ಜು.೨೪ರಿಂದ ೬ರಿಂದ ೮ನೇ ತರಗತಿಗಳ ಬೋಧನೆ ಸೇರಿದಂತೆ ಕಾರ್ಯಚಟುವಟಿಕೆಗಳನ್ನು ಬಹಿಷ್ಕಾರ…

ಹೊನ್ನಾಳಿ: ಪ್ರಾಥಮಿಕ ಶಾಲೆ ಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಪದವೀಧರ ಶಿಕ್ಷಕರಿಗೆ ಪ್ರಾಥಮಿಕ ಶಾಲೆಗಳ ಶಿಕ್ಷಕರಿಗೆ ಪ್ರೌಢಶಾಲೆಗಳ ಬಡ್ತಿ ಮತ್ತು ವರ್ಗಾವಣೆಯ ವಿಷಯದಲ್ಲಿ ಅನ್ಯಾಯವಾಗುತ್ತಿ ರುವುದನ್ನು ಸರಿಪಡಿಸುವಂತೆ ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಎನ್. ಹೊನ್ನೇಶ್ ಅವರು ಆಗ್ರಹಿಸಿದರು.
ಸೇವಾ ನಿರತ ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದವತಿಯಿಂದ ಬಿಇಒ ನಂಜರಾಜ್ ಅವರಿಗೆ ಮನವಿ ಸಲ್ಲಿಸಿ ಮಾತನಾಡಿದ ಅವರು, ಅರ್ಹ ಪದವೀಧರರನ್ನು ಜಿಪಿಟಿ ಹುzಗಳಿಗೆ ಮುಂಬಡ್ತಿಯನ್ನು ಕೊಡದೇ ೧ರಿಂದ ೫ನೇ ತರಗತಿ ಯವರೆಗೆ ಮಾತ್ರ ಬೋಧಿಸುವ ಪಿ.ಎಸ್.ಟಿ. ಶಿಕ್ಷಕರಾಗಿ ನಮಗೆ ಹಿಂಬಡ್ತಿಯನ್ನು ನೀಡಿದಂತಾಗಿದೆ.
ಇದರಿಂದ ಹೊಸದಾಗಿ ನೇಮಕಗೊಂಡಂತಹ ಜಿ.ಪಿ.ಟಿ. ಶಿಕ್ಷಕರ ಕೈ ಕೆಳಗೆ ಕೆಲಸ ಮಾಡು ವಂತಾಗುತ್ತದೆ. ಪಿ.ಎಸ್.ಟಿ. ಶಿಕ್ಷಕರುಗಳಿಗೆ ಮುಂಬಡ್ತಿ ನೀಡಿದರೆ ಸರ್ಕಾರಕ್ಕಾಗಲೀ ಇಲಾಖೆಗಾಗಲೀ ಯಾವುದೇ ಆರ್ಥಿಕ ಹೊರೆ ಮತ್ತು ನಷ್ಟವುಂಟಾಗುವುದಿಲ್ಲ. ಈ ಬಗ್ಗೆ ಕಳೆದ ೨ ವರ್ಷಗಳಿಂದ ಹಿಂದಿನ ಸರ್ಕಾರದ ಶಿಕ್ಷಣ ಸಚಿವರಾಗಿದ್ದ ನಾಗೇಶ್ ಮತ್ತು ಎ ಶಾಸಕರಿಗೆ, ಮಂತ್ರಿಗಳಿಗೆ ಮನವಿ ಸಲ್ಲಿಸಿದ್ದರೂ ಪ್ರಯೋಜನವಾಗಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಜು.೨೪ರೊಳಗೆ ನಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಬಿಇಒ ಅವರ ಮೂಲಕ ಸರ್ಕಾರದ ಗಮನಕ್ಕೆ ತರಲಾಗಿದ್ದು ನಮ್ಮ ಬೇಡಿಕೆ ಈಡೇರದಿದ್ದರೆ ೬ ರಿಂದ ೮ನೇ ತರಗತಿಗಳ ಬೋಧನೆ ಮತ್ತು ಅವರಿಗೆ ಸಂಬಂಧಿಸಿದ ಎ ಕಾರ್ಯ ಚಟುಚಟಿಕೆಗಳನ್ನು ಬಹಿಷ್ಕರಿಸಿ ೧ ರಿಂದ ೫ನೇ ತರಗತಿ ಯವರೆಗೆ ಮಾತ್ರವೇ ಬೋಧಿಸ ಲಾಗುವುದು ಎಂದು ಎಚ್ಚರಿಸಿದರು.
ಈ ಸಂದರ್ಭದಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಪ್ರಕಾಶ್ ನಾಯ್ಕ್, ಉಪಾಧ್ಯಕ್ಷೆ ನೀಲಮ್ಮ, ಕಾರ್ಯದರ್ಶಿ ಗೀತಾ, ಸರ್ಕಾರಿ ನೌಕರರ ಒಕ್ಕೂಟದ ಅಧ್ಯಕ ಸಣ್ಣಪ್ಪ, ಜಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಉಪಾಧ್ಯಕ್ಷ ಎಚ್. ಕೆ. ಚಂದ್ರಶೇಖರ್, ಪದವೀಧರ ಸಂಘದ ಕಾರ್ಯದರ್ಶಿ ಮಹೇಶ್ವ ರಪ್ಪ, ಸಾವಿತ್ರಿ ಬಾಯಿ ಬಾಪುಲೆ ಅಧ್ಯಕ್ಷೆ ಶಹಜನ್, ಕಾರ್ಯದರ್ಶಿ ರಂಜಿತಾ, ಬಿಆರ್‌ಪಿ ಅರುಣ್ ಕುಮಾರ್, ಸಿ. ಆರ್.ಪಿ ಚಂದ್ರಾನಾಯ್ಕ್, ರುದ್ರೇಶ್, ಪುರುಷೋತ್ತಮ್, ಹಾಲಸ್ವಾಮಿ, ದಿಡಗೂರು ಪ್ರಶಾಂತ್, ತೋಟಪ್ಪ ಇನ್ನಿತರರಿದ್ದರು.