ಕ್ಯಾಪ್ಚರಿಂಗ್ ದ ಮುಮೆಂಟ್ಸ್’ : ಎರಡು ದಿನಗಳ ಕಾರ್ಯಾಗಾರ…
ಶಿವಮೊಗ್ಗ: ಪಾಥ್‌ವೇಸ್ ಟ್ರೈನಿಂಗ್ ಹಾಗೂ ಪ್ಲೇಸ್ಮೆಂಟ್ ಘಟಕದ ವತಿಯಿಂದ
ಕ್ಯಾಪ್ಚರಿ ಂಗ್ ದ ಮು ಮೆಂಟ್ಸ್’ ಏಂಬ ಶಿರ್ಷಿಕೆಯಡಿ ಫೊಟೋಗ್ರಫಿಯ ಕುರಿತಾಗಿ ಎರಡು ದಿನಗಳ ಕಾರ್‍ಯಾ ಗಾರ ವನ್ನು ಆಯೋಜಿಸಲಾಗಿದ್ದು, ಕಾರ್ಯಕ್ರಮವನ್ನು ಮುಖ್ಯ ಅತಿಥಿಗಳಾದ ವೈ.ಎಲ್ ರಾಮ ಚಂದ್ರ ಹಾಗೂ ಸಂಪನ್ಮೂಲ ವ್ಯಕ್ತಿ ಯಾದ ಶ್ರೀ ಸುಹೇಲ್ ಖಲೀಫ ಇವರು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು.
ನಂತರ ಮಾತನಾಡಿದ ಅವರು, ಕುವೆಂಪು ವಿಶ್ವವಿದ್ಯಾಲ ಯದ ಹಣಕಾಸು ಸಚಿವ ವೈ. ಎಲ್. ರಾಮಚಂದ್ರ ಕುವೆಂಪು ವಿಶ್ವವಿದ್ಯಾಲಯದ ಅಡಿಯಲ್ಲಿ ನೆಡೆಯುತ್ತಿರುವ ಪಾಥ್‌ವೇಸ್ ಘಟಕದ ಕುರಿತಾಗಿ ಮೆಚ್ಚುಗೆಯ ನ್ನು ವ್ಯಕ್ತಪಡಿಸಿದರು. ಮಕ್ಕಳ ಸರ್ವತೋಮುಖ ಬೆಳವಣಿಗೆ ಗಾಗಿ ಸತತವಾಗಿ ದುಡಿಯುತ್ತಿ ರುವ ಈ ಘಟಕವು ಅತ್ಯುತ್ತಮ ವಿದ್ಯಾರ್ಥಿಗಳನ್ನು ಸಮಾಜಕ್ಕೆ ನೀಡುತ್ತಿರುವುದಕ್ಕಾಗಿ ಅಭಿನಂದಿ ಸಿದರು. ಕೌಶಲ್ಯಗಳನ್ನು ನಮ್ಮಲ್ಲಿ ಚೆನ್ನಾಗಿ ಬೆಳೆಸಿಕೊಳ್ಳುವು ದರಿಂದ ಸಮಾಜದಲ್ಲಿ ಉನ್ನತ ಸ್ಥಾನಗಳನ್ನು ಗಳಿಸಿಕೊಳ್ಳಬಹುದೆಂದು ಹೇಳಿ ದರು.ಕಾರ್ಯಕ್ರಮದ ಸಂಪ ನ್ಮೂಲ ವ್ಯಕ್ತಿ ಸುಹೇಲ್ ಖಲೀಫ, ಸಹ್ಯಾದ್ರಿ ವಾಣಿಜ್ಯ ಮತ್ತು ನಿರ್ವಾ ಹಣಾ ಕಾಲೇಜಿನ ಪ್ರಾಂಶುಪಾಲ ರಾದ ಪ್ರೊ. ಎಂ.ಕೆ. ವೀಣಾ ಸಭೆ ಯನ್ನು ದ್ದೇಶಿಸಿ ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿ ಸಿದ್ದ ಸಹ್ಯಾದ್ರಿ ವಿeನ ಕಾಲೇಜಿನ ಪ್ರೊ. ಎನ್. ರಾಜೇಶ್ವರಿ ವಿದ್ಯಾ ರ್ಥಿಗಳನ್ನು ಕುರಿತು ಮಾತನಾಡಿ ದರು.ಕಾರ್ಯಕ್ರಮದಲ್ಲಿ ಪಾಥ್ ವೇಸ್ ಟ್ರೈನಿಂಗ್ ಹಾಗೂ ಪ್ಲೇಸ್ಮೆಂಟ್ ಘಟಕದ ಅಧ್ಯಕ್ಷ ಪ್ರೊ. ರಮೇಶ್ ಸಿ.ಕೆ. ಉಪಸ್ಥಿತರಿದ್ದರು.