22

ಬದುಕೆಂಬ ಸುಂದರ ಬಿಳಿಯ ಪುಟಗಳಲ್ಲಿ ಜೀವಿತದ ಪ್ರತಿ ಕ್ಷಣವನ್ನು ರಂಗು ಗೊಳಿಸಿ ಚಿತ್ತಾರ ವೂಡಿಸಬೇಕು. ಇರುವ ಸಮಯದಲ್ಲಿ ಮನೋ ಇಚ್ಛಾನುಸಾರ ಪರರನ್ನು ಘಾಸಿಮಾಡದೆ ಒಂದು ಸ್ಮೈಲ್ ಜೊತೆಗೆ ಎಲ್ಲವನ್ನು ಮರೆತಂತೆ ಬದುಕಿ ಬಿಡಿ . ನೋಡಿ ! ಜೀವನವೆಂದರೆ ಸಾಕಷ್ಟು ಕಷ್ಟ ಸುಖಗಳ ನಾಟಕದ ಸನ್ನಿವೇಶಗಳಾಗಿವೆ ಎ ಸಂಗತಿಗಳನ್ನು ಸಮವಾಗಿ ತೆಗೆದುಕೊಂಡು ಮುಂಬರುವ ಸಮಯಕ್ಕೆ ಮಹತ್ವಾಕಾಂಕ್ಷೆ ಇಟ್ಟುಕೊಳ್ಳುವುದೇ ಜೀವನ. ಬದುಕಲ್ಲಿ ವಿದ್ಯಾಭ್ಯಾಸದಲ್ಲಿ ಫೇಲ್ ಆಗಬಹುದು, ಲವ್ ಫೇಲ್ ಆಗಬಹುದು, ಮತ್ತೆ ಬ್ಯುಸಿನೆಸ್ ಫೇಲ್ ಆಗಬಹುದು ಆದರೆ ನಮ್ಮಲ್ಲಿಯ ಆತ್ಮಸ್ಥೈರ್ಯ ಎಂದಿಗೂ ಫೇಲ್ ಆಗಬಾರದು. ನಿಜ ಆ ಸಮಯದಲ್ಲಿ ನಮಗೆ ಜೀವನವೇ ಬೇಡ ನಾನು ಬದುಕಿದ್ದು ವ್ಯರ್ಥ ಎಂದೆನಿಸಬಹುದು ಜೊತೆಗೆ ಮುಂದೆ ನನಗೆ ಯಾವ ಮಾರ್ಗಗಳು ಇಲ್ಲ ಎಂದು ಕೈಚಳ್ಳಿ ಕುಳಿತುಕೊಳ್ಳಬಹುದು ಹೀಗೆ ಮಾಡಿದರೆ ನಾವು ನಿಜವಾಗಿ ಅಲ್ಲಿ ಫೇಲಾಗುತ್ತೇವೆ. ಆದ್ದರಿಂದ ಬಂದಂತಹ ಆ ಕೆಟ್ಟ ಸಮಯವನ್ನು ಬೇರೊಂದು ಕಾರ್ಯದಲ್ಲಿ ಮಘ್ನರಾಗುವ ಮೂಲಕ ಅದನ್ನು ನಾವು ಸಮತೋಲಿಸಬಹುದು, ಕೆಳಗೆ ಬಿದ್ದ ಸಂಗತಿಯಿಂದಲೇ ಬೇರೆ ಯಶಸ್ವಿ ಮಾರ್ಗದ ಶೋಧನೆ ಮಾಡಬೇಕು.ಆಗ ಜೀವನದಲ್ಲಿ ಬದಲಾವಣೆಯ ಪರ್ವ ಪ್ರಾರಂಭವಾಗುವುದು.
ಹೀಗೆ ಒಂದು ಕಥೆ ಸಾಗರ್ ಎನ್ನುವ ಯುವಕ ನೋಡಲು ತುಂಬಾ ಸುಂದರನಾಗಿದ್ದ ಆದರೆ ಏನು ಮಾಡುವುದು ವಿದ್ಯೆ ಸ್ವಲ್ಪವೂ ಅವನತ್ತ ಸುಳಿಯಲಿ, ಮನೆಯಲ್ಲಿ ಪಾಲಕರು ಟ್ಯೂಷನ್ ಅದು ಇದು ಅಂತ ಸಾಕಷ್ಟು ಪ್ರೋತ್ಸಾಹ ಕೊಟ್ಟರು ಎಸ್ ಎಸ್ ಎಲ್ ಸಿ ಯಲ್ಲಿ ಕೇವಲ ೪೨ ಶ್ರೇಣಿಯನ್ನು ಪಡೆದುಕೊಂಡನು , ಹಾಳಾಗಿ ಹೋಗ್ಲಿ ಅಂತ ಪಿಯು ಕಾಲೇಜಿಗೆ ಸೇರಿಸಿದರು ಅಲ್ಲಿಯೂ ಅವನಿಗೆ ಓದಲು ಇಷ್ಟವಿಲ್ಲ ಒತ್ತಾಯದ ಮೇರೆಗೆ ಕಾಲೇಜಿಗೆ ಹೋಗುತ್ತಿದ್ದ ಆಗ ಅಲ್ಲಿ ಒಬ್ಬ ಶಾಲಿತ ಎನ್ನುವಂತಹ ಹುಡುಗಿ ನೋಡಲು ತುಂಬಾ ಸುಂದರ ಹಾಗೂ ಬುದ್ಧಿವಂತಳಾಗಿದ್ದಳು, ಅವಳನ್ನು ನೋಡಿದ ಮೇಲೆ ಇವನಿಗೆ ಅವಳಲ್ಲಿ ಒಲವು ಮೂಡಿತು ಹೇಗಾದರೂ ಮಾಡಿ ಅವಳಲ್ಲಿ ತನ್ನ ಪ್ರೀತಿಯ ನಿವೇದನೆಯನ್ನು ಮಾಡಬೇಕೆಂದು ಸಾಕಷ್ಟು ಗಿಮಿಕ್ ಗಳನ್ನು ಮಾಡತೊಡಗಿದ,ಅದರಲ್ಲಿ ಒಂದು ಗ್ರಂಥಾಲಯಕ್ಕೆ ಹೋಗಿ ಓದುವ ಕೆಲಸ. ದಿನಾಲು ಶಾಲಿತಾಳು ಗ್ರಂಥಾಲಯಕ್ಕೆ ಹೋಗಿ ಅಭ್ಯಾಸವನ್ನು ಮಾಡುತ್ತಿದ್ದಳು ಅವನು ಕೂಡ ಗ್ರಂಥಾಲಯಕ್ಕೆ ಹೋಗಿ ಅವಳಿಗೋಸ್ಕರ ಕೆಲ ಪುಸ್ತಕಗಳನ್ನು ತಿರವಿ ಹಾಕುತ್ತಿದ್ದ ಹೀಗೆ ದಿನಾಲು ಗ್ರಂಥಾಲಯಕ್ಕೆ ಹೋಗುವುದು ರೂಢಿಯಾಗಿ ಅವನು ಪುಸ್ತಕ ಪ್ರೇಮಿಯಾದ. ಶಾಲಿತಾಳ ಪ್ರೀತಿಯ ಗೀಳಿಗಿಂತಲೂ, ಸಾಗರ ಪುಸ್ತಕದ ಗೀಳನ್ನು ಹೆಚ್ಚಾಗಿ ತಲೆಗೆ ಹಚ್ಚಿಕೊಂಡನು ಮುಂದೆ ಉತ್ತಮ ಓದುಗಾರನಾಗಿ ಬದಲಾ(ಚೇಂಜ್)ದನು . ಅವನ ಬುದ್ಧಿಮಟ್ಟದಲ್ಲಿ ಸಾಕಷ್ಟು ಬದಲಾವಣೆಯಾಯಿತು ಒಂದೊಮ್ಮೆ ಶಾಲಿತ ಲೈಬ್ರರಿಗೆ ಹೋಗದೆ ಇದ್ದರೂ ಕೂಡ ಸಾಗರ ಹೋಗಿ ಪುಸ್ತಕಗಳನ್ನು ಓದಿ eನವನ್ನು ಪಡೆದುಕೊಳ್ಳುತ್ತಿದ್ದ ಮುಂದೆ ಕಾಲೇಜಿನ ಟಾಪರ್ ಆಗಿ ಹೊರಬಂದ ಹೀಗೆ ಉತ್ತಮ ಅಧ್ಯಯನದಿಂದ ಸಾಗರನು ದೊಡ್ಡ ಆಫೀಸರ್ ಹುz ಏರಿದ ಆದರೆ ಸಾಗರ್ ಈ ಹಿಂದೆ ಲೈಬ್ರರಿಗೆ ಬಂದ ಉದ್ದೇಶವೇ ಬೇರೆಯಾಗಿತ್ತು ಆದರೆ ಅವನದ ಬದಲಾವಣೆಯು (ಚೇಂಜಸ್) ಅವನನ್ನು ಉತ್ತಮ ಜೀವನ ರೂಪಿಸಿಕೊಳ್ಳುವುದರಲ್ಲಿ ಸಹಾಯ ಮಾಡಿತು ಆ ಚೇಂಜಸ್ ಅನ್ನು ಬಳಸಿಕೊಂಡ ಸಾಗರ್ ಎಲ್ಲರಿಗೂ ಮಾದರಿ ವ್ಯಕ್ತಿಯಾದ. ಆದರೆ ಇಷ್ಟು ದೊಡ್ಡ ಗಿಫ್ಟ್ ಕೊಟ್ಟ ಶಾಲಿ ತಾಳಿಗೆ ಕೊನೆತನಕವೂ ಅವನು ಲವ್ ಯು ಹೇಳಲೇ ಇ ! ಹೀಗೆ ಬದುಕಿನಲ್ಲಿ ನಮಗೆ ತಿಳಿದೋ ತಿಳಿಯದೆಯೋ ನಮ್ಮ ಓಟದ ಮಾರ್ಗವು ಚೇಂಜ್ ಆಗುವುದು ಆಗ ನಾವುಗಳು ಆ ಚೇಂಜಸ್ಗಳಿಗೆ ಹೊಂದಿಕೊಂಡು ಬದುಕು ಸಾಗಿಸಿದರೆ ಯಶಸ್ವಿ ಖಂಡಿತವಾಗಿಯೂ ದೊರೆಯುವುದು.
ಅಶ್ವಿನಿ ಅಂಗಡಿ, ಬದಾಮಿ.