ಕಾವೇರಿ ವಿವಾದ: ಚಿತ್ರನಟ -ನಟಿಯರ ಮೌನಕ್ಕೆ ಜಯಕರ್ನಾಟಕ ಜನಪರ ವೇದಿಕೆ: ಆಕ್ರೋಶ
ಶಿಕಾರಿಪುರ : ರಾಜದ್ಯಂತ ಕಾವೇರಿ ನೀರಿಗಾಗಿ ಹೋರಾಟದ ಕಾವು ಹೆಚ್ಚಾಗಿದ್ದು,ಹೋರಾಟದಲ್ಲಿ ಪಾಲ್ಗೊಂಡು ಬೆಂಬಲ ಸೂಚಿಸಬೇಕಾದ ಚಿತ್ರ ನಟರು ಮಾತ್ರ ಚಲನಚಿತ್ರದಲ್ಲಿ ನಾಯಕರಾಗಿ ನಿಜ ಜೀವನದಲ್ಲಿ ಖಳನಾಯಕರ ರೀತಿ ಹೋರಾಟ ವನ್ನು ಬೆಂಬಲಿಸದೆ ಮೌನಕ್ಕೆ ಶರಣಾಗಿ ಸಮಸ್ತ ಕನ್ನಡಿಗರು ನಾಡಿಗೆ ದ್ರೋಹ ಬಗೆಯುತ್ತಿzರೆ ಎಂದು ಜಯಕರ್ನಾಟಕ ಜನಪರ ವೇದಿಕೆಯ ಜಿ ಪ್ರಧಾನ ಕಾರ್ಯದರ್ಶಿ ಕೃಷ್ಣ ಹುಲಗಿ ಸುದ್ದಿ ಗೋಷ್ಟಿಯಲ್ಲಿ ಆರೋಪಿಸಿದರು.
ಕಾವೇರಿ ನದಿ ನೀರು ಹಂಚಿಕೆ ಯಲ್ಲಿ ರಾಜ್ಯಕ್ಕೆ ಅನ್ಯಾಯವಾಗಿದ್ದು ಸರ್ವೋಚ್ಚ ನ್ಯಾಯಾಲಯ ಹಾಗೂ ಪ್ರಾಧಿಕಾರದ ಆದೇಶದ ವಿರುದ್ದ ರಾಜಧಾನಿ ಬೆಂಗಳೂರಿನಲ್ಲಿ ಹೋರಾಟದ ಕಿಚ್ಚು ಹೆಚ್ಚಾಗುತ್ತಿದೆ ಈ ದಿಸೆಯಲ್ಲಿ ಜಯಕರ್ನಾಟಕ ಜನಪರ ವೇದಿಕೆ ಹೋರಾಟದ ಮುಂಚೂಣಿ ವಹಿಸಿದೆ ಎಂದು ತಿಳಿಸಿದ ಅವರು, ಚಿತ್ರ ನಟರು ಮಾತ್ರ ಪರದೆಯಲ್ಲಿ ದೊಡ್ಡ ಡೈಲಾಗ್‌ಗಳಿಗೆ ಸೀಮಿತವಾಗಿ ಹೋರಾಟ ಪ್ರತಿಭಟನೆಗೆ ಸಂಬಂಧವಿಲ್ಲ ಎಂಬಂತೆ ವರ್ತಿಸುತಿ zರೆ ಹೊರರಾಜ್ಯದಲ್ಲಿ ಚಲನಚಿತ್ರ ವನ್ನು ಬಹಿಷ್ಕರಿಸುವ ಆತಂಕದಿಂದ ಕನ್ನಡಕ್ಕೆ ದ್ರೋಹ ಬಗೆಯಲು ಸಿದ್ದರಾಗಿzರೆ ಎಂದು ಆಕ್ರೋಶ ವ್ಯಕ್ತಪಡಿಸಿ ಈ ಹಿಂದೆ ಗೋಕಾಕ್ ಮತ್ತಿತರ ಚಳುವಳಿಯಲ್ಲಿ ಡಾ| ರಾಜ್‌ಕುಮಾರ್ ಪಾಲ್ಗೊಂಡು ಎಲ್ಲಕ್ಕಿಂತ ನಾಡು ಶ್ರೇಷ್ಟ ಎಂದು ಮಾದರಿಯಾಗಿದ್ದು ಅಂತಹ ದಿಟ್ಟ ದೈರ್ಯ ನಡೆಯನ್ನು ನಟರು ಪ್ರದರ್ಶಿಸುವ ಔದಾರ್ಯತೆಯನ್ನು ಬೆಳೆಸಿಕೊಳ್ಳುವಂತೆ ಸಲಹೆ ನೀಡಿದರು.
ನಾಡಿಗಾಗಿ ಮೈಸೂರು ಮಹಾರಾಜ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಕೃಷ್ಣರಾಜಸಾಗರ ಜಲಾಶಯ ನಿರ್ಮಾಣಕ್ಕೆ ಹಣದ ಕೊರತೆ ಎದುರಾದಾಗ ರಾಣಿ ಅಮ್ಮಣ್ಣಿರವರ ವರ್ಜ ವೈಡೂರ್ಯಗಳನ್ನು ಅಡವಿಟ್ಟು ನಿರ್ಮಿಸಿ ಚರಿತ್ರೆಯಲ್ಲಿ ಶಾಶ್ವತ ಸ್ಥಾನಗಳಿಸಿzರೆ. ಸ್ವಾತಂತ್ರಾ ನಂತರದಲ್ಲಿ ಇದುವರೆಗಿನ ಎಲ್ಲ ಸರ್ಕಾರ ಬರಗಾಲದ ಸಂದರ್ಭದಲ್ಲಿ ನೆರೆರಾಜ್ಯಕ್ಕೆ ನೀರು ಹರಿಸಿ ರಾಜ್ಯಕ್ಕೆ ಅನ್ಯಾಯ ಎಸಗಿದೆ ಈ ದಿಸೆಯಲ್ಲಿ ಬಂಗಾರಪ್ಪನವರು ಮಾತ್ರ ನ್ಯಾಯಾಲಯದ ಆದೇಶವನ್ನು ಧಿಕ್ಕರಿಸಿ ಸಮಸ್ತ ಕನ್ನಡಿಗರ ಸ್ವಾಭಿಮಾನದ ಪ್ರತೀಕವಾಗಿzರೆ ಎಂದು ಶ್ಲಾಸಿದರು.
ವೇದಿಕೆ ತಾಲೂಕು ಅಧ್ಯಕ್ಷ ಶಿವಯ್ಯಶಾಸ್ತ್ರಿ, ಪ್ರಮುಖರಾದ ಇಮ್ರಾನ್, ಮುಕ್ರಂ ಮುಖಂಡ ವಿಠಲ, ಶಂಶುದ್ದೀನ್, ಶಾರುಖ್, ಹಿರಣ್ಣಯ್ಯ, ಮಂಜುನಾಥ್ ಮತ್ತಿತರರು ಉಪಸ್ಥಿತರಿದ್ದರು.