ಜನಗಣತಿ ಸಮೀಕ್ಷಾ ವರದಿ ಚರ್ಚೆಗೆ ಬಿಡಿ….
ಶಿವಮೆಗ್ಗ : ರಾಜ್ಯ ಸರ್ಕಾರ ಸಾಮಾಜಿಕ ಶೈಕ್ಷಣಿಕ ಜನಗಣತಿ ಸಮೀಕ್ಷೆ ವರದಿಯನ್ನು ಅಂಗೀಕರಿಸಿದ್ದು, ಕೂಡಲೇ ಅದನ್ನು ಸಾರ್ವಜನಿಕ ಚರ್ಚೆಗೆ ಬಿಡಬೇಕು ಎಂದು ಜಿ ಹಿಂದುಳಿದ ಜತಿಗಳ ಒಕ್ಕೂಟದ ಮುಖಂಡ ಹಾಗೂ ಮಾಜಿ ವಿಧಾನಪರಿಷತ್ ಸದಸ್ಯ ಆರ್.ಕೆ. ಸಿದ್ದರಾಮಣ್ಣ ಅವರು ಸುದ್ದಿಗೋಷ್ಟಿಯಲ್ಲಿ ಆಗ್ರಹಿಸಿದರು.
೨೦೧೮ರಲ್ಲಿಯೇ ಸಾಮಾಜಿಕ ಶೈಕ್ಷಣಿಕ ಜನಗಣತಿ ಸಮೀಕ್ಷೆ ಮುಗಿದಿತ್ತು. ಅನಂತರದಲ್ಲಿ ಯಾವ ಸರ್ಕಾರಗಳು ಕೂಡ ಅದನ್ನು ಅಂಗೀಕರಿಸಲಿಲ್ಲ. ಅಂದಿನಿಂದಲೇ ನಮ್ಮ ಒಕ್ಕೂಟ ಹೋರಾಟ ನಡೆಸುತ್ತ ಬಂದಿತ್ತು. ರಾಜ್ಯ ಸರ್ಕಾರ ಇತ್ತೀಚಿಗೆ ಈ ವರದಿ ಸ್ವೀಕಾರ ಮಾಡಿದೆ. ಆದರೆ, ಅದನ್ನು ವಿಳಂಬ ಮಾಡದೇ ಕೂಡಲೇ ಸರ್ಕಾರದಿಂದಲೂ ಅಧ್ಯಯನ ಮಾಡಬೇಕು. ಮತ್ತು ಅದನ್ನು ಸಾರ್ವಜನಿಕ ಚರ್ಚೆಗೆ ಬಿಡ ಬೇಕು. ಅಧ್ಯಯನ ನಡೆಸಲು ಸರ್ಕಾರದ ಮಟ್ಟದಲ್ಲಿ ಉನ್ನತ ಮಟ್ಟದ ಸಮಿತಿ ರಚಿಸಬೇಕು ಎಂದು ಆಗ್ರಹಿಸಿದರು.
ಸಿದ್ದರಾಮಯ್ಯನವರು ಈ ಹಿಂದೆ ಮುಖ್ಯಮಂತ್ರಿಯಾಗಿ zಗ ಹಿಂದುಳಿದ ಆಯೋಗದಿಂದ ಕಾಂತರಾಜ್ ವರದಿಯನ್ನು ಸಿದ್ದಪಡಿಸಿದ್ದು ಇದಕ್ಕಾಗಿ ೨೦೦ ಕೋಟಿ ರೂ. ಗಳು ವೆಚ್ಚವಾಗಿದೆ. ಇದೊಂದು ಎ ಸಮುದಾಯ ಗಳ ಸಾಮಾಜಿಕ, ಆರ್ಥಿಕ ಹಾಗೂ ಶೈಕ್ಷಣಿಕ ಸಮೀಕ್ಷೆ ಯಾಗಿದೆ. ಇದರ ಅನ್ವಯ ಜತಿ ಗಣತಿಯಾಗ ಬೇಕು ಮತ್ತು ಜನಸಂಖ್ಯೆಗೆ ಅನುಗುಣ ವಾಗಿ ಸಾಮಾಜಿಕ, ಆರ್ಥಿಕ , ರಾಜಕೀಯ ಮೀಸಲಾತಿ ನೀಡ ಬೇಕಾಗಿದೆ ಎಂದರು.
ಒಕ್ಕೂಟದ ಜಿಧ್ಯಕ್ಷ ವಿ. ರಾಜು ಮಾತನಾಡಿ, ಶಿವಮೊಗ್ಗ ನಗರದ ಬಾಲರಾಜ್ ಅರಸ್ ರಸ್ತೆಯಲ್ಲಿ ದಿ.ದೇವರಾಜ್ ಅರಸ್ ಭವನ ನಿರ್ಮಾಣ ಗೊಂಡಿರುತ್ತದೆ. ಈ ಕಾಮಗಾರಿ ಪೂರ್ಣಗೊಳಿಸಲು ೩ ಕೋಟಿ ಅನುದಾನಗಳ ಅನುದಾನವನ್ನು ಕೇಂದ್ರ ಸರ್ಕಾರ ಬಿಡುಗಡೆ ಗೊಳಿಸಲು ನಿರ್ಧರಿಸಿದೆ. ಇದಕ್ಕಾಗಿ ಪ್ರಧಾನಿ ಮೋದಿ ಹಾಗೂ ಕೇಂದ್ರ ಸಚಿವ ಸಂಪುಟದಲ್ಲಿ ಕರ್ನಾಟಕದಿಂದ ಆಯ್ಕೆಯಾದ ಸಚಿವರನ್ನು ಮತ್ತು ಸಂಸದ ಹಾಗೂ ಶಾಸಕರನ್ನು ಒಕ್ಕೂಟ ಅಭಿನಂದಿಸುತ್ತದೆ ಎಂದರು.
ರಾಜ್ಯ ಸರ್ಕಾರ ಇತ್ತೀಚೆಗೆ ಗುತ್ತಿಗೆ ಆಧಾರದಲ್ಲಿ ನೇಮಕ ಮಾಡಿಕೊಳ್ಳುವ ಉದ್ಯೋಗ ಗಳಲ್ಲಿ ಮೀಸಲಾತಿ ಅನ್ವಯಿಸುವುದನ್ನು ಕಡ್ಡಾಯ ಮಾಡಿ ಆದೇಶ ಹೊರಡಿಸಿರುವುದು ಸ್ವಾಗತರ್ಹ ಕ್ರಮವಾಗಿದೆ. ಖಾಸಗಿವಲಯ ದಲ್ಲೂ ಮೀಸಲಾತಿ ಜರಿಗೆ ತರ ಬೇಕು. ಖಾಲಿಯಿರುವ ಹುz ಗಳನ್ನು ಭರ್ತಿ ಮಾಡಿಕೊಳ್ಳಬೇಕು ಎಂದರು.
ಒಕ್ಕೂಟದ ಪ್ರಧಾನ ಕಾರ್‍ಯ ದರ್ಶಿ ಎಸ್.ಬಿ. ಅಶೋಕ್ ಕುಮಾರ್, ಪ್ರಮುಖರಾದ ಗಿರಿಯಪ್ಪ, ರಾಜೇಶ್, ಲೋಕೇಶ್, ಚಂದ್ರಶೇಖರ್, ಶಾರದಮ್ಮ, ನಾಗರತ್ನ ಮುಂತಾ ದವರು ಇದ್ದರು.