ಮಕ್ಕಳಿಗೆ ಸಂಸ್ಕಾರ ವೈಭವ ಕಾರ್ಯಕ್ರಮಗಳಿಂದ ಸನಾತನ ಸಂಸ್ಕೃತಿ ಅರಿಯಲು ಸಾಧ್ಯ: ಸ್ವಾಮೀಜಿ

p2

ಹೊನ್ನಾಳಿ: ಸನಾತನ ಭವ್ಯ ಸಂಸ್ಕೃತಿಯನ್ನು ಅರಿಯಲು ಇಂದಿನ ಯುವ ಪಿಳಿಗೆಗೆ ಸುಸಂಸ್ಕೃತ ಸಂಸ್ಕಾರ ವೈಭವ ಕಾರ್ಯಕ್ರಮ ಹಮ್ಮಿ ಕೊಂಡಿರುವ ಶಿಬಿರದ ಸಂಚಾಲಕಿ ಪ್ರತಿಮಾ ನಿಜಗುಣ ಶಿವಯೋಗಿ ಯವರ ಕಾರ್ಯದ ಬಗ್ಗೆ ತಮ್ಮ ಮೆಚ್ಚುಗೆ ವ್ಯಕ್ತಪಡಿಸಿ, ಈ ಕಾರ್ಯ ನಿರಂತರವಾಗಿ ಸಾಗಲಿ ಎಂದು ಹೊನ್ನಾಳಿ ಶ್ರೀ ಚನ್ನಮಲ್ಲಿಕರ್ಜುನ ಸ್ವಾಮಿಜಿ ಹೇಳಿದರು.
ಹೊನ್ನಾಳಿ ಹಿರೇಕಲ್ಮಮಠದಲ್ಲಿ ನಡೆದ ಹೊನ್ನಾಳಿ ತಾಲೂಕು ಶರಣ ಸಾಹಿತ್ಯ ಪರಿಷತ್, ಮಹಿಳಾ ಕದಳಿ ವೇದಿಕೆ ಹಮ್ಮಿಕೊಂಡಿದ್ದ ಅಕ್ಕಮಹಾ ದೇವಿ ಜಯಂತಿ ಮತ್ತು ದತ್ತಿ ಉಪನ್ಯಾಸ ಕಾರ್ಯಕ್ರಮ ಸುಸಂ ಸ್ಕೃತ ಸಂಸ್ಕಾರ ವೈಭವ ಸಮಾರೂಪ ಉದ್ಘಾಟಿಸಿ ಮಾತನಾಡಿದರು.
ಅಧ್ಯಕ್ಷತೆ ವಹಿಸಿದ್ದ ಕದಳಿ ಮಹಿಳಾ ವೇದಿಕೆ ತಾಲೂಕು ಅಧ್ಯಕ್ಷೆ ಪ್ರತಿಮಾ ಅವರು ಮಾತನಾಡಿ, ಅಭಿನೇತ್ರಿ ಡ್ಯಾನ್ಸ್ ಮತ್ತು ಮ್ಯೂಸಿಕ್ ಅಕಾಡೆಮಿ ವತಿಯಿಂದ ಹಮ್ಮಿಕೊಮಡಿರುವ ಚಟುವಟಿಕೆಗಳ ಬಗ್ಗೆ ವಿವರಿಸಿದರು.
ಅಕ್ಕಮಹಾದೇವಿಯವರ ಜೀವನ ದೃಷ್ಠಿ ಎಂಬ ವಿಷಯವಾಗಿ ಪ್ರಾಚಾರ್ಯರಾದ ಎಂ ಮಮತಾ ಮಾತನಾಡಿದರು.
ಸಮಾರಂಭದಲ್ಲಿ ಸಾಹಿತಿ ಸಂಗನಾಳಮಠ, ಶಾರದ ಕಣಗೊಟಗಿ ಮಾತನಾಡಿದರು. ದಾವಣಗೆರೆ ಫೋಲ್ ಚಂದ್ ದತ್ತಿದಾನಿ ಕಾರ್ಯಕ್ರಮದಲ್ಲಿ ಕಡದಕಟ್ಟಿ ತಿಮ್ಮಪ್ಪ ಅಕ್ಕಮಹಾದೇವಿ ಬಗ್ಗೆ ವಾಚನಗಾಯನ ನಡೆಸಿ ಕೊಟ್ಟರು. ಸಿದ್ಧಯ್ಯ, ಮುರು ಗೇಂದ್ರಯ್ಯ, ಧನರಾಜ್, ದಾವಣಗೆರೆ ಎನ್‌ಎಸ್ ರಾಜು, ಕದಳಿ ವೇದಿಕೆಯ ವೀಣಾ ಸುರೇಶ್, ಸುಮಾ ರವಿ, ಗೀತಾ ಹಿರೇಮಠ, ಚಂದ್ರಕಲಾ ರಾಜೇಶ್ವರಿ ಇನ್ನಿತರರಿದ್ದರು.