ಹಾಲು ಒಕ್ಕೂಟದಲ್ಲಿ ಕೋಟ್ಯಂತರ ರೂ ಅವ್ಯವಹಾರ:ತನಿಖೆಗೆ ಬಿಜೆಪಿ ರೈತ ಮೋರ್ಚಾ ಆಗ್ರಹ

pm-(2)

ಶಿವಮೊಗ್ಗ : ಕಳೆದ ೬ ತಿಂಗಳಿನಿಂದ ಶಿವಮೊಗ್ಗ ಹಾಲು ಒಕ್ಕೂಟದ ಮಾರುಕಟ್ಟೆ ವಿಭಾಗದಲ್ಲಿ ನಡೆದಿರುವ ಅವ್ಯವಹಾರವನ್ನು ತನಿಖೆ ಮಾಡಲು ಆಗ್ರಹಿಸಿ ಇಂದು ಬಿಜಿಪಿ ರೈತ ಮೋರ್ಚಾದಿಂದ ಡಿಸಿಗೆ ಮನವಿ ಸಲ್ಲಿಸಲಾಯಿತು.
ಶಿವಮೊಗ್ಗ ಹಾಲು ಒಕ್ಕೂಟ ದಲ್ಲಿ ಪ್ರತಿದಿನ ಸಂಜೆ ಡೀಲರ್‌ಗಳು ಹಾಲನ್ನ ಇಂಡೆಂಟ್ ಹಾಕುವಾಗ ಒಕ್ಕೂಟಕ್ಕೆ ಸಂದಾಯ ಮಾಡಬೇಕಾದ ಹಣವನ್ನು ಆನ್‌ಲೈನ್ ಮೂಲಕ ಸಂದಾಯ ಮಾಡುತ್ತಾರೆ. ಸರ್ವರ್ ಡೌನ್ ಇರುವಾಗ ಸಂಬಂಧಪಟ್ಟ ಅಧಿಕಾರಿಯ ಖಾತೆಗೆ ಹಣವನ್ನು ಹಾಕಿ ತದನಂತರ ಒಕ್ಕೂಟಕ್ಕೆ ಜಮೆ ಮಾಡುವುದು ಅನಿವಾರ್ಯ ವಾಗಿರುತ್ತದೆ. ಆದರೆ ಕಳೆದ ಆರು ತಿಂಗಳಿನಿಂದ ಅಧಿಕಾರಿಗಳು ಡೀಲರ್‌ಗಳಿಂದ ಹಾಕಿಸಿಕೊಂಡ ಹಣವನ್ನು ಒಕ್ಕೂಟಕ್ಕೆ ಜಮಾ ಮಾಡದೆ ಅವ್ಯವಹಾರವನ್ನು ನಡೆಸಿರುತ್ತಾರೆ ಎಂದು ಮನವಿದಾರರು ಆರೋಪಿಸಿದರು.


ಅಧಿಕಾರಿಗಳು ಹಣವನ್ನು ದುರ್ಬಳಕೆ ಕೂಡ ಮಾಡಿಕೊಂಡಿ ರುತ್ತಾರೆ ಎಂದು ಕಳೆದ ವಾರ ಒಕ್ಕೂಟದಲ್ಲಿ ಮಾರುಕಟ್ಟೆ ವಿಭಾಗದಲ್ಲಿ ಕಾರ್ಯನಿರ್ವಹಿಸುವ ಮೂರು ಜನ ಅಧಿಕಾರಿಗಳನ್ನು ಅಮಾನತ್ತು ಮಾಡಿರುತ್ತಾರೆ. ಕಳೆದ ಆರು ತಿಂಗಳಿನಿಂದ ಅಕೌಂಟ್ ಕಮಿಟಿ ಮೀಟಿಂಗ್ ನಡೆದಿದ್ದರೂ ಅಧಿಕಾರಿಗಳು ಪ್ರತಿನಿತ್ಯ ಜಮಾ ಖರ್ಚು ಪರಿಶೀಲನೆ ಮಾಡಿ ವ್ಯವಹಾರವನ್ನು ನಡೆಸುತ್ತಿರು ವಾಗಲೂ ಯಾಕೆ ಇಂಥ ಪ್ರಕರಣ ನಡೆದಿದೆ ಎಂಬುದು ಪ್ರಶ್ನೆ ಮೂಡುತ್ತದೆ. ಇದರಲ್ಲಿ ಆಡಳಿತ ಮಂಡಳಿಯವರು ಸಹ ಭಾಗಿ ಯಾಗಿ ನಡೆಸಿರಬಹುದಾದ ಅವ್ಯವಹಾರವೆಂದು ಶಂಕೆಮೂಡು ತ್ತದೆ ಎಂದು ಆರೋಪಿಸಿದರು.
ಈ ಹಗರಣದ ಬಗ್ಗೆ ತನಿಖೆ ಮಾಡಿ ತಪ್ಪಿತಸ್ಥರಿಗೆ ಶಿಕ್ಷೆ ಒದಗಿಸಬೇಕು. ಹೈನುಗಾರಿಕೆಯನ್ನೇ ನಂಬಿಕೊಂಡಿರುವ ಹಾಲು ಉತ್ಪಾದಕರಿಗೆ ನ್ಯಾಯ ಒದಗಿಸಿಕೊಡಬೇಕು ಎಂದು ಮನವಿಯಲ್ಲಿ ಅಗ್ರಹಿಸಲಾಗಿದೆ.
ಹಾಲು ಒಕ್ಕೂಟ ನಷ್ಟದಲ್ಲಿದೆ ಎಂದು ತಿಳಿದು, ಕಳೆದ ತಿಂಗಳು ಒಂದು ರೂಪಾಯಿ ಹಾಲಿನ ದರವನ್ನು ಕಡಿಮೆ ಮಾಡಿರುತ್ತಾರೆ. ಈ ಎ ಅವ್ಯವಹಾರಗಳಿಗೆ ಆಸ್ಪದ ಮಾಡಿಕೊಡಬಾರದು. ಸಮಗ್ರ ತನಿಖೆ ನಡೆಸಿ ನ್ಯಾಯ ಒದಗಿಸುವಂತೆ ಅಗ್ರಹಿಸಿದರು.
ಸುಮಾರು ಎರಡು ಕೋಟಿ ರೂ. ಹಗರಣ ನಡೆದಿದೆ. ಈಬಗ್ಗೆ ಮಾಹಿತಿ ನೀಡದಂತೆ ಹೊರಗೆ ಹೋಗದಂತೆ ಮಾಡಿzರೆ. ಇದರಲ್ಲಿ ಹೊಸ ನಿರ್ದೇಶಕರ ಪಾತ್ರವೂ ಇದೆ ಎಂದು ಗಂಭೀರ ಆರೋಪ ಮಾಡಿದರು.
ಈ ಸಂದರ್ಭದಲ್ಲಿ ರೈತ ಮೊರ್ಚದ ಜಿಧ್ಯಕ್ಷ ಎಮ್.ಸಿದ್ದಲಿಂಗಪ್ಪ, ಕುಮಾರ್ ನಾಯ್ಡ, ಗಣೇಶ್ ಬೆಳಕಿ ,ಹರೀಶ್ ಮುಂತಾದವರಿದ್ದರು.