ಶಿವಮೊಗ್ಗದ ನಟನಂ ಬಾಲ ನಾಟ್ಯ ಕೇಂದ್ರದಿಂದ ಭರತನಾಟ್ಯ ಸರ್ಟಿಫಿಕೇಟ್- ಡಿಪ್ಲೋಮಾ ಕೋರ್ಸ್

natanam

ಶಿವಮೊಗ್ಗ: ನಟನಂ ಬಾಲ ನಾಟ್ಯ ಕೇಂದ್ರಕ್ಕೆ ಕರ್ನಾಟಕ ರಾಜ್ಯ ಡಾ. ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಕಲಾ ವಿವಿ ಮೈಸೂರು ವತಿಯಿಂದ ಮಾನ್ಯತೆ ಸಿಕ್ಕಿದೆ ಎಂದು ಕೇಂದ್ರದ ಅಧ್ಯಕ್ಷ ಡಾ.ಎಸ್. ಕೇಶವಕುಮಾರ್ ಪಿಳ್ಳೈ ಹೇಳಿದರು.
ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು, ನಟನಂ ಬಾಲ ನಾಟ್ಯ ಕೇಂದ್ರವು ಸುಮಾರು ೩೫ ವರ್ಷಗಳಿಂದ ತಮ್ಮ ನೃತ್ಯಸೇವೆಯನ್ನು ಸಲ್ಲಿಸುತ್ತಿದ್ದು ಪ್ರಸ್ತುತ ಪ.ಡಾ. ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾನಿಲಯ ಮೈಸೂರಿ ನಿಂದ ಮಾನ್ಯತೆ ಪಡೆದು ಭರತನಾಟ್ಯ ಸರ್ಟಿಫಿಕೇಟ್ ಕೋರ್ಸ್ ಹಾಗೂ ಭರತನಾಟ್ಯ ಡಿಪ್ಲೋಮೋ ಕೋರ್ಸ್ ಗಳನ್ನು ಪ್ರಾರಂಭಿಸಲು ಅನುಮತಿ ಸಿಕ್ಕಿದೆ. ಇದಕ್ಕಾಗಿ ಆಸಕ್ತ ಅಭ್ಯರ್ಥಿ ಗಳಿಂದ ಅರ್ಜಿ ಕರೆದಿದ್ದು, ಜು.೩೦ ರೊಳಗೆ ಅರ್ಜಿ ಸಲ್ಲಿಸಬಹುದಾಗಿದೆ.
ಸರ್ಟಿಫಿಕೇಟ್ ಕೋರ್ಸ್‌ಗೆ ೧೨ ವರ್ಷ ವಯೋಮಿತಿ ಮೇಲ್ಪಟ್ಟಿರಬೇಕು. ಹಾಗೂ ಇದು ಅರು ತಿಂಗಳ ಕೋರ್ಸ್ ಆಗಿರುತ್ತದೆ. ಭರತನಾಟ್ಯ ಡಿಪ್ಲೋಮೋ ಕೋರ್ಸ್‌ಗೆ ಒಂದು ವರ್ಷ ಅವಧಿಗಳಾಗುತ್ತದೆ ಹಾಗೂ ಎಸ್.ಎಸ್.ಎಲ್.ಸಿ. ಪರೀಕ್ಷೆ ಉತ್ತೀರ್ಣ ಹೊಂದಿರಬೇಕು ಎಂದರು.
ಭರತನಾಟ್ಯದ ಕೋರ್ಸಿಗಾಗಿ ವಿದ್ಯಾರ್ಥಿಗಳು ಮೈಸೂರು ಅಥವಾ ಬೆಂಗಳೂರಿಗೆ ಹೋಗಬೇಕಿತ್ತು, ಇದನ್ನು ಮನಗಂಡು ಶಿವಮೊಗ್ಗದಲ್ಲಿಯೇ ನಡೆಸಬೇಕು. ಇದರಿಂದ ವಿದ್ಯಾರ್ಥಿ ಗಳಿಗೆ ಅನುಕೂಲವಾಗುತ್ತದೆ ಎಂಬ ದೃಷ್ಟಿಯಿಂದ ಈ ಕೋರ್ಸ್‌ಗಳನ್ನು ಶಿವಮೊಗ್ಗದಲ್ಲಿ ಆರಂಭಿಸಲಾಗಿದೆ. ಶಿವಮೊಗ್ಗ ಗಂಧರ್ವ ನಗರ ಹಾಗೂ ಬಿಬಿ ರಸ್ತೆಯ ಸತ್ಯ ಪ್ರಮೋದ ಸಮುದಾಯ ಭವನದಲ್ಲಿ ತರಗತಿಗಳು ನಡೆಯುತ್ತವೆ ಎಂದರು.
ಮುಂದೆ ಭರತನಾಟ್ಯ ಡಿಗ್ರಿ ಅಂದರೆ ಎಂ ಡಾನ್ಸ್ ಕೋರ್ಸ್‌ಗಳನ್ನು ನಡೆಸಲಾಗುತ್ತದೆ. ಈ ಕೋರ್ಸ್‌ಗಳಿಗೆ ಬೆಳಗಿನ ಹಾಗೂ ಸಂಜೆ ಕೋರ್ಸ್ ಗಳನ್ನು ನಡೆಸಲಾಗುತ್ತದೆ ಎಂದರು.