ಸಾಂಸ್ಕೃತಿಕ ಚಟುವಟಿಕೆಗಳಿಂದ ಸಂಸ್ಕೃತಿ ಉಳಿವು ಸಾಧ್ಯ …

ಶಿವಮೊಗ್ಗ: ನಾಡು, ನುಡಿ, ದೇಶ, ಭಾಷೆಯ ಸಂಸ್ಕೃತಿ ಉಳಿದು, ಬೆಳೆಯುವುದೇ ಸಾಂಸ್ಕೃತಿಕ ಚಟುವಟಿಕೆಗಳಿಂದ. ಆದರೆ, ಇಂದಿನ ಯುವ ಪೀಳಿಗೆ ದೂರವಾಗುತ್ತಿರುವುದು ಬೇಸರದ ಸಂಗತಿ ಎಂದು ರಾಜ್ಯೋತ್ಸವ ಪುರಸ್ಕೃತ ವೈದ್ಯ ಸಾಹಿತಿ ಡಾ . ಮೋಹನ್ ಹೇಳಿದರು .
ಶಿವಮೊಗ್ಗ ಶಾಖೆಯ ಭಾರತೀಯ ವೈದ್ಯಕೀಯ ಸಂಘದ ಸಾಂಸ್ಕೃತಿಕ ಸಂಜೆ – ಹುಣ್ಣಿಮೆ ವೈಭವ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಮಾತನಾಡಿದ ಅವರು, ಐಎಂಎ ಶಿವಮೊಗ್ಗ ಆ ನಿಟ್ಟಿನಲ್ಲಿ ಸದಸ್ಯರ ಹಾಗು ಅವರ ಕುಟುಂಬದವರಿಗೆ ತಮ್ಮ ಪ್ರತಿಭೆ ಅನಾವರಣಗೊಳಿಸಲು ಒಳ್ಳೆಯ ವೇದಿಕೆ ಕಲ್ಪಿಸಿದೆ, ಹಾಗೆಯೇ ಕಿರಿಯ ಮತ್ತು ಹಿರಿಯ ಸದಸ್ಯರು, ಪುಟಾಣಿ ಮಕ್ಕಳ ಭಾಗವಹಿಸುವಿಕೆ ಯನ್ನು ಶ್ಲಾಸಿದರು. ಹಾಡು, ಮೂಕ ನಾಟಕ, ಸ್ಟಾಂಡ್ ಅಪ್ ಕಾಮಿಡಿ , ನೃತ್ಯ , ವಾದ್ಯಸಂಗೀತ , ಯಕ್ಷಗಾನ , ಫ್ಯಾಷನ್ ಷೋ ಮುಂತಾದ ಕಾರ್ಯಕ್ರಮಗಳ ನ್ನೊಳಗೊಂಡ ವರ್ಣರಂಜಿತ ಕಾರ್‍ಯಕ್ರಮ ಐಎಂಎ ಹಾಲ್ ಹೊರಾಂಗಣದಲ್ಲಿ ನಡೆದು ಹುಣ್ಣಿಮೆ ಚಂದಿರನ ಬೆಳದಿಂಗಳ ರಂಗೇರಿಸಿತು .

ಅಧ್ಯಕ್ಷತೆ ವಹಿಸಿ ಮಾತನಾಡಿದ ಐಎಂಎ ಅಧ್ಯಕ್ಷ ಡಾ . ಅರುಣ್ ಎಂ .ಎಸ್, ವೈದ್ಯ ಬಳಗದ ಒತ್ತಡದ ಬದುಕಿನ ಮಧ್ಯದಲ್ಲಿ ಸಾಂಸ್ಕೃತಿಕ ಚಟುವಟಿಕೆಗಳು ಮನಸ್ಸಿಗೆ ಹಿತ ನೀಡುವುದರೊಂದಿಗೆ , ಸಂವಹನ ಕೌಶಲ್ಯಗಳನ್ನು ಅಭಿವೃದ್ಧಿಪಡಿಸುವ ಅವಕಾಶವನ್ನು ಒದಗಿಸುತ್ತದೆ. ನಾಯಕತ್ವ, ಟೀಮ್‌ವರ್ಕ್, ಸಹಯೋಗ ಮತ್ತು ಅವರ ಜೀವನಕ್ಕೆ ಅನ್ವಯಿಸಬಹುದಾದ ಹೊಸ ಸ್ನೇಹ ಸಂಬಂಧಗಳನ್ನು ಹುಟ್ಟು ಹಾಕಲು ಸಹಕಾರಿ ಎಂದರು.
ಕಾರ್‍ಯದರ್ಶಿ ಡಾ . ರಕ್ಷಾ ರಾವ್ , ಖಜಂಚಿ ಡಾ . ಶಶಿಧರ್ , ಮಹಿಳಾ ಘಟಕದ ಅಧ್ಯಕ್ಷೆ ಡಾ . ವಿನಯಾ ಶ್ರೀನಿವಾಸ್ ಇದ್ದರು .