ದೇಶ ದ್ರೋಹ ಸಂಘಟನೆ ಜೊತೆ ಕೈಜೊಡಿಸಿದ ಕಾಂಗ್ರೆಸ್: ಶಾಸಕ ಈಶ್ವರಪ್ಪ …
ಶಿವಮೊಗ್ಗ: ರಾಷ್ಟ್ರದ್ರೋಹಿ ಸಂಘಟನೆಗಳಾದ ಪಿಎಫ್ಐ ಹಾಗೂ ಎಸ್ಡಿಪಿಐ ಸಂಘಟನೆಗ ಳೊಂದಿಗೆ ಜೊತೆಗೂಡಿ ನೇರ ಹೊಂದಾಣಿಕೆ ಮಾಡಿಕೊಂಡು ಚುನಾವಣೆಯನ್ನು ನಡೆಸುತ್ತಿರುವ ಕಾಂಗ್ರೆಸ್ ಪಕ್ಷದ ಬಗ್ಗೆ ರಾಜ್ಯದ ಜನತೆ ಗಮನಿಸಬೇಕು. ಹಾಗೂ ಕಾಂಗ್ರೆಸ್ಗೆ ಬೆಂಬಲಿಸದೆ ಮತದಾ ರರು ಬಿಜೆಪಿಗೆ ಬೆಂಬಲಿಸುವಂತೆ ಶಾಸಕ ಕೆ.ಎಸ್. ಈಶ್ವರಪ್ಪ ಮನವಿ ಮಾಡಿದರು.
ಅವರು ಪತ್ರಿಕಾಗೋಷ್ಠಿ ಯಲ್ಲಿ ಮಾತನಾಡಿ, ರಾಷ್ಟ್ರ ದ್ರೋಹಿ ಚಟುವಟಿಕೆಯಲ್ಲಿ ತೊಡ ಗಿದ್ದ ಪಿಎಫ್ಐ ಕಾರ್ಯಕತರನ್ನು ಗಡಿಪಾರು ಮಾಡಲಾಗಿದೆ. ಹರ್ಷನ ಕೊಲೆ ಮತ್ತು ಸ್ವಾತಂತ್ರ್ಯವೀರ ಸಾವರ್ಕರ್ ಅವರ ಭಾವಚಿತ್ರದ ಫ್ಲೆಕ್ಷಿ ಹರಿದ ಘಟನೆ ಹಾಗೂ ಕುಕ್ಕರ್ ಬ್ಲಾಸ್ಟ್ ಆರೋಪಿ ಗಳಿಗೆ ರಾಷ್ಟ್ರದ್ರೋಹಿ ಸಂಘಟನೆ ಗಳ ಜೊತೆ ಶಾಮೀಲಾಗಿರುವುದು ಸಾಬೀತಾಗಿದೆ. ಇಂತಹ ಸಂಘಟ ನೆಗಳ ಜೊತೆ ಕಾಂಗ್ರೆಸ್ ಕೈಜೋ ಡಿಸುತ್ತಿದೆ ಎಂದು ಅವರು ಆರೋಪಿಸಿದರು.
ಅಧಿಕಾರಕ್ಕಾಗಿ ರಾಷ್ಟ್ರದ್ರೋಹಿ ಸಂಘಟನೆಗಳ ಜೊತೆ ಶಾಮೀ ಲಾಗುತ್ತಿರುವುದು ಕಾಂಗ್ರೆಸ್ ನೀಚ ತನಕ್ಕೆ ಸಾಕ್ಷಿಯಾಗಿರುವುದರಿಂದ ಚುನಾವಣೆಯಲ್ಲಿ ರಾಜ್ಯದ ಜನತೆ ಸರಿಯಾಗಿ ಬುದ್ಧಿ ಕಲಿಸಬೇಕು ಹಾಗೂ ದೂರ ಇಡಬೇಕು. ಮುಸ್ಲಿಂ ಸಮುದಾಯದ ಮತ ಪಡೆಯಲು ಮುಸ್ಲಿಂ ಸಂಘಟ ನೆಗಳೊಂದಿಗೆ ಕಾಂಗ್ರೆಸ್ ಕೈ ಜೋಡಿಸಿವುರುದು ಖಂಡನೀಯ. ಮತಕ್ಕಾಗಿ ನಿಷೇಧಿತ ಸಂಘಟನೆ ಗಳೊಂದಿಗೆ ಕೈ ಜೋಡಿಸಿದೆ. ಎಸ್ಡಿಪಿಐ ಪಕ್ಷವಾಗಿರುವುದ ರಿಂದ ಇದನ್ನು ನಿಷೇಧಿಸಲು ಬರು ವುದಿಲ್ಲ. ಇದರ ಬಗ್ಗೆ ಚುನಾವಣಾ ಆಯೋಗವೇ ಕ್ರಮ ಕೈಗೊಳ್ಳ ಬೇಕು ಎಂದರು.
ದಕ್ಷಿಣ ಕನ್ನಡದಲ್ಲಿ ಕಳೆದ ಬಾರಿ ಚುನಾವಣೆಯಲ್ಲಿ ಸೋತ ಎಸ್ಡಿಪಿಐ ಅಭ್ಯರ್ಥಿ ಕಾಂಗ್ರೆಸ್ ನನಗೆ ಮೋಸ ಮಾಡಿದೆ ಎಂದು ಬಹಿರಂಗ ಹೇಳಿಕೆ ನೀಡಿzರೆ. ಹಾಗಾಗಿ ಕಾಂಗ್ರೆಸ್ ರಾಷ್ಟ್ರದ್ರೋಹಿ ಸಂಘಟನೆ ಜೊತೆ ಕೈ ಜೋಡಿಸಿ ರುವುದು ಸಾಬೀತಾಗಿದೆ ಎಂದರು.
ವಿಪಕ್ಷ ನಾಯಕ ಸಿದ್ದ ರಾಮಯ್ಯ ಕೋಲಾರದಲ್ಲಿ ಸ್ಪರ್ಧಿಸುವುದಿಲ್ಲ ಎಂದು ಮತ್ತೊಮ್ಮೆ ಪುನರುಚ್ಛರಿಸಿದೆ ಕೆ.ಎಸ್. ಈಶ್ವರಪ್ಪ, ಕೋಲಾರದಲ್ಲಿ ೬೦ ಸಾವಿರಕ್ಕೂ ಹೆಚ್ಚು ದಲಿತ ಮತಗಳಿವೆ. ಸಿದ್ದರಾಮಯ್ಯ ಅವರು ಕಾಂಗ್ರೆಸ್ ಮುಖಂಡರಾದ ಕೆ.ಹೆಚ್. ಮುನಿಯಪ್ಪ ಹಾಗೂ ಇನ್ನಿತರ ಮುಖಂಡರನ್ನು ಸೋಲಿ ಸಿರುವ ಸಿಟ್ಟನ್ನು ಅಲ್ಲಿನ ದಲಿತರು ಹಾಗೂ ಒಕ್ಕಲಿಗರು ಸಹ ಸಿದ್ದರಾಮಯ್ಯ ಅವರನ್ನು ಸೋಲಿಸಿ ತೀರಿಸಿಕೊಳ್ಳಲು ಕಾಯು ತ್ತಿzರೆ. ವರ್ತೂರು ಪ್ರಕಾಶ್ರಿಗೆ ಜಿ ಕುರುಬರ ಸಂಘದ ಬೆಂಬಲ ವಿದೆ. ಮುಸ್ಲಿಂರ ಮತಗಳನ್ನೇ ನೆಚ್ಚಿಕೊಂಡರೆ ಕೋಲಾರದಲ್ಲಿ ಸಿದ್ದರಾಮಯ್ಯ ಸೋಲುವುದು ಖಚಿತ ಎಂದರು.
ಮಾ.೧ರಂದು ಆರಂಭ ಗೊಂಡ ಪಕ್ಷದ ವಿಜಯಸಂಕಲ್ಪ ಯಾತ್ರೆಗೆ ಅಭೂತಪೂರ್ವ ಹಾಗೂ ನಿರೀಕ್ಷೆಗೂ ಮೀರಿದ ಬೆಂಬಲ ಸಿಗುತ್ತಿದೆ. ನಮ್ಮ ತಂಡದ ವಿಜಯ ಸಂಕಲ್ಪ ಯಾತ್ರೆ ಮಾ.೧ ರಂದು ಮಲೆಮಹಾದೇಶ್ವರ ಬೆಟ್ಟದಿಂದ ಆರಂಭವಾಗಿದ್ದು, ಈಗಾಗಲೇ ೪೯ ವಿಧಾನ ಸಭಾ ಕ್ಷೇತ್ರದಲ್ಲಿ ಯಾತ್ರೆ ಸಾಗಿದ್ದು ಈಗ ಶಿವಮೊಗ್ಗ ಜಿಯಲ್ಲಿ ಯಾತ್ರೆ ಸಂಚರಿಸುತ್ತಿದೆ. ರಾಜ್ಯದ ನಾಲ್ಕು ದಿಕ್ಕುಗಳಿಂದಲೂ ಯಾತ್ರೆ ಆರಂಭವಾಗಿದ್ದು, ಮಾ.೨೫ರಂದು ನಾಲ್ಕೂ ಯಾತ್ರೆಗಳು ದಾವಣಗೆರೆ ತಲುಪಲಿದ್ದು, ಅಂದು ಬೃಹತ್ ಸಮಾವೇಶ ನಡೆಯಲಿದೆ. ಸುಮಾರು ೧೦ ಲಕ್ಷಕ್ಕೂ ಹೆಚ್ಚು ಜನರು ಸೇರುವ ನಿರೀಕ್ಷೆ ಇದ್ದು, ಸಿದ್ಧತೆಗಳು ಭರದಿಂದ ಸಾಗಿದೆ ಎಂದರು.
ಈ ಸಮಾವೇಶದಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ, ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ, ಸಿಎಂ ಬಸವರಾಜ ಬೊಮ್ಮಾಯಿ, ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ, ರಾಜ್ಯದ ಸಂಸದರು, ಸಚಿವರು, ಶಾಸಕರು ಹಾಗೂ ಮುಖಂಡರು ಭಾಗವ ಹಿಸಲಿzರೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ರಾಜ್ಯ ಬಿಜೆಪಿ ಉಪಾಧ್ಯಕ್ಷ ಹಾಗೂ ವಿಜಯ ಸಂಕಲ್ಪ ಯಾತ್ರೆಯ ಸಂಚಾಲಕ ಎಂ.ರಾಜೇಂದ್ರ, ಸಹ ಸಂಚಾಲಕ ಎಸ್. ದತ್ತಾತ್ರಿ, ಶಾಸಕರಾದ ಕೆ.ಬಿ. ಅಶೋಕ ನಾಯ್ಕ, ಎಸ್. ರುದ್ರೇಗೌಡರು, ಡಿ.ಎಸ್. ಅರುಣ್, ಜಿ ಬಿಜೆಪಿ ಅಧ್ಯಕ್ಷ ಟಿ.ಡಿ. ಮೇಘರಾಜ್, ಮುಖಂಡರಾದ ಶಿವರಾಜ್, ಬಿ.ಕೆ. ಶ್ರೀನಾಥ್, ಕೆ.ವಿ. ಅಣ್ಣಪ್ಪ, ಹೃಷಿಕೇಶ್ ಪೈ ಉಪಸ್ಥಿತರಿದ್ದರು.