ಕಾಂಗ್ರೆಸ್ ಗ್ಯಾರೆಂಟಿಯಿಂದ ಕಂಗೆಟ್ಟ ಬಿಜೆಪಿಯಿಂದ ಬಡವರ ಅನ್ನಕ್ಕೆ ಗುನ್ನ…

ಶಿವಮೊಗ್ಗ: ಕಾಂಗ್ರೆಸ್ ಸರ್ಕಾ ರದ ವಿದ್ಯಾಸಿರಿ ಮತ್ತು ಉನ್ನತ ವ್ಯಾಸಂಗಕ್ಕೆ ಸ್ಕಾಲರ್‌ಶಿಪ್ ಯೋಜ ನೆಯನ್ನು ರದ್ದುಪಡಿಸಿದ ಬಿಜೆಪಿಗೆ ಕಾಂಗ್ರೆಸ್ ಸರ್ಕಾರವನ್ನು ಟೀಕಿಸುವ ಯಾವುದೇ ನೈತಿಕತೆ ಇಲ್ಲ. ಲಕ್ಷಾಂತರ ಮೆಟ್ರಿಕ್ ಟನ್ ಅಕ್ಕಿ ಕೊಳೆಯುತ್ತಾ ಬಿದ್ದಿದ್ದರೂ ದ್ವೇಷದ ರಾಜಕಾರಣದಿಂದ ಕೇಂದ್ರ ಬಿಜೆಪಿ ಸರ್ಕಾರ ಕಾಂಗ್ರೆಸ್ಸಿಗೆ ಕೆಟ್ಟ ಹೆಸರು ತರಬೇಕೆಂಬ ಏಕೈಕ ಉದ್ದೇಶದಿಂದ ಅಕ್ಕಿ ನೀಡುತ್ತಿಲ್ಲ ಎಂದು ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಗಂಭೀರ ಆರೋಪ ಮಾಡಿದರು.
ಅವರು ಇಂದು ಜಿಲ್ಲಾ ಕಾಂಗ್ರೆ ಸ್ ಸಮಿತಿ ಕೇಂದ್ರ ಬಿಜೆಪಿ ಸರ್ಕಾ ರದ ವಿರುದ್ಧ ಶಿಮೊಗ್ಗ ರಾಮಣ್ಣ ಶ್ರೇಷ್ಠಿ ಮುಂಭಾಗದಿಂದ ಶಿವಪ್ಪ ನಾಯಕ್ ಪ್ರತಿಮೆವರೆಗೆ ಬೃಹತ್ ಪ್ರತಿಭಟನೆಯಲ್ಲಿ ಪಾಲ್ಗೊಂಡು ಬಳಿಕ ನಡೆದ ಬೃಹತ್ ಪ್ರತಿಭಟನಾ ಸಭೆಯಲ್ಲಿ ಪಾಲ್ಗೊಂಡು ಮಾತನಾ ಡಿದರು.
ಕೇಂದ್ರ ಸರ್ಕಾರದ ಬಳಿ ಅಕ್ಕಿ ದಾಸ್ತಾನಿದ್ದರೂ ರಾಜ್ಯಕ್ಕೆ ಮಾರಾಟ ಮಾಡಲು ತಂತ್ರಗಾರಿಕೆಯಿಂದ ನಿರಾಕರಿಸುತ್ತಿರುವ ಕೇಂದ್ರ ಬಿಜೆಪಿ ದ್ವೇಷದ ರಾಜಕಾರಣವನ್ನು ವಿರೊ ಧಿಸಿ ಇಂದು ಪ್ರತಿಭಟನೆ ಮಾಡ ಲಾಗುತ್ತಿದೆ. ಇದು ಇಡೀ ರಾಜ ದ್ಯಂತ ವಿಧಾನಸಭಾ ಕ್ಷೇತ್ರ ಮಟ್ಟ ದಲ್ಲಿ ನಡೆಯುತ್ತದೆ. ಎಲೆಕ್ಟ್ರಾನಿಕ್ ಮಾಧ್ಯಮಗಳು ಬಿಜೆಪಿ ಸರ್ಕಾರದ ದ್ವೇಷ ರಾಜಕಾರಣದ ನಡೆಯನ್ನು ಜನರಿಗೆ ತೋರಿಸುತ್ತಿಲ್ಲ. ಈ ಗ್ಗೆ ಮಾಧ್ಯಮದವರು ಬೆಳಕು ಚೆಲ್ಲ ಬೇಕು. ಕಾರ್ಪೊರೇಟ್ ಕಂಪೆನಿಗ ಳಿಗೆ ಕೋಟ್ಯಂತರ ಹಣ ಸಾಲ ಮನ್ನಾ ಮಾಡುವ ನರೇಂದ್ರ ಮೋದಿ ಸರ್ಕಾರಕ್ಕೆ ಬಡವರ ಪರವಾದ ಯೋಜನೆಗಳ ಮೇಲೆ ದ್ವೇಷ ಯಾಕೆ ಎಂಬುದು ಅರ್ಥ ವಾಗುತ್ತಿಲ್ಲ. ಎಷ್ಟೇ ಕಷ್ಟ ಬಂದರೂ ಕಾಂಗ್ರೆಸ್ ಸರ್ಕಾರ ಕೊಟ್ಟ ಗ್ಯಾರಂ ಟಿಗಳನ್ನು ಜರಿಗೊಳಿಸಿಯೇ ಸಿದ್ಧ. ಈ ಯೋಜನೆಗಳು ಜರಿಯಾದರೆ ಇನ್ನು ಜೀವಮಾನದಲ್ಲಿ ಬಿಜೆಪಿ ಕೇಂದ್ರ ಮತ್ತು ರಾಜ್ಯಗಳಲ್ಲಿ ಅಧಿಕಾರಕ್ಕೆ ಬರುವುದಿಲ್ಲ ಎಂಬುದು ಅವರಿಗೆ ಖಚಿತವಾಗಿದೆ. ಉಚಿತ ಬಸ್ ಯೋಜನೆ ಅಭೂತಪೂರ್ವ ಯಶಸ್ಸು ಕಂಡಿದೆ. ಗೃಹಲಕ್ಷ್ಮಿ ಮತ್ತು ಗೃಹಜ್ಯೋತಿ ಯೋಜನೆ ಜರಿಯಾದರೆ ಬಿಜೆಪ ಕಥೆ ಮುಗಿ ಯುತ್ತದೆ. ಅದಕ್ಕಾಗಿ ದ್ವೇಷದ ರಾಜ ಕಾರಣ ಮಾಡುತ್ತಿದ್ದಾರೆ ಎಂದರು.
ನಾಲ್ಕು ವರ್ಷಗಳ ಹಿಂದೆ ಕೊಡಗು ಮತ್ತು ಇನ್ನಿತರ ಕಡೆ ಪ್ರವಾಹಕ್ಕೆ ೩೦ಸಾವಿರ ಕೋಟಿ ನಷ್ಟ ಎಂದು ಬಿಜೆಪಿ ಸರ್ಕಾರ ವರದಿ ಸಲ್ಲಿಸಿತ್ತು. ಕೊಟ್ಟಿದ್ದು ಕೇಲ ೮೦೦ ಕೋಟಿ. ಇನ್ನೂ ಪರಿಹಾರ ನೀಡ ಲು ಸಾಧ್ಯವಾಗಿಲ್ಲ. ನಾವು ಅಧಿಕಾರಕ್ಕೆ ಬಂದು ಕೆವಲ ಒಂದು ತಿಂಗ ಳಾಗಿದೆ. ತಾಂತ್ರಿಕ ಕಾರಣ ದಿಂದ ೩ ೪ ತಿಂಗಳು ಯೋಜನೆ ಜರಿಗೆ ತಡವಾಗಬ ಹುದು. ಅಷ್ಟ ರಲ್ಲೇ ಜನರ ದಿಕ್ಕು ತಪ್ಪಿಸುವಕೆಲಸ ವನ್ನು ಬಿಜೆಪಿ ಮಾಡುತ್ತಿದೆ. ಅವರಿ ಗಿನ್ನು ಜತಿ, ಧರ್ಮದ ಮೇಲೆ ಓಡಾಟ ಬಿಟ್ಟರೆ ಇನ್ನೇನೂ ಮಾಡಲಾಗುವು ದಿಲ್ಲ ಎಂದರು.
ಕೇಂದ್ರ ಮತ್ತು ರಾಜ್ಯ ಬಿಜೆಪಿ ಸರ್ಕಾರದ ಅವಧಿಯಲ್ಲಿ ವರ್ಷಕ್ಕೆ ೩೦ರಿಂದ ೪೦ಲಕ್ಷ ಯುವಕರು ಉದ್ಯೋಗ ಕಳೆದುಕೊಳ್ಳುತ್ತಿದ್ದಾರೆ. ಗಾಂಧಿಯನ್ನು ಕೊಂದ ಘೋಡ್ಸೆ ಯನ್ನು ಬೆಂಬಲಿಸುವವರಿಂದ ನಾವು ಪಾಠ ಕಲಿಯಬೇಕಾಗಿಲ್ಲ. ನಿರುದ್ಯೋಗ ಸಮಸ್ಯೆ ಬಗ್ಗೆ ಮೋದಿ ಚಕಾರವೆತ್ತುತ್ತಿಲ್ಲ. ಬಿಜೆಪಿಯ ನ್ಯೂನತೆಗಳ ಬಗ್ಗೆಯೂ ಸಾರ್ವಜ ನಿಕರಿಗೆ ತಿಳಿಸಿ ಎಂದು ಮಾಧ್ಯಮಕ್ಕೆ ಮನವಿ ಮಾಡಿದರು.
ಹೆಚ್.ಸಿ. ಯೋಗೀಶ್ ಮಾತ ನಾಡಿ, ಕೋಟ್ಯಂತರ ಜಿಎಸ್‌ಟಿ ತೆರಿಗೆ ನಮ್ಮ ರಾಜ್ಯದಿಂದ ಕೇಂದ್ರಕ್ಕೆ ಹೋಗಿದೆ. ಅವರು ಅಕ್ಕಿಯನ್ನು ಪುಗಸಟ್ಟೆ ಕೊಡುವುದು ಬೇಡ. ಮೆದಲು ಒಪ್ಪಿಕೊಂಡು ಈಗ ನಿರಾಕರಿಸುತ್ತಿರುವುದು ದ್ವೇಷದ ರಾಜಕಾರಣ. ಎಲ್ಲಾ ಅಸೆಂಬ್ಲಿ ಕ್ಷೇತ್ರ ದಲ್ಲೂ ಜನಜಗೃತಿ ಮೂಡಿಸು ತ್ತೇವೆ. ಲೋಕಸಭಾ ಚುನಾವಣೆ ಯಲ್ಲಿ ಜನ ತಕ್ಕ ಪಾಠ ಕಲಿಸುತ್ತಾರೆ ಎಂದರು.
ಸಭೆಯನ್ನುದ್ದೇಶಿಸಿ ಜಿಲ್ಲಾಧ್ಯಕ್ಷ ಹೆಚ್.ಎಸ್. ಸುಂದರೇಶ್, ಮಾಜಿ ಎಂಎಲ್‌ಸಿ ಪ್ರಸನ್ನಕುಮಾರ್, ಇಸ್ಮಾಯಿಲ್ ಖಾನ ಮಾತನಾಡಿ ದರು.
ಈ ಸಂದರ್ಭದಲ್ಲಿ ಎಸ್.ಕೆ. ಮರಿಯಪ್ಪ, ಕಲಗೋಡು ರತ್ನಾ ಕರ್, ಇಕ್ಕೇರಿ ರಮೇಶ್, ದೇವೇಂ ದ್ರಪ್ಪ, ವಿಶ್ವನಾಥ ಕಾಶಿ,ಗಿರೀಶ್, ಶೇಷಾದ್ರಿ, ಚಿನ್ನಪ್ಪ, ಅನಿತಾಕು ಮಾರಿ, ಕವಿತಾ ರಾಘವೇಂದ್ರ, ಸೇರಿದಂತೆ ಹಲವರಿದ್ದರು.