ರೈತರ ಮಾಹಿತಿ ಕೇಂದ್ರಕ್ಕೆ ಬಿವೈಆರ್ ಚಾಲನೆ
ಶಿವಮೊಗ್ಗ: ಜಿ ಸಹಕಾರ ಮಾರಾಟ ಒಕ್ಕೂಟ ನಿ., ಚೈತನ್ಯ ರೂರಲ್ ಡೆವಲಪ್‌ಮೆಂಟ್ ಸೊಸೈಟಿ ಸಹಯೋಗದಲ್ಲಿ ರೈತರ ಮಾಹಿತಿ ಕೇಂದ್ರ ಪ್ರಾರಂಭ ಮತ್ತು ತಾಂತ್ರಿಕ ಮಾಹಿತಿ ಕಾರ್ಯಗಾರ ವನ್ನು ನೆಡಸಲಾಯಿತು.
ಕಾರ್ಯಕ್ರಮ ಉದ್ಘಾಟಿಸಿ ಮಾತಾಡಿದ ಸಂಸದ ಬಿ.ವೈ. ರಾಘವೇಂದ್ರ , ಈ ಮಾಹಿತಿ ಕೇಂದ್ರದ ಸಂಪೂರ್ಣ ಪ್ರಯೋಜನವನ್ನು ನಮ್ಮ ಜಿಯ ರೈತರು ಪಡೆಯಬೇಕು ಎಂದು ಕರೆ ನೀಡಿದರು.
ಶಿವಮೊಗ್ಗ ಜಿ ಸಹಕಾರ ಮಾರಾಟ ಒಕ್ಕೂಟದ ಅಧ್ಯಕ್ಷ ಉಂಬ್ಳೇಬೈಲ್ ಮೋಹನ್ ಅಧ್ಯಕ್ಷತೆ ವಹಿಸಿದ್ದರು . ಶಾಸಕರಾದ ಎಸ್.ನ್ ಚನ್ನಬಸಪ್ಪ, ಶಾರದಾ ಪೂರಾನಾಯ್ಕ, ಪ್ರಮುಖರಾದ ಹೆಚ್.ಎಲ್‌ಷಡಾಕ್ಷರಿ, ಡಿ.ಎಂ. ಶಂಕರಪ್ಪ, ಶರತ್ ಗೌಡ, ಟಿ.ಹೆಚ್. ಗೌಡ ಸೇರಿದಂತೆ ಇನ್ನಿತರ ಗಣ್ಯರು ಅತಿಥಿಗಳಾಗಿ ಆಗಮಿಸಿದ್ದರು.
ಚೈತನ್ಯ ಸೊಸೈಟಿಯ ಕಾರ್ಯದರ್ಶಿ ಬಿ.ಟಿ. ಭದ್ರೇಶ್ ಅವರು ಮಾತನಾಡಿ, ಮುಂದಿನ ದಿನಗಳಲ್ಲಿ ನಮ್ಮ ರೈತರ ಮಾಹಿತಿ ಕೇಂದ್ರ ಪ್ರಾರಂಭ ಮತ್ತು ತಾಂತ್ರಿಕ ಮಾಹಿತಿ ನೀಡುವ ಮೂಲಕ ರೈತರಿಗೆ ಸಹಕಾರಿಯಾಗಿರುತ್ತದೆ ಎಂದು ತಿಳಿಸಿದರು.
ಜಿ ಸಂಯೋಜಕರಾದ ದಿನಕರ ಜಧವ್,ಪೀಟರ್, ಪ್ರಸಾದ್ ಉಪಸ್ಥಿತರಿದ್ದರು.