಸೀಮಿತವಾಗಿದೆ. ನಮ್ಮ ಸಮುದಾಯದ ಸಂಸ್ಕಾರ, ಸಂಸ್ಕೃತಿ ಸಭ್ಯತೆಗಳು ಶೈಕ್ಷಣಿಕ ಸಾಧನೆಗಳಿಗೆ ಪೂರಕವಾಗುತ್ತದೆ. ನಾವು ನಮ್ಮ ಕುಟುಂಬ ಕೇವಲ ಹೊಟ್ಟೆಪಾಡಿಗೆ ಸೀಮಿತವಾಗಿದೆ ಸಾಮಾಜಿಕ ಕಾಳಜಿಯ ಮಾನವೀಯ ಮೌಲ್ಯದ ವಿಶಾಲ ಮನೋಭಾವನೆಯೊಂದಿಗೆ ನಾವುಗಳು ಸಂಕುಚಿತ ಭಾವನೆ ಬಿಟ್ಟು ಕಾಯಕ ಮಾಡಿದಾಗ ನಮ್ಮ ಜೀವನದ ಅಭಿವೃದ್ಧಿಯ ಜತೆಗೆ ನಮ್ಮ ಕುಟುಂಬಕ್ಕೆ ಸಾರ್ಥಕತೆ ಬರುತ್ತದೆ ಎಂದು ಅಖಿಲ ಭಾರತ ದೈವಜ್ಞ ಸಮಾಜದ ರಾಷ್ಟ್ರಾಧ್ಯಕ್ಷ ದಿನಕರ ಶಂಕರ ಬೈಕೇರಿಕರ್ ತಮ್ಮ ಅಭಿಮತ ವ್ಯಕ್ತಪಡಿಸಿದರು.
ಇಲ್ಲಿನ ಶ್ರೀಮತಿ ಗೌರಮ್ಮ ನರಹರಿ ಶೇಟ್ ಸಭಾ ಭವನದಲ್ಲಿ ಶ್ರೀಮತಿ ಪ್ರೇಮಾ ಅರುಣಾಚಲ ಎನ್. ರೇವಣಕರ್ ಪ್ರತಿಷ್ಠಾನ ಹಮ್ಮಿಕೊಂಡ ೨೦೨೨-೨೩ನೇ ಸಾಲಿನ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದ ದೈವಜ್ಞ ಬ್ರಾಹ್ಮಣ ಸಮುದಾಯದ ಪ್ರತಿಭಾವಂತ ವಿದ್ಯಾರ್ಥಿ-ವಿದ್ಯಾರ್ಥಿನಿಯರಿಗೆ ಶಾರದಾ ಪುರಸ್ಕಾರ ರಾಜ್ಯ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಕರ್ನಾಟಕದ ಸುಮಾರು ೧೪೫ಕ್ಕೂ ಹೆಚ್ಚು ಪ್ರತಿಭಾವಂತ ವಿದ್ಯಾರ್ಥಿ-ವಿದ್ಯಾರ್ಥಿನಿಯರಿಗೆ ಕನ್ನಡ ಕಂಕಣಕಟ್ಟಿ ಕನ್ನಡಾರತಿ ಬೆಳಗಿ, ಕನ್ನಡ ತಿಲಕವಿಟ್ಟು, ಮಂಗಳವಾದ್ಯ, ಪೂರ್ಣಕುಂಭ ಸ್ವಾಗತದ ಮೆರವಣಿಗೆಯಲ್ಲಿ ಕರೆತಂದು ವೇದಿಕೆಯ ಪ್ರತ್ಯೇಕವಾಗಿ ಮಂಟಪದ ಸಿಂಹಾಸನದಲ್ಲಿ ಕೂರಿಸಿ ಪುಷ್ಪವೃಷ್ಟಿಯೊಂದಿಗೆ ಮಸ್ತಕದ ಮೇಲೆ ಕಿರೀಟವಿಟ್ಟು ಪುಷ್ಪವೃಷ್ಠಿ ಯೊಂದಿಗೆ ಸನ್ಮಾನಿಸಲಾಯಿತು.
ಅಧ್ಯಕ್ಷತೆಯನ್ನು ಪ್ರತಿಷ್ಥಾನದ ಸಂಸ್ಥಾಪಕ ಡಾ. ನಲ್ಲೂರು ಅರುಣಾಚಲ ಎನ್. ರೇವಣಕರ್ ವಹಿಸಿಕೊಂಡಿದ್ದರು. ಪ್ರತಿಷ್ಥಾನದ ನಿರ್ದೆಶP ನಲ್ಲೂರು ಲಕ್ಷ್ಮಣ್ ರಾವ್ ಸ್ವಾಗತಿಸಿದರು, ಕಸಾಪ ಮಂಗಳೂರಿನ ಘಟಕದ ಅಧ್ಯಕ್ಷ ಡಾ.ಮಂಜುನಾಥ್ ಎಸ್. ರೇವಣಕರ್, ದಾವಣಗೆರೆ ದೈವಜ್ಞ ಸಮಾಜದ ನೂತನ ಅಧ್ಯಕ್ಷ ಪ್ರಶಾಂತ ವಿಶ್ವನಾಥ್ ವರ್ಣೇಕರ್, ಗೋವಾದ ರೇವಣದ ಶ್ರೀ ವಿಮಲೇಶ್ವರ ದೇವಸ್ಥಾನದ ಸಮಿತಿ ಅಧ್ಯಕ್ಷ ರಾಮನಾಥ ಪ್ರಭು ದೇಸಾಯಿ ಮುಖ್ಯ ಅತಿಥಿಗಳಾಗಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಶ್ರೀಮತಿ ಗೌರಮ್ಮ ನರಹರಿ ರೇವಣಕರ್ ಪ್ರತಿಷ್ಠಾನದ ಅಧ್ಯಕ್ಷ ನಲ್ಲೂರು ಬಿ.ಎನ್.ನಾಗರಾಜ್ ರೇವಣಕರ್, ಪ್ರತಿಷ್ಠಾನದ ಅಧ್ಯಕ್ಷರಾದ ಪ್ರೇಮಾ ಅರುಣಾಚಲ ಎನ್. ರೇವಣಕರ್ ಉಪಸ್ಥಿತರಿ ದ್ದರು. ಕಲಾಕುಂಚ ಸಂಸ್ಥಾಪಕರಾದ ಸಾಲಿಗ್ರಾಮ ಗಣೇಶ್‌ಶೆಣೈ ಕಾರ್ಯಕ್ರಮ ನಿರೂಪಿಸಿದರು, ಅನಿತಾ ರಾಜೇಶ್ ಪಾವಸ್ಕರ್ ವಂದಿಸಿದರು.
ವೈದ್ಯಕೀಯ, ಶೈಕ್ಷಣಿಕ, ಸಾಹಿತ್ಯಿಕ ಸಾಧಕರಾದ, ಯುವ ಪ್ರತಿಭೆಗಳಾದ ಡಾ|| ಸೋನಿಯಾ ದೇವಿದಾಸ್ ಪಾವಸ್ಕರ್, ಸೋನಿಯಾ ರಾಜೇಶ್ ಪಾವಸ್ಕರ್, ಸಹನಾ ಬೈರೇಶ್ವರ ಶೇಟ್ ಇವರುಗಳನ್ನು ಗೌರವಿಸಿ ಸನ್ಮಾನಿಸಲಾಯಿತು.