ಸಾಗುವಳಿ ರೈತರ ಮೇಲೆ ದೌರ್ಜನ್ಯಕ್ಕೆ ಖಂಡನೆ…

ಶಿವಮೊಗ್ಗ: ಸಾಗುವಳಿ ರೈತರ ಮೇಲೆ ನಡೆದ ದೌರ್ಜನ್ಯ, ಹ ಖಂಡಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಇಂದು ಜಿಧಿಕಾರಿಗಳ ಮೂಲಕ ಮುಖ್ಯಮಂತ್ರಿ ಹಾಗೂ ರಾಜ್ಯಪಾಲರಿಗೆ ಮನವಿ ಸಲ್ಲಿಸಿ ತಪ್ಪಿತಸ್ಥರ ಮೇಲೆ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿತು.
ತುಮಕೂರು ಜಿ ಗುಬ್ಬಿ ತಾಲೂಕು ಗಂಗಯ್ಯನಪಾಳ್ಯ ಗ್ರಾಮದಲ್ಲಿ ರೈತರು ಸುಮಾರು ಮೂವತ್ತು ನಲವತ್ತು ವರ್ಷಗಳಿಂದ ಕಂದಾಯ ಭೂಮಿಯಲ್ಲಿ ಬಗರ್ ಹುಕುಂ ಸಾಗುವಳಿ ಮಾಡುತ್ತಿzರೆ. ಈಗ ಅರಣ್ಯ ಇಲಾಖೆಯವರು ಈ ಭೂಮಿ ನಮಗೆ ಸೇರಿದೆ ಎಂದು ಗುಂಡಿ ತೆಗೆದು ಸ್ವಾಧೀನ ಪಡಿಸಿಕೊಳ್ಳಲು ಮಾ.೩೦ರಂದು ಗ್ರಾಮಕ್ಕೆ ಬಂದಿದ್ದರು. ರೈತರು ಈ ಭೂಮಿಯೆ ನಮಗೆ ಆಧಾರ. ಭೂಮಿಯನ್ನು ಕಸಿದುಕೊಳ್ಳಬೇಡಿ ಎಂದು ಬೇಡಿಕೊಂಡರೂ ಕೂಡ ಅರಣ್ಯಾಧಿಕಾರಿಗಳು ಕೇಳದೆ ದೌರ್ಜನ್ಯ ಎಸಗಿzರೆ ಎಂದು ದೂರಿದರು.
ಅಲ್ಲದೆ ಮಹಿಳೆಯರು, ವೃದ್ಧರು ಎನ್ನದೆ ಅರಣ್ಯ ಇಲಾಖೆಯ ಅಧಿಕಾರಿಗಳು ದರ್ಪ ತೋರಿ ರೈತರ ತಲೆಯಲ್ಲಿ ರಕ್ತ ಸುರಿಯುವಂತೆ ಹೊಡೆದಿzರೆ. ಅಲ್ಲದೆ ರೈತ ಮುಖಂಡರನ್ನು ಬಂಧಿಸಿzರೆ. ಶಾಂತಿಯುತ ಪ್ರತಿಭಟನೆ ಮಾಡುತ್ತಿ ರುವ ಕ್ರಿಮಿನಲ್ ಮೊಕದ್ದಮೆ ದಾಖಲು ಮಾಡಿzರೆ. ಜೊತೆಗೆ ಮಾರಣಾಂತಿಕ ಹ ನಡೆಸಿzರೆ. ಅರಣ್ಯ ಅಧಿಕಾರಿಗಳ ಮೇಲೆ ಕ್ರಿಮಿನಲ್ ಮೆಕದ್ದಮೆ ದಾಖಲಿಸ ಬೇಕು ಎಂದು ಒತ್ತಾಯಿಸಿದರು.
ಇದರ ಜೊತೆಗೆ ಬೆಂಗಳೂರಿನ ಶಿವರಾಮ ಕಾರಂತ ಬಡಾವಣೆಯ ರೈತರ ಮೇಲ ಬಿಡಿಎ ಅಧಿಕಾರಿಗಳು ದೌರ್ಜನ್ಯ ಎಸಗಿzರೆ. ಅಲ್ಲಿ ರೈತರ ೫ ಎಕರೆ ಸಪೋಟಾ ತೋಟ ನಾಶ ಮಾಡಿzರೆ. ದೌರ್ಜನ್ಯದಿಂದ ರೈತರ ಭೂಮಿ ಕಸಿದು ಕೊಂಡಿ zರೆ. ರೈತ ತಾನು ಕೊಟ್ಟ ಜಮೀನಿ ನಲ್ಲಿಯೇ ಮಾಲೀಕನ ಆಳಾಗಿ ದುಡಿಯುವಂತಹ ಪರಿಸ್ಥಿತಿ ಬಂದಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ರಾಜ್ಯ ರೈತ ಸಂಘದ ರಾಜಧ್ಯಕ್ಷ ಹೆಚ್.ಆರ್. ಬಸವರಾಜಪ್ಪ, ಪದಾಧಿಕಾರಿಗಳಾದ ಇ.ಬಿ. ಜಗದೀಶ್, ಎಸ್. ಶಿವಮೂರ್ತಿ, ಟಿ.ಎಂ. ಚಂದ್ರಪ್ಪ, ಹಿಟ್ಟೂರು ರಾಜು, ಪಂಚಾಕ್ಷರಿ, eನೇಶ್, ಚಂದ್ರಪ್ಪ, ರುದ್ರೇಶ್, ಪಿ.ಡಿ. ಮಂಜಪ್ಪ, ಕೆ. ರಾಘವೇಂದ್ರ ಸೇರಿದಂತೆ ಹಲವರಿದ್ದರು.