ಬಿಜೆಪಿ ಅಭ್ಯರ್ಥಿ ಡಾ| ಸರ್ಜಿ ಅವರಿಗೆ ಮತ ನೀಡಿ ಆಶೀರ್ವದಿಸಿ:ಅರುಣ್ ಮನವಿ

ARUN1-(3)

ಶಿವಮೊಗ್ಗ : ನೈರುತ್ಯ ಪದವೀಧರ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಡಾ|ಧನಂಜಯ ಸರ್ಜಿ ಅವರು ಸ್ಪರ್ಧಿಸಿದ್ದು, ತಾವೆಲ್ಲರೂ ಮತವನ್ನು ನೀಡಿ ವಿಧಾನಪರಿಷತ್ ಆಯ್ಕೆಯಾಗಿ ಬರಲೆಂದು ಹಾರೈಸುವಂತೆ ವಿಧಾನ ಪರಿಷತ್ ಸದಸ್ಯ ಡಿಎಸ್ ಅರುಣ್ ಮನವಿ ಮಾಡಿದರು.
ವಿನಾಯಕ ನಗರದಲ್ಲಿ ಶ್ರೀ ವಾಸವಿ ಕನ್ನಿಕಾ ಪರಮೇಶ್ವರಿ ದೇವಸ್ಥಾನ ಶಿವಮೊಗ್ಗ ಆರ್ಯವೈಶ್ಯ ವಾಸವಿ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಆಯೋಜಿಸಿದ್ದ ವಾಸವಿ ಜಯಂತೋತ್ಸವ ಮತ್ತು ಎರಡನೇ ಪ್ರತಿಷ್ಠಾಪನ ವರ್ಧಂತಿಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು ಸರ್ವರಿಗೂ ವಾಸವಿ ಜಯಂತಿಯ ಶುಭಾಶಯಗಳು ಕೋರಿದರು. ಡಾ.ಧನಂಜಯ ಸರ್ಜಿ ಅವಕ ಗೆಲುವಇಗಾಗಿ ಪೂಜೆ ಸಲ್ಲಿಸಿ ಪ್ರಾರ್ಥಿಸಿದರು.
ಅಭ್ಯರ್ಥಿ ಡಾ| ಸರ್ಜಿ ಅವರು ಮಾತನಾಡಿ, ನೈರುತ್ಯ ಪದವೀಧರ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ನಾನು ಸ್ಪರ್ಧಿಸಿzನೆ, ಕ್ಷೇತ್ರದ ಮತದಾರರು ತಮಗೆ ಮತ ನೀಡುವ ಮೂಲಕ ತಮ್ಮ ಸಂಬಂಧಿಕರು, ಸ್ನೇಹಿತರಿಂದಲೂ ಮತ ಕೊಡಿಸಿ ಗೆಲ್ಲಿಸುವಂತೆ ವಿನಂತಿಸಿದರು.
ಶಾಸಕ ಎಸ್. ಎನ್. ಚೆನ್ನಬಸಪ್ಪ, ಶಿವಮೊಗ್ಗ ಆರ್ಯ ವೈಶ್ಯ ವಾಸವಿ ಚಾರಿಟೇಬಲ್ ಟ್ರಸ್ಟ್ ನ ಅಧ್ಯಕ್ಷ ಟಿ. ಆರ್. ಅಶ್ವತ್ಥ ನಾರಾಯಣ ಶೆಟ್ಟಿ, ಉಪಾಧ್ಯಕ್ಷ ಆರ್. ಜಿ. ಮಂಜುನಾಥ್, ಡಿ. ಎಲ್. ಮಂಜುನಾಥ್, ಕಾರ್ಯ ದರ್ಶಿ ಎಸ್ ವಿ ನಾಗೇಂದ್ರ, ಸಹ ಕಾರ್ಯದರ್ಶಿ ವೈ. ಗೋಪಾಲಕೃಷ್ಣ ಗುಪ್ತ, ಟ್ರಸ್ಟಿಗಳಾದ ಬೆಲಗೂರು ಮಂಜುನಾಥ್, ಎಚ್ ಎಸ್ ಮಂಜುನಾಥ್ ಪ್ರಮುಖರಾದ ಎಸ್. ದತ್ತಾತ್ರಿ, ಮಾಲತೇಶ್ ಇನ್ನಿತರರು ಉಪಸ್ಥಿತರಿದ್ದರು.