ಮೀಸಲಾತಿ ಕಿತ್ತುಕೊಂಡು ಮುಸ್ಲಿಂರನ್ನು ಬೀದಿಗೆ ತಳ್ಳಿದ ಬಿಜೆಪಿ…
ಶಿಕಾರಿಪುರ: ಅಲ್ಪಸಂಖ್ಯಾತರ ಮೀಸಲಾತಿಯನ್ನು ರದ್ದುಗೊಳಿಸಿ ಮುಸ್ಲಿಂರನ್ನು ಬೀದಿಪಾಲಾಗಿಸಿದ ಬಿಜೆಪಿ ಸರ್ಕಾರದ ಧೋರಣೆ ಯಿಂದ ಬೇಸತ್ತು ಸಮುದಾಯಕ್ಕೆ ನ್ಯಾಯ ದೊರಕಿಸಿಕೊಡುವ ಉದ್ದೇಶದಿಂದ ಈ ಬಾರಿಯ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿರು ವುದಾಗಿ ಪುರಸಭಾ ಸದಸ್ಯ, ಮಾಜಿ ಉಪಾಧ್ಯಕ್ಷ ಮಹಮ್ಮದ್ ಸಾಧಿಕ್ ಸುದ್ದಿಗೆಷ್ಟಿಯಲ್ಲಿ ತಿಳಿಸಿದರು.
೨೦೧೯ರ ಪುರಸಭಾ ಚುನಾವಣೆಯಲ್ಲಿ ಜಯನಗರ ವಾರ್ಡನಿಂದ ಪಕ್ಷೇತರ ಅಭ್ಯರ್ಥಿ ಯಾಗಿ ಸ್ಪರ್ಧಿಸಿ ಆಯ್ಕೆಯಾಗಿದ್ದು ಈ ಸಂದರ್ಭದಲ್ಲಿ ಕಾಂಗ್ರೆಸ್ ೧೨ ಹಾಗೂ ಬಿಜೆಪಿ ೮ ಸ್ಥಾನಗಳಿಸಿದಾಗ ರಾಜ್ಯದ ಮುಖ್ಯಮಂತ್ರಿಯಾಗಿದ್ದ ಯಡಿಯೂರಪ್ಪನವರ ಸ್ವಕ್ಷೇತ್ರದಲ್ಲಿ ಪುರಸಭೆ ಕಾಂಗ್ರೆಸ್ ಪಾಲಾಗುವುದನ್ನು ತಪ್ಪಿಸಿ ಗೌರವ ಪ್ರತಿಷ್ಠೆ ಕಾಪಾಡಲು ಸಂಸದರ ಮನವಿ ಮೇರೆಗೆ ಬಿಜೆಪಿಯನ್ನು ಬೆಂಬಲಿಸಿದ್ದಾಗಿ ತಿಳಿಸಿದ ಅವರು, ಈ ದಿಸೆಯಲ್ಲಿ ಪ್ರತ್ಯುಪಕಾರವಾಗಿ ನೀಡಲಾದ ಉಪಾಧ್ಯಕ್ಷ ಹುದ್ದೆ ಯನ್ನು ಅವಧಿ ಪೂರ್ಣಗೊಳ್ಳುವ ೨ ತಿಂಗಳ ಮುಂಚೆ ಸ್ವಜಾತಿ ಭಾಂದವ ಪುರಸಭಾ ಪಕ್ಷೇತರ ಸದಸ್ಯೆ ಬಿಜೆಪಿಗೆ ಸೇರ್ಪಡೆಗೊಳ್ಳುತ್ತಿದ್ದು ಅವರಿಗೆ ನೀಡುವುದಾಗಿ ಸಂಸದರು ಕಸಿದು ಕೊಂಡು ದ್ರೋಹ ಬಗೆದಿದ್ದಾರೆ ಎಂದು ಆರೋಪಿಸಿದರು.
ಯಡಿಯೂರಪ್ಪನವರು ರಾಜ್ಯದ ಮುಖ್ಯಮಂತ್ರಿಯಾದ ಅವಧಿಯಲ್ಲಿ ಅಲ್ಪಸಂಖ್ಯಾತರ ಸಹಿತ ಎಲ್ಲ ಸಮುದಾಯದ ಅಭಿವೃದ್ದಿಗೆ ಪ್ರಾಮಾಣಿಕವಾಗಿ ಸ್ಪಂದಿಸಿದ್ದು ಬಿಜೆಪಿ ಸರ್ಕಾರದ ಅವಧಿ ಪೂರ್ಣಗೊಳ್ಳುವ ಸಂದರ್ಭ ದಲ್ಲಿ ಅಲ್ಪಸಂಖ್ಯಾತರಿಗೆ ನೀಡಲಾದ ಶೇ.೪ ಮೀಸಲಾತಿಯನ್ನು ಬೊಮ್ಮಾಯಿ ಹಿಂಪಡೆದು ಮುಸ್ಲಿಂ ರನ್ನು ಬೀದಿಪಾಲಾಗಿಸಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ ಅವರು, ಸಮುದಾಯಕ್ಕೆ ಆದ ದ್ರೋಹಕ್ಕೆ ನ್ಯಾಯ ದೊರಕಿಸಿ ಕೊಡಲು ಸಮಾಜದ ಹಿರಿಯರು, ಮುಖಂಡರ ತೀವ್ರ ಒತ್ತಡಕ್ಕೆ ಮಣಿದು ಈ ಬಾರಿಯ ಚುನಾವಣೆ ಯಲ್ಲಿ ಸ್ಪರ್ಧಿಸಲು ನಿಧರಿಸಿದ್ದು ಏ.೨೦ ರಂದು ನಾಮಪತ್ರ ಸಲ್ಲಿಸಲಿರುವುದಾಗಿ ತಿಳಿಸಿದರು.
ಕಳೆದ ಪುರಸಭಾ ಚುನಾವಣೆ ಯಲ್ಲಿ ಪತ್ನಿ ಶಭಾನಾ ಭಾನು ಪಕ್ಷೇತರ ಅಭ್ಯರ್ಥಿಯಾಗಿ ಜಯನಗರ ೮ನೇ ವಾರ್ಡನಲ್ಲಿ ಸ್ಪರ್ಧಿಸಿ ಜಯಗಳಿಸಿ ಉಪಾಧ್ಯಕ್ಷರಾಗಿದ್ದು ಇದೀಗ ಅದೇ ಮಾದರಿಯಲ್ಲಿ ಪಕ್ಷೇತರ ಸದಸ್ಯ ರಾಗಿ ಸ್ಪರ್ಧಿಸಿ ಉಪಾಧ್ಯಕ್ಷ ಹುದ್ದೆ ದೊರೆಯಲು ಕಾರಣರಾದ ಸ್ಥಳೀಯ ಮತದಾರರಿಗೆ ಧನ್ಯವಾದ ಸಲ್ಲಿಸಿದ ಅವರು, ಚುನಾವಣೆಯಲ್ಲಿ ಸ್ಪರ್ಧಿಸುವುದು ಖಚಿತ. ಆಸೆ ಆಮಿಷಗಳಿಗೆ ಬಲಿಯಾಗುವುದಿಲ್ಲ ಎಂದು ಪರ್ತಕರ್ತರ ಪ್ರಶ್ನೆಗೆ ಉತತಿರಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ಷಫೀವುಲ್ಲಾ, ಬಷೀರ್‌ಖಾನ್, ಆನಂದ್, ರೋಷನ್ ಮತ್ತಿತರರು ಉಪಸ್ಥಿತರಿದ್ದರು.