ಪೂಜ್ಯಶ್ರೀ ಮರಿಶಾಂತವೀರರ ಪುಣ್ಯಸ್ಮರಣೆ

ಕುಕನೂರ: ಇಲ್ಲಿನ ಶ್ರೀ ಗವಿಸಿದ್ಧೇಶ್ವರ ಪ್ರಾಥಮಿಕ ಮತ್ತು ಪ್ರೌಢ ಶಾಲೆಯಲ್ಲಿ ಶ್ರೀ ಗವಿಮಠ ಪೀಠ ಪರಂಪರೆಯ ೧೬ನೇ ಪೀಠಾಧಿಪತಿ ಪೂಜ್ಯ ಲಿಂ ಶ್ರೀ ಮ ನಿ ಪ್ರ ಸ್ವ ಜಗದ್ಗುರು ಶ್ರೀ ಮರಿಶಾಂತವೀರ ಮಹಾ ಶಿವಯೋಗಿಗಳ ಪುಣ್ಯಸ್ಮರಣೋತ್ಸವ ಕಾರ್ಯಕ್ರಮ ಆಚರಿಸಲಾಯಿತು.
ಕಾರ್ಯಕ್ರಮದಲ್ಲಿ ವಿಶೇಷ ಅತಿಥಿಗಳಾಗಿ ಡಾ.ಕೆ ಬಿ ಬ್ಯಾಳಿ ಇವರು ಪೂಜ್ಯರ ಕುರಿತಾಗಿ ಮಾತನಾಡಿ, ಹಿಂದೆ ಗುರುಗಳು ಮಾಡಿದ ಕಾರ್ಯಗಳನ್ನು ನಾವೆ ಸ್ಮರಿಸಬೇಕು. ಅದು ಅವರಿಗೆ ಸಲ್ಲಿಸಿದ ಕೃತಜ್ಞತೆಯಾಗಿದ್ದು ಶ್ರೀ ಗಳು ಈ ಭಾಗದ ಜನತೆಯ ಆಶಾಕಿರಣವಾಗಿzರೆ ಎಂದರು.
ಅತ್ಯಂತ ಹಿಂದುಳಿದ ಪ್ರದೇಶವಾದ ಈ ಭಾಗವನ್ನ ಶಿಕ್ಷಣ ಸಂಸ್ಥೆ ತರೆಯುವ ಮೂಲಕ eನ ಗಂಗೆಯನ್ನು ಹರಿಸಿದ ಭಗೀರಥರು ಎಂದು ಶ್ರೀ ಗಳು ಕಾಶಿಯಲ್ಲಿ ಅಧ್ಯಯನ ಮಾಡಿ ಸಂಸ್ಕೃತ ಭಾಷೆಯಲ್ಲಿ ಅಪಾರ ಪಾಂಡಿತ್ಯ ಪಡೆದು ಶ್ರೀ ಗವಿಮಠದಲ್ಲಿ ೧೬ನೇ ಪೀಠಾಧ್ಯಕ್ಷರಾದರು ಎಂದು ವಿದ್ಯಾರ್ಥಿಗಳಿಗೆ ತಿಳಿ ಹೇಳಿದರು.


ನಾವು ಅವರ ಪುಣ್ಯ ಸ್ಮರಣೆ ಮಾಡುವದು ಅತ್ಯಂತ ಅರ್ಥಪೂರ್ಣವಾದದು. ಅವರ ಜೀವನ ಕ್ರಮವನ್ನು ಅನುಸರಿಸಿ ಎಂದು ಕರೆ ನೀಡಿದರು.
ಶಿಕ್ಷಣ ಸಂಯೋಜಕ ಗವಿಸಿದ್ಧಪ್ಪ ಕರಮುಡಿ ಶ್ರೀ ಗಳ ಕುರಿತು ಲಿಂಗಾನುಷ್ಠಾನ ಪ್ರೀಯರು ಪವಾಡ ಸದೃಶರಾಗಿ ಈಭಾಗದಲ್ಲಿ ಅನ್ನ , ಅಕ್ಷರ, eನ, ಆಧ್ಯಾತ್ಮಿಕ ವಾಗಿ ಈ ನಾಡನ್ನು ಉzರ ಮಾಡಿದರು. ಕೊನೆಗೆ ಲಿಂಗದ ಬೆಳಗಿನ ಬೆಳಕಲ್ಲಿ ಸದಾ ಲಿಂಗ ಪೂಜ್ಯಯಲ್ಲಿಯೇ ನಿರತರಾಗಿ ೦೧-೭-೧೯೬೭ರಲ್ಲಿ ಲಿಂಗೈಕ್ಯ ರಾದರು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಶಾಲೆಯ ಮುಖ್ಯ ಶಿಕ್ಷಕ ಎಸ್ ಜೆ ಪಾಟೀಲ್ ರವರು ಸಂಸ್ಥೆಯ ಆರಂಭ ಮತ್ತು ಬೆಳವಣಿಗೆ ಕುರಿತು ಇಂದು ಸಂಸ್ಥೆ ಬೆಳೆದು ಹಮ್ಮರವಾಗಿ ಈನಾಡಿನ ಬಡ ಮಕ್ಕಳಿಗೆ ಆಸರೆಯಾಗಿದೆ ಎಂದರಲ್ಲದೇ ಇಂಥಹ ಸಂಸ್ಥೆ ಯಲ್ಲಿ ವಿದ್ಯಾರ್ಜನೆ ಮಾಡುವ ಮತ್ತು ಕಾರ್ಯನಿರ್ವಹಿಸುವ ನಾವು ನೀವೆ ಧನ್ಯರು ಎಂದರು.
ಶರಣಪ್ಪ ಗುಡ್ಲಾನೂರ ಕಾರ್ಯಕ್ರಮ ನಿರೂಪಿಸಿದರು. ಕು|ಈರಮ್ಮ ಪ್ರಾರ್ಥಿಸಿ, ಶಿಕ್ಷಕಿ ಮಂಜುಳಾ ಸ್ವಾಗತಿಸಿ, ವಿ ಆರ್ ಹಿರೇಮಠ ವಂದಿಸಿದರು.