ಬಿಜೆಪಿ ಭದ್ರಾವತಿ ಪ್ರಮುಖ ಕಾರ್ಯಕರ್ತರ ಸಭೆ; ಮೇ ೩೦ರಿಂದ ಜೂ.೩೦ರ ಕಾರ್‍ಯಕ್ರಮ ಕುರಿತು ಚರ್ಚೆ
ಭದ್ರಾವತಿ: ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರಕ್ಕೆ ೯ ವರ್ಷ ಪೂರ್ಣಗೊಂಡ ಪ್ರಯುಕ್ತ ಮೇ ೩೦ ರಿಂದ ಜೂ.೩೦ರವರೆಗೆ ದೇಶಾದ್ಯಂತ ವಿವಿಧ ಕಾರ್ಯಕ್ರಮ ಗಳನ್ನು ಆಯೋಜಿಸಿರುವ ಪ್ರಯುಕ್ತ ಪೂರ್ವಭಾವಿ ಸಿದ್ಧತಾ ಸಭೆ ಹಾಗೂ ರಾಜ್ಯ ಒ ಬಿ ಸಿ ಮೋರ್ಚಾದ ಉಪಾಧ್ಯಕ್ಷ ಅಶೋಕ್‌ಮೂರ್ತಿ ಅವರಿಗೆ ಕೃತಜ್ಞತಾ ಕಾರ್ಯಕ್ರಮ ವನ್ನು ಭದ್ರಾವತಿ ಮಂಡಲದ ಅಧ್ಯಕ್ಷ ಧರ್ಮ ಪ್ರಸಾದ್ ಅವರ ಅಧ್ಯಕ್ಷತೆಯಲ್ಲಿ ಹಮ್ಮಿಕೊಳ್ಳಲಾಯಿತು .
ಕಾರ್ಯಕ್ರಮದಲ್ಲಿ ರಾಜ್ಯ ಒಬಿಸಿ ಮೋರ್ಚಾದ ಉಪಾಧ್ಯಕ್ಷ ಅಶೋಕ್‌ಮೂರ್ತಿ, ಜಿ ಪ್ರಧಾನ ಕಾರ್ಯದರ್ಶಿ ಬಿ ಕೆ ಶ್ರೀನಾಥ್, ಜಿ ಖಜಂಸಿ ರಾಮಣ್ಣ, ಬಿಜೆಪಿ ಪರಾಜಿತ ಅಭ್ಯರ್ಥಿ ಮಂಗೋಟಿ ರುದ್ರೇಶ್, ರಾಜ್ಯ ಕಾರ್ಯಕಾರಿಣಿ ಸದಸ್ಯರಾದ ಶೋಭ ಆರ್ ಎಸ್, ಮಂಡಲದ ಪ್ರಧಾನ ಕಾರ್ಯದರ್ಶಿ ಚನ್ನೇಶ್, ಬಿಜೆಪಿಯ ಮುಖಂಡರಾದ ಕೂಡ್ಲಿಗೆರೆ ಹಾಲೇಶ್,ತೀರ್ಥಯ್ಯ, ಸಿಮೆಂಟ್ ಮಂಜಣ್ಣ, ಆನಂದ್ ಕುಮಾರ್ ಜಿ. ಸುರೇಶಪ್ಪ ಹಾಗೂ ಬಿಜೆಪಿಯ ಪ್ರಮುಖ ಕಾರ್ಯಕರ್ತರು ಉಪಸ್ಥಿತರಿದ್ದರು.
ಜಿ ಪ್ರಧಾನ ಕಾರ್ಯದರ್ಶಿ ಬಿಕೆ ಶ್ರೀನಾಥ್ ಮಾತನಾಡಿ ಮೇ ೩೦ ರಿಂದ ಜೂ.೩೦ರವರೆಗೆ ಹಮ್ಮಿಕೊಳ್ಳಲಾಗುವ ವಿಶೇಷ ಕಾರ್ಯಕ್ರಮಗಳ ಕುರಿತು ಮಾಹಿತಿಯನ್ನು ನೀಡಿದರು.
ತೀರ್ಥಳ್ಳಿಯಿಂದ ಆಗಮಿಸಿದ ಕ್ಷೇತ್ರ ಚುನಾವಣಾ ಪ್ರಭಾರಿ ಅಶೋಕ್‌ಮೂರ್ತಿ ಅವರ ಕಾರ್ಯವನ್ನು ಸ್ಮರಿಸುತ್ತಾ ಪರಾಜಿತ ಅಭ್ಯರ್ಥಿ ಮಂಗೋಟೆ ರುದ್ರೇಶ್ ಅವರು ಮಾತನಾಡಿ, ಅಶೋಕ್ ಮೂರ್ತಿಯವರು ತಂದೆಯ ಸ್ಥಾನದಲ್ಲಿ ನಿಂತು ಜವಾಬ್ದಾರಿಯನ್ನು ತೆಗೆದುಕೊಂಡು ಚುನಾವಣೆಯನ್ನು ಅತ್ಯುತ್ತಮವಾಗಿ ನಿರ್ವಹಿಸಿದರು ಎಂದು ಅಭಿನಂದಿಸಿದರು. ಬಿಜೆಪಿ ಭದ್ರಾವತಿ ಮಂಡಲದ ವತಿಯಿಂದ ಅಧ್ಯಕ್ಷರು ಹಾಗೂ ಎ ಪ್ರಮುಖರು ಮಾತನಾಡಿ ಅಭಿನಂದನೆಯನ್ನು ಸಲ್ಲಿಸಿದರು.