ಸಂಚಾರ ನಿಯಮಗಳ ಜಾಗೃತಿಗಾಗಿ ಬೈಕ್ ಜಾಥಾ…
ಶಿವಮೊಗ್ಗ: ಜಿಲ್ಲಾ ಪೊಲೀಸ್ ಇಲಾಖೆ ಮತ್ತು ಬುಲ್ಸ್ ಆಫ್ ಶಿವಮೊಗ್ಗ, ಬೈಕರ್ಸ್ ಆಫ್ ಶಿವಮೊಗ್ಗ, ರಾಯಲ್ ರೋಲಿಂಗ್ ಮಾಂಕ್ಸ್ , ರೋಡ್ ಥ್ರಿಲ್ಲರ್ಸ್, ಮಲ್ನಾಡ್ ಟಸ್ಕರ್ಸ್, ಕೆಟಿಎಂ ಶಿವಮೊಗ್ಗ ಮತ್ತು ಇತರೆ ಕ್ಲಬ್‌ಗಳ ಸಹಯೋಗದೊಂದಿಗೆ ಸಾರ್ವಜನಿಕ ರಲ್ಲಿ ಸಂಚಾರ ನಿಯಮಗಳ ಬಗ್ಗೆ ಜಗೃತಿ ಮೂಡಿಸುವ ಸಲುವಾಗಿ ಇಂದು ಬೈಕ್ ಜಥಾಕ್ಕೆ ಜಿಲ್ಲಾ ರಕ್ಷಣಾಧಿಕಾರಿ ಮಿಥುನ್ ಕುಮಾರ್ ಚಾಲನೆ ನೀಡಿದರು.
ಬೈಕ್ ಜಥಾವು ನಗರದ ಡಿಎಆರ್ ಪೊಲೀಸ್ ಮೈದಾನ ದಿಂದ ಆರಂಭವಾಗಿ ಐಬಿ ವೃತ್ತದ ಮೂಲಕ ಆಲ್ಕೊಳ ವೃತ್ತ, ವಿನೋಬನಗರ ಚೌಕಿ, ಉಷಾ ನಸಿಂಗ್ ಹೋಂ ವೃತ್ತ, ಮಹಾವೀರ ವೃತ್ತ, ಕರ್ನಾಟಕ ಸಂಘ, ಹೊಳೆ ಬಸ್ ಸ್ಟಾಪ್, ಎಂ.ಆರ್.ಎಸ್ ವೃತ್ತ, ನ್ಯೂ ಮಂಡ್ಲಿ, ಗೋಪಾಳ, ಆಲ್ಕೊಳ ವೃತ್ತ, ಐಬಿ ವೃತ್ತ, ಕುವೆಂಪು ರಸ್ತೆ, ಜುಯಲ್ ರಾಕ್ ಹೋಟೆಲ್ ರಸ್ತೆ, ಗೋಪಿ ವೃತ್ತ, ಅಮೀರ್ ಅಹಮ್ಮದ್ ವೃತ್ತದಿಂದ ಅಶೋಕ ವೃತ್ತದ ಮೂಲಕ ಡಿಎಆರ್ ಮೈದಾನದಲ್ಲಿ ಮುಕ್ತಾಯ ಮಾಡಲಾಯಿತು.
ಅಧೀಕ್ಷಕರಾದ ಅನಿಲ್ ಕುಮಾರ್ ಭೂಮರೆಡ್ಡಿ, ಬಾಲರಾಜ್, ಪ್ರಭು ಡಿ.ಟಿ, ಸುರೇಶ್ ಎಂ., ಪ್ರಶಾಂತ್, ಸಂತೋಷ್‌ಕುಮಾರ್, ಬೈಕ್ ಕ್ಲಬ್‌ಗಳ ಬೈಕ್ ಸವಾರರು, ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಗಳು ಭಾಗವಹಿಸಿದ್ದರು