ಕಾಂಗ್ರೆಸ್ ಪ್ರತಿಸ್ಪರ್ಧಿ ಆಮ್‌ಆದ್ಮಿ ಪಕ್ಷವೇ ಹೊರತು ಬಿಜೆಪಿಯಲ್ಲ : ಗೋಪಾಲಕೃಷ್ಣ ಬೇಳೂರು ….

ಸಾಗರ : ಸಾಗರ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಪ್ರತಿಸ್ಪರ್ಧಿ ಆಮ್‌ಆದ್ಮಿ ಪಕ್ಷವೇ ಹೊರತು ಬಿಜೆ.ಪಿಯಲ್ಲ ಎಂದು ಕಾಂಗ್ರೇಸ್ ಅಭ್ಯರ್ಥಿ ಗೋಪಾಲಕೃಷ್ಣ ಬೇಳೂರು ತಿಳಿಸಿzರೆ.
ಸೋಮವಾರ ನಾಮಪತ್ರ ಸಲ್ಲಿಕೆ ನಂತರ ಪತ್ರಕರ್ತರ ಜೊತೆ ಮಾತನಾಡಿದ ಅವರು, ಶಾಸಕ ಹಾಲಪ್ಪ ಹರತಾಳು ಭ್ರಷ್ಟಾಚಾರದ ಬಗ್ಗೆ ಅವರ ಪಕ್ಷದವರೇ ಕರಪತ್ರ ಮಾಡಿ ಮನೆಮನೆಗೆ ಹಂಚಿ ಮತ ಕೊಡಬೇಡಿ ಎನ್ನುತ್ತಿರುವಾಗ ಅವರು ಕಾಂಗ್ರೇಸ್‌ಗೆ ಪ್ರತಿಸ್ಪರ್ಧಿಯಾಗಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿದರು.
ಕಾಗೋಡು ತಿಮ್ಮಪ್ಪ ಅವರ ಮಾರ್ಗದರ್ಶನದಲ್ಲಿ ಕ್ಷೇತ್ರವ್ಯಾಪ್ತಿ ಯಲ್ಲಿ ಅಭಿವೃದ್ದಿ ಮಾನದಂಡ ಇರಿಸಿಕೊಂಡು ಮತಯಾಚನೆ ಮಾಡಲಾಗುತ್ತದೆ. ಕಾಗೋಡು ತಿಮ್ಮಪ್ಪ ಅಧಿಕಾರದಲ್ಲಿzಗ ಭೂಮಿ ನೀಡುವ ಮೂಲಕ ಜನರ ರಕ್ಷಣೆ ಮಾಡಿzರೆ. ಕಳೆದ ಐದು ವರ್ಷದಲ್ಲಿ ಜನರಿಗೆ ಭೂಹಕ್ಕು ನೀಡಿಲ್ಲ. ಆಶ್ರಯ ಸೇರಿದಂತೆ ಯಾವುದೇ ವಸತಿ ಯೋಜನೆ ಅನುಷ್ಟಾನಕ್ಕೆ ತಂದಿಲ್ಲ. ನಾನು ಭೂಮಿ ಹಕ್ಕು ನೀಡುವ ಜೊತೆಗೆ ರಸ್ತೆ, ಸೇತುವೆ ಸೇರಿದಂತೆ ಅಗತ್ಯ ಮೂಲಭೂತ ಸೌಲಭ್ಯ ಕಲ್ಪಿಸು ತ್ತೇನೆ. ರಾಜ್ಯದಲ್ಲಿ ಅಧಿಕಾರ ನಡೆಸಿದ ಬಿಜೆಪಿ ದೊಡ್ಡಮಟ್ಟದ ಭ್ರಷ್ಟಾಚಾರ ಮಾಡಿದ್ದು, ಜನರಿಂದ ತಿರಸ್ಕತವಾಗುವುದು ಖಚಿತ. ಈ ಹಿನ್ನೆಲೆಯಲ್ಲಿ ಜಗದೀಶ್ ಶೆಟ್ಟರ್ ಅಂತಹ ನಾಯಕರು ಕಾಂಗ್ರೇಸ್‌ಗೆ ಬಂದಿzರೆ. ಕಾಂಗ್ರೇಸ್‌ನಲ್ಲಿ ಯಡಿಯೂರಪ್ಪ, ಜಗದೀಶ್ ಶೆಟ್ಟರ್‌ರಂತಹ ಪಕ್ಷ ಕಟ್ಟಿದ ಹಿರಿಯ ನಾಯಕರನ್ನು ಮೂಲೆ ಗುಂಪು ಮಾಡಲಾಗಿದೆ. ನಾಮ ಪತ್ರ ಸಲ್ಲಿಕೆಗೆ ಬಂದಿರುವ ಅಭಿ ಮಾನಿಗಳನ್ನು ಹಣಕೊಟ್ಟು ಕರೆದು ಕೊಂಡು ಬಂದಿಲ್ಲ. ಸ್ವಯಂ ಪ್ರೇರ ಣೆಯಿಂದ ಬಂದಿದ್ದು, ನನ್ನ ಗೆಲುವು ಖಚಿತ ಎಂದು ಹೇಳಿದರು.
ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಮಾತನಾಡಿ, ಗೋಪಾಲ ಕೃಷ್ಣ ಬೇಳೂರು ಅಭಿವೃದ್ದಿ ದೃಷ್ಟಿ ಕೋನ ಹೊಂದಿzರೆ. ಕ್ಷೇತ್ರ ವ್ಯಾಪ್ತಿಯಲ್ಲಿ ಕಾಂಗ್ರೇಸ್ ಪರ ವಾದ ವಾತಾವರಣ ಇದ್ದು, ಬೇಳೂರು ಗೆಲ್ಲುವುದು ನಿಶ್ಚಿತ. ನಿಂತು ಹೋಗಿರುವ ಅಭಿವೃದ್ದಿ ಕೆಲಸಗಳಿಗೆ ಪುನರ್ ಚಾಲನೆ ಸಿಗುವ ಜೊತೆಗೆ ಜನರಿಗೆ ಭೂಮಿಹಕ್ಕು ಸಹ ಬೇಳೂರು ಶಾಸಕರಾದ ನಂತರ ಸಿಗುತ್ತದೆ ಎನ್ನುವ ನಂಬಿಕೆ ತಮಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಬಿ.ಆರ್. ಜಯಂತ್, ತಾಲ್ಲೂಕು ಪಂಚಾಯ್ತಿ ಮಾಜಿ ಅಧ್ಯಕ್ಷ ಮಲ್ಲಿಕಾರ್ಜುನ ಹಕ್ರೆ, ನ್ಯಾಯವಾದಿ ವಿ.ಶಂಕರ್ ಹಾಜರಿದ್ದರು. ಇದಕ್ಕೂ ಮೊದಲು ಗಾಂಧಿಮಂದಿರದ ಕಾಂಗ್ರೇಸ್ ಕಚೇರಿಯಿಂದ ಬೃಹತ್ ಮೆರ ವಣಿಗೆ ಮೂಲಕ ತೆರಳಿ ನಾಮಪತ್ರ ಸಲ್ಲಿಕೆ ಮಾಡಲಾಯಿತು.