ಕೇಂದ್ರದಲ್ಲಿ ಮೋದಿ ಆಡಳಿತಕ್ಕೆ ೯ ವರ್ಷದ ಸಂಭ್ರಮ…

ಶಿವಮೊಗ್ಗ: ಇಂದಿಗೆ ಕೇಂದ್ರದ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರಕ್ಕೆ ಒಂಭತ್ತು ವರ್ಷ ತುಂಬಿದ್ದು, ಪ್ರತಿ ೫ ಲೋಕಸಭೆ ಹಾಗೂ ೫ ವಿಧಾನಸಭಾ ಸ್ತರದಲ್ಲಿ ವಿಶೇಷವಾಗಿ ಆಚರಣೆ ಮಾಡಲು ರಾಷ್ಟ್ರೀಯ ಸಂಘಟನೆ ತೀರ್ಮಾನಿ ಸಿದೆ ಎಂದು ಜಿಲ್ಲಾ ಬಿಜೆಪಿ ಅಧ್ಯಕ್ಷ ಟಿ.ಡಿ. ಮೇಘರಾಜ್ ಸುದ್ದಿ ಗೋಷ್ಟಿಯಲ್ಲಿ ಹೇಳಿದರು.
ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಬಂದಮೇಲೆ ಆರ್ಟಿಕಲ್ ೩೭೦ ರದ್ದು, ರಾಮಮಂದಿರ ನಿರ್ಮಾ ಣ, ತ್ರಿಬಲ್ ತಲಾಖ್, ಹನ್ನೊಂ ದು ಕೋಟಿ ಶೌಚಾಲಯ ನಿರ್ಮಾ ಣ, ಕೊರೋನಾ ಸಂಕಷ್ಟದಲ್ಲಿ ಎರಡು ವರ್ಷಗಳ ಕಾಲ ದೇಶದ ಜನರಿಗೆ ಆರೋಗ್ಯ ರಕ್ಷಣೆ ಮಾಡಿ ಇನ್ನೂರು ಕೋಟಿ ವ್ಯಾಕ್ಷಿನೇಷನ್ ಸೇರಿದಂತೆ ಮಹತ್ತರ ಸಾಧನೆ ಮಾಡಿ ವಿಶ್ವ ನಾಯಕ ಎನಿಸಿಕೊಂ ಡಿದ್ದಲ್ಲದೆ ಅಭಿವೃದ್ಧಿಯಲ್ಲೂ ವೇಗ ದ ಮುನ್ನಡೆ ಸಾಧಿಸಿದೆ ಎಂದರು.


ಮೇ ೩೦ರ ಇಂದಿನಿಂದ ಜೂ. ೩೦ರವರೆಗೆ ಈ ವಿಶೇಷ ಕಾರ್ಯ ಕ್ರಮ ಹಮ್ಮಿಕೊಳ್ಳಲಾಗಿದ್ದು, ಪ್ರತಿ ವಾರ್ಡ್ ಗಳಲ್ಲಿ ಕನಿಷ್ಟ ೨೫೦ ಜನರ ಭೇಟಿ ಮಾಡಿ ಅವರನ್ನು ಸಂಪ ರ್ಕಿಸಿ ಸರ್ಕಾರದ ಬಗ್ಗೆ ಮಾಹಿತಿ ಪಡೆಯುವ ಸಂಪರ್ಕ ಸಮರ್ಥನಾ ಕಾರ್ಯಕ್ರಮ ನಡೆಯಲಿದೆ. ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ ೨೦೦೦ಕ್ಕೂ ಹೆಚ್ಚು ಕೀ ವೋಟರ್‌ಗಳನ್ನು ಸೇರಿಸಿ ಸಮಾವೇಶ ಹಮ್ಮಿಕೊಳ್ಳಲಾಗು ವುದು. ಇದಕ್ಕೆ ಕೇಂದ್ರದ ಓರ್ವ ಮಂತ್ರಿ ಹಾಗೂ ರಾಜ್ಯದ ಮುಖಂ ಡರು ಭಾಗವಹಿಸು ತ್ತಾರೆ. ಕೇಂದ್ರ ದ ಪ್ರಾಯೋಜಿತ ಯೋಜನೆಗಳ ಬಗ್ಗೆ ವಿಚಾರ ವಿನಿಮಯ, ಅಭಿ ವೃದ್ಧಿ ಕಾರ್ಯಗಳ ಸ್ಥಳ ವೀಕ್ಷಣೆ ಮತ್ತು ನಿರ್ವಹಣೆ ಬಗ್ಗೆ ಪರಿಶೀ ಲನೆ ಮಾಡುವುದರ ಮೂಲಕ ಸಂವೇದನಾ ವಿಕಾಸ ಯಾತ್ರೆ ನಡೆಸಲಾಗುವುದು ಎಂದರು.
ವ್ಯಾಪಾರಿಗಳ ಸಮಾವೇಶ ಮಾಡಿ ಸಂವಾದ ಏರ್ಪಡಿಸಿ ಅವ ರಿಗೆ ಸುಗಮ ಕಾರ್ಯಕ್ಕೆ ಅನು ಕೂಲ ಮಾಡುವ ನಿಟ್ಟಿನಲ್ಲಿ ಅಭಿ ಪ್ರಾಯ ಸಂಗ್ರಹ ಮಾಡುವುದು. ಎಲ್ಲಾರೂ ಒಟ್ಟಾಗಿ ಮನೆಮನೆಗೆ ಭೇಟಿ ಮಾಡುವ ಕಾರ್ಯಕ್ರಮ ವನ್ನು ಕೂಡ ಈ ಅಭಿಯಾನದಲ್ಲಿ ಹಮ್ಮಿಕೊಳ್ಳಲಾಗಿದೆ. ಮುಂಬರುವ ಜಿಪಂ, ತಾಪಂ, ಮಹಾನಗರ ಪಾಲಿಕೆ ಮತ್ತು ಮುಂದಿನ ಲೋಕಸಭಾ ಚುನಾವಣೆಗೆ ಪೂರ್ಣ ಪ್ರಮಾಣದಲ್ಲಿ ಬಿಜೆಪಿ ಸಿದ್ಧತೆ ಮಾಡಿಕೊಂಡಿದೆ ಎಂದರು.


ವಿಧಾನಸಭಾ ಮಟ್ಟದಲ್ಲಿ ಬಿಜೆಪಿಯ ಹಿರಿಯ ಕಾರ್ಯ ಕರ್ತ ರು ಮತ್ತು ಹಿರಿಯ ನಾಯಕರಿಂದ ಅಭಿಪ್ರಾಯ ಸಂಗ್ರಹಿಸಿ ಅವರ ಸಲಹೆ ಪಡೆಯುವುದು, ದೊಡ್ಡ ಪ್ರಮಾಣ ದಲ್ಲಿ ಫಲಾನುಭವಿಗಳ ಸಭೆ ನಡೆಸಿ ಅಭಿಪ್ರಾಯ ಸಂಗ್ರಹ ಮಾಡುವುದು, ಬಿಜೆಪಿಯಲ್ಲಿ ಎಲ್ಲಾ ಮೋರ್ಚಾಗಳು ಪ್ರಮುಖ ಪಾತ್ರ ವಹಿಸುತ್ತಿದ್ದು, ಎಲ್ಲಾ ಮೋ ರ್ಚಾಗಳ ಸಂಯುಕ್ತ ಸಮಾವೇಶ ಹಮ್ಮಿಕೊಳ್ಳುವುದು. ಜೂ. ೨೧ ರಂದು ಅಂತರ ರಾಷ್ಟ್ರೀಯ ಯೋಗದಿನ ವಾಗಿದ್ದು, ಎಲ್ಲಾ ವಿಧಾನಸಭಾ ಕ್ಷೇತ್ರಗಳಲ್ಲಿ ಸಂಘ ಸಂಸ್ಥೆಗಳು ಮತ್ತು ಯೋಗ ಸಂಸ್ಥೆಗಳೊಂದಿಗೆ ಜೊತೆ ಯಾಗಿ ಯೋಗ ದಿನಾಚರಣೆ ಆಚರಿಸು ವುದು. ಜೂ.೨೩ರಂದು ಶ್ಯಾಮ್ ಪ್ರಸಾದ್ ಮುಖರ್ಜಿಯವರ ಬಲಿ ದಾನದ ದಿನವಾಗಿದ್ದು, ಪ್ರಧಾನಿ ಮೋದಿಯವರು ಡಿಜಿಟಲ್ ರ್‍ಯಾಲಿ ಹಮ್ಮಿಕೊಂಡಿದ್ದು, ಬೂತ್ ಮಟ್ಟದಲ್ಲಿ ಎಲ್‌ಇಡಿ ಸ್ಕ್ರೀನ್ ಅಳವಡಿಸಿ ಅಥವಾ ದೊಡ್ಡ ಮನೆಗಳಲ್ಲಿ ಎಲ್ಲರೂ ಸೇರಿ ವೀಕ್ಷಣೆ ಮಾಡುವುದು. ಜೂ.೨೫ ರಂದು ತುರ್ತು ಪರಿಸ್ಥಿತಿ ಹೇರಿದ ಕರಾಳ ದಿನವಾಗಿದ್ದು ಈ ದಿನದಂದು ತುರ್ತು ಪರಿಸ್ಥಿತಿಯ ಸಂದರ್ಭದ ಅವಲೋಕನ ಮಾಡುವುದು. ಜೂ.೨೩ರಿಂದ ೩೦ರವರೆಗೆ ಸಾಧನೆ ಮತ್ತು ಸರ್ಕಾರದ ಭರವಸೆಯ ವಿಷಯಗಳನ್ನು ಕರಪತ್ರಗಳ ಮೂಲಕ ಹಂಚಿಕೆ ಮಾಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾ ಗಿದ್ದು, ೩೦ ದಿನದ ಈ ಕಾರ್ಯ ಕ್ರಮದ ಜಿಲ್ಲಾ ಸಂಚಾಲನಾ ತಂಡ ವನ್ನು ಈಗಾಗಲೇ ರಚಿಸಲಾಗಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಗಿರೀಶ್ ಪಟೇಲ್, ಡಾ. ಧನಂಜ ಯ ಸರ್ಜಿ, ಹರಿಕೃಷ್ಣ, ಶಿವರಾಜ್, ಶ್ರೀನಾಥ್, ಅಶೋಕ ಮೂರ್ತಿ, ಎನ್.ಡಿ. ಸತೀಶ್, ರೋಡ್ರಿಗಸ್, ಪ್ರಶಾಂತ್ ಪಂಡಿತ್, ಇದ್ದರು.