ಸಮಾಜದ ಹಿತ ದೃಷ್ಠಿಯಿಂದ ಗ್ಯಾರೆಂಟಿ ಭರವಸೆ ನುಡಿದಂತೆ ನಡೆಯುತ್ತಿರುವ ಕಾಂಗ್ರೆಸ್:ಶಾಸಕ ಡಿಜಿಎಸ್

ಹೊನ್ನಾಳಿ: ಚುನಾವಣಾ ಪೂರ್ವದಲ್ಲಿ ಕಾಂಗ್ರೆಸ್ ಪಕ್ಷವು ಘೋಷಿಸಿದ ೫ ಭರವಸೆಗಳನ್ನೂ ಸಿಎಂ ಸಿದ್ದರಾಮಯ್ಯನವರ ಸರ್ಕಾರ ಮೊದಲನೇ ಬಜೆಟ್‌ಲ್ಲಿ ಈಡೇರಿಸಲಿದೆ ಎಂದು ಶಾಸಕ ಡಿ.ಜಿ.ಶಾಂತನಗೌಡ ಹೇಳಿದರು.
ಅವರು ಪಟ್ಟಣದ ಸರ್ಕಾರಿ ಬಸ್ ನಿಲ್ದಾಣದಲ್ಲಿ ಕಾಂಗ್ರೆಸ್ ಸರ್ಕಾರದ ೫ ಭರವಸೆಗಳಲ್ಲಿ ಮೊದಲನೆಯ ಭರವಸೆಯಾದ ಶಕ್ತಿ ಯೋಜನೆಯನ್ನು ಮಹಿಳಾ ಫಲಾ ನುಭವಿಗಳ ಜೊತೆಗೆ ಉದ್ಘಾಟಿಸಿ ಮಾತನಾಡಿದರು.
ಸಮಾಜದ ಸರ್ವರ ಹಿತದೃಷ್ಠಿ ಯಿಂದ ೫ ಭರವಸೆಗಳಲ್ಲಿ ಮೊದಲ ನೆಯ ಭರವಸೆಯಾದ ಶಕ್ತಿ ಯೋಜ ನೆಯನ್ನು ಇಂದು ಜರಿಗೊಳಿಸಿ ಕಾಂಗ್ರೆಸ್ ಪಕ್ಷವು ನುಡಿದಂತೆ ನಡೆದ ಸರ್ಕಾರ ಎಂಬುದನ್ನು ಮತ್ತೊಮ್ಮೆ ಸಾಬೀತುಪಡಿಸಿದ ಸಿಎಂ ಸಿದ್ದರಾ ಮಯ್ಯ, ಡಿಸಿಎಂ ಡಿಕೆಶಿ ಮತ್ತು ಸಾರಿಗೆ ಸಚಿವರಾದ ರಾಮಲಿಂ ಗಾರೆಡ್ಡಿಯವರಿಗೆ ಹೃತ್ಪೂರ್ವಕ ಧನ್ಯವಾದಗಳನ್ನು ಅರ್ಪಿಸುವು ದಾಗಿ ತಿಳಿಸಿದರು.
೫ ಭರವಸೆಗಳ ಘೋಷಣೆ ಐತಿಹಾಸಿಕ ತೀರ್ಮಾನವಾಗಿದ್ದು ಪಾಶ್ಚಿಮಾತ್ಯ ರಾಷ್ಟ್ರಗಳು ಮತ್ತು ವಿರೋಧ ಪಕ್ಷದವರು ಕೂಡ ಭರವಸೆಗಳನ್ನು ಈಡೇರಿಸುವುದಿ ಲ್ಲವೆಂಬ ಅನುಮಾನ ವ್ಯಕ್ತಪಡಿಸಿ ದ್ದರು. ವಿರೋಧ ಪಕ್ಷದವರು ಇದು ಬೋಗಸ್ ಕಾರ್ಡ್ ಎಂದು ಅಪಪ್ರಚಾರ ಮಾಡಿದ್ದರು.

ರೇಣುಗೆ ಟಾಂಗ್: ವಿರೋಧ ಪಕ್ಷದವರು ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದಾಗಿನಿಂದಲೂ ಕಾಂಗ್ರೆ ಸ್ ಪಕ್ಷದ ಯೋಜನೆಗಳ ಬಗ್ಗೆ ಅಪಪ್ರಚಾರ ಮಾಡುತ್ತಾ ಜನರನ್ನು ದಿಕ್ಕು ತಪ್ಪಿಸುವ ಕೆಲಸವನ್ನು ಮಾಡುತ್ತಿದ್ದು ವಿರೋಧಿಗಳ ಠೀಕೆಗಳಿಗೆ ಉತ್ತರ ಕೊಡದೇ ತಮ್ಮ ಕೆಲಸಗಳ ಮೂಲಕ ಉತ್ತರ ಕೊಡು ತ್ತೇನೆ ಎಂದರು. ವಿರೋಧಿಗಳ ಹೆಸ ರು ಹೇಳುತ್ತಾ ಅವರನ್ನು ದೊಡ್ಡವ ರನ್ನು ಮಾಡುವ ಬದಲು ಅವರನ್ನು ನಿರ್ಲಕ್ಷ್ಯ ಮಾಡುವುದಾಗಿ ಮಾಜಿ ಶಾಸಕ ಎಂ.ಪಿ.ರೇಣುಕಾಚಾರ್ಯ ಅವರಿಗೆ ಶಾಸಕ ಡಿ.ಜಿ.ಶಾಂತನ ಗೌ ಡ ನೇರವಾಗಿ ಟಾಂಗ್ ನೀಡಿದರು.
ಕರೆಂಟ್ ಬಿಲ್: ಸರ್ಕಾರದ ಅಸ್ತಿತ್ವಕ್ಕೆ ಬಂದ ಮೇಲೆ ನೀಡಿದ ಭರವಸೆಗಳನ್ನು ಈಡೇರಿಸಲು ಸ್ವಲ್ಪ ಕಾಲಾವಕಾಶ ಬೇಕಾಗುತ್ತದೆ. ವಿರೋಧ ಪಕ್ಷದವರಿಗೂ ಇದು ಗೊತ್ತಿದ್ದರೂ ಕೂಡ ನಮ್ಮ ಪಕ್ಷದ ಜನಪ್ರಿಯತೆಯನ್ನು ಸಹಿಸದೇ ಇಲ್ಲ-ಸಲ್ಲದ ಅಪಪ್ರಚಾರ ಮಾಡು ತ್ತಿzರೆ. ಸಾರ್ವಜನಿಕರು ಜೂ.೩೦ ರವರೆಗೆ ಬಳಕೆ ಮಾಡಿದ ವಿದ್ಯುತ್ ಬಿಲ್‌ನ್ನು ಪಾವತಿ ಮಾಡಬೇಕಾ ಗುತ್ತದೆ. ಜು.೧ರಿಂದ ಬಳಕೆ ಮಾಡಿ ದ ವಿದ್ಯುತ್‌ಗೆ ವಿದ್ಯುತ್ ಬಿಲ್‌ನ್ನು ಕಟ್ಟಬೇಕಾಗಿಲ್ಲವೆಂದು ಸ್ಪಷ್ಟಪಡಿಸಿ ದರು.
ಮಹಿಳೆಯರು ಧರ್ಮ ಸಂರಕ್ಷ ಕರು: ಸಾಮಾನ್ಯವಾಗಿ ಮಹಿಳೆ ಯರು ತಮ್ಮ ತಮ್ಮ ಮನೆಗಳಲ್ಲಿ ಪೂಜ-ಕೈಂಕರ್ಯಗಳನ್ನು ಮಾಡುತ್ತಾ ಹಬ್ಬ-ಹರಿದಿನಗಳನ್ನು ಸಂಪ್ರದಾಯ ಬದ್ಧವಾಗಿ ಆಚರಣೆ ಮಾಡುತ್ತಾ ನಮ್ಮ ಧರ್ಮವನ್ನು ರಕ್ಷಣೆ ಮಾಡುತ್ತಾzರೆ. ವಿದೇಶಗ ಳಲ್ಲೂ ನಮ್ಮ ಭಾರತೀಯ ಸಂಸ್ಕೃತಿ ಯನ್ನು ಆಚರಣೆ ಮಾಡುತ್ತಿzರೆ. ಹಾಗಾಗಿಯೇ ನಮ್ಮ ಸರ್ಕಾರವು ರಾಜ್ಯದ ೩.೫ ಕೋಟಿ ಮಹಿಳೆಯ ರಿಗೂ ಈ ಭಾಗ್ಯಗಳಲ್ಲಿ ಪ್ರಥಮ ಆದ್ಯತೆ ನೀಡಲಾಗಿದೆ ಎಂದು ವಿವರಿಸಿದರು.
ಸಿಂಪಲ್ ಶಾಸಕ: ತಾವು ೩ ಬಾರಿ ಶಾಸಕರಾಗಿ ಆಯ್ಕೆಯಾ ಗಿದ್ದು ಇದುವರೆಗೂ ೧೦-೧೫ ಬಾರಿ ಮಾತ್ರವೇ ತಮ್ಮ ಕಾರಿನಲ್ಲಿ ಬೆಂಗಳೂರಿಗೆ ಪ್ರಯಾಣ ಬೆಳೆಸಿದ್ದು ಇನ್ನುಳಿದಂತೆ ಕೆ.ಎಸ್.ಆರ್.ಟಿ.ಸಿ. ಬಸ್ ತಾವು ಬೆಂಗಳೂರಿಗೆ ತಮ್ಮ ಕಾರ್ಯ ನಿಮಿತ್ತ ಪ್ರಯಾಣ ಮಾಡಿರುವುದಾಗಿ ತಿಳಿಸಿದರು.
ರಾಷ್ಟ್ರದ ಕೆ.ಎಸ್.ಆರ್.ಟಿ. ಸಿ.ಯು ಅನೇಕ ಬಾರಿ ತನ್ನ ಅತ್ಯುತ್ತಮ ಸೇವೆಗೆ ಪ್ರಶಸ್ತಿಗಳನ್ನು ಬಾಚಿಕೊಂಡಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.


ಸಿ.ಎಲ್.ಪಿ. ಮೀಟಿಂಗ್‌ನಲ್ಲಿ ಹೊನ್ನಾಳಿ ಖ್ಯಾತಿ: ಚುನಾವಣಾ ಪೂರ್ವದಲ್ಲಿ ಪ್ರಚಾರ ಸಭೆಗೆ ಡಿ.ಕೆ.ಶಿವಕುಮಾರ್ ಆಗಮಿಸಿದ್ದ ಸಂದರ್ಭದಲ್ಲಿ ಮಹಿಳಿಯರೇ ಅತೀ ಹೆಚ್ಚಾಗಿ ಪಾಲ್ಗೊಂಡಿದ್ದನ್ನು ಬೆಂಗಳೂರಿನಲ್ಲಿ ನಡೆದ ಸಿ.ಎಲ್. ಪಿ.ಮೀಟಿಂಗಲ್ಲಿ ಡಿ.ಕೆ.ಶಿವಕುಮಾ ರ್ ಪ್ರಸ್ತಾಪ ಮಾಡಿ ರಾಜ್ಯದ ೨೨೪ ವಿಧಾನ ಸಭಾ ಕ್ಷೇತ್ರಗಳಲ್ಲೂ ಪ್ರವಾಸ ಮಾಡಿದ್ದು ಹೊನ್ನಾಳಿ ಯಲ್ಲಿ ಮಾತ್ರವೇ ಅತೀ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಭಾಗ ವಹಿಸಿದ್ದರು ಎಂದು ಸ್ಮರಿಸಿದ್ದರು ಇದಕ್ಕೆ ಅವಳಿ ತಾಲ್ಲೂಕಿನ ಮಹಿ ಳೆಯರಿಗೆ ಕೃತಜ್ಞತೆ ಸಲ್ಲಿಸುವುದಾಗಿ ತಿಳಿಸಿದರು.
ದಾವಣಗೆರೆಯಿಂದ ನ್ಯಾಮತಿ ಕಡೆಗೆ ಯೂ ಟರ್ನ್: ನ್ಯಾಮತಿ ಮತ್ತು ಹೊನ್ನಾಳಿ ತಾಲ್ಲೂಕಿನ ಮಹಿಳಿಯರಿಗೆ ತಲಾ ೧ ಬಸ್ ವ್ಯವಸ್ಥೆ ಮಾಡಲಾಗಿತ್ತು ಜೊತೆಗೆ ಪುರುಷರಿಗೂ ೨ ಬಸ್ ವ್ಯವಸ್ಥೆ ಮಾಡಲಾಗಿದ್ದಿತು.
ಶಕ್ತಿ ಯೋಜ ನೆಗೆ ಚಾಲನೆ ನೀಡಿ ಬಸ್ ಗಳು ದಾವಣಗೆರೆಯ ಕೆಲ ಸ್ಥಳಗಳನ್ನು ವೀಕ್ಷಣೆ ಮಾಡಿ ನಂತರ ಅಪೂರ್ವ ರೆಸ್ಟೊರೆಂಟ್ ನಲ್ಲಿ ಊಟದ ವ್ಯವಸ್ಥೆ ಮಾಡಲಾಗಿದ್ದಿತು.ಆದರೆ ಈ ಪ್ರಯಾಣ ದಾವಣಗೆರೆಗೆ ಬದ ಲಾಗಿ ನ್ಯಾಮತಿ ತಾಲ್ಲೂಕಿನ ಪ್ರೇಕ್ಷ ಣೀಯ ಸ್ಥಳಗಳಾದ ತೀರ್ಥರಾಮೇ ಶ್ವರಕ್ಕೆ ಭೇಟಿ ನೀಡಿ ನಂತರ ಸೂರ ಗೊಂಡನಕೊಪ್ಪದಲ್ಲಿ ಊಟದ ವ್ಯವಸ್ಥೆ ಮಾಡಲಾಗಿದ್ದಿತು.
ಉಪವಿಭಾಗಾಧಿಕಾರಿ ಹುಲ್ಲು ಮನಿ ತಿಮ್ಮಣ್ಣ ಮಾತನಾಡಿ ಈ ಯೋಜನೆ ಮಹಿಳೆಯರಿಗೆ ಆರ್ಥಿ ಕವಾಗಿ ಶಕ್ತಿ ತುಂಬಲಿದೆ. ಮಹಿಳೆ ಯರು ತಮ್ಮ ವ್ಯಾಪಾರ-ವಹಿವಾ ಟಿಗೂ ಈ ಯೋಜನೆಯನ್ನು ಬಳಸಿ ಕೊಂಡು ಆರ್ಥಿಕ ಸ್ವಾವಲಂಬಿಗಳಾ ಗುವಂತೆ ಸಲಹೆ ನೀಡಿದರು.


ಈ ಸಂದರ್ಭದಲ್ಲಿ ಹೊನ್ನಾಳಿ ತಹಶೀಲ್ದಾರ್ ತಿರುಪತಿ ಪಾಟೀ ಲ್, ನ್ಯಾಮತಿಯ ತಹಶೀಲ್ದಾರ್ ಆರ್.ವಿ. ಕಟ್ಟಿ,ಕೆ.ಎಸ್. ಆರ್. ಟಿ. ಸಿ.ಡಿಪೋ ಮ್ಯಾನೇಜರ್ ಮಹೇಶ್ವ ರಪ್ಪ, ವಿಭಾಗೀಯ ಕಾನೂನು ಅಧಿಕಾರಿ ದೇವೆಂದ್ರನ್,ಸಿಬ್ಬಂದಿಗಳಾದ ಮುದ್ದಪ್ಪ, ರವಿ, ಲಕ್ಷ್ಮಣ್, ಸಂತೊ ಷ್, ಅಣ್ಣಪ್ಪಸ್ವಾಮಿ, ಕರಿಬಸಪ್ಪ ಸಾರಥಿ,ಅಶೋಕ್,ಜಿ ಕಾಂಗ್ರೆ ಸ್ ಅಧ್ಯಕ್ಷ ಎಚ್.ಬಿ.ಮಂಜಪ್ಪ, ತಾಲ್ಲೂಕು ಕಾಂಗ್ರೆಸ್ ಅಧ್ಯಕ್ಷ ಶಿವಯೋಗಿ,ಸಾಸ್ವೆಹಳ್ಳಿ ಮತ್ತು ನ್ಯಾಮತಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರುಗಳಾದ ಆರ್.ನಾಗಪ್ಪ,ಡಿ.ಜಿ. ವಿಶ್ವನಾಥ್, ಮಹಿಳಾ ಘಟಕದ ಅಧ್ಯಕ್ಷೆಯರಾದ ಪುಷ್ಪಾರವೀಶ್, ವನಜಕ್ಷಮ್ಮ,ಜಿ ಯುವ ಕಾಂಗ್ರೆಸ್ ಉಪಾಧ್ಯಕ್ಷ ಎಚ್.ಎಸ್, ರಂಜಿತ್,ಎಪಿಎಂಸಿ ಮಾಜಿ ಅಧ್ಯಕ್ಷ ಎ.ಜಿ.ಪ್ರಕಾಶ್,ಮುಖಂಡರುಗಳಾದ ಎಚ್.ಎ.ಗದ್ದಿಗೇಶ್,ನುಚ್ಚಿನ್ ವಾಗೀಶ್,ಬಿ.ಸಿದ್ದಪ್ಪ,ಎಚ್. ಎ.ಉಮಾಪತಿ, ಎಂ.ಆರ್, ಮಹೇಶ್,ಅರಕೆರೆ ಮಧುಗೌಡ, ಎಚ್.ಬಿ.ಅಣ್ಣಪ್ಪ ಮತ್ತಿತರರು ಉಪಸ್ಥಿತರಿದ್ದರು.