ಹಳ್ಳಿ ಹಳ್ಳಿಗೂ ಬಂದ ಭಾರತ್ ಅಕ್ಕಿ: ಗುಣಮಟ್ಟವಿಲ್ಲದ ಅಕ್ಕಿ ಖರಿದಿಸಲು ಜನರ ಹಿಂದೆಟು

BHARATH-RICE

ಕುಕನೂರು: ತಾಲೂಕಿನ ವಿವಿಧ ಗ್ರಾಮಗಳಲ್ಲಿ ಪ್ರಧಾನ ಮಂತ್ರಿಗಳ ಬಹು ನಿರೀಕ್ಷಿತ ಯೋಜನೆಯಾದ ಬಡ ಜನರಿಗೆ ಕಡಿಮೆ ದರದಲ್ಲಿ ಅಕ್ಕಿ ವಿತರಿಸುವ ಉದ್ದೇಶದ ಭಾರತ ಅಕ್ಕಿ ತುಂಬಿ ಕೊಂಡ ವಾಹನವೊಂದು ಸಂಚರಿಸಿ ಅಕ್ಕಿ ಮಾರಾಟ ಮಾಡಲಾಯಿತು.
ಪ್ರಧಾನಿಗಳು ಘೋಷಿಸಿದಂತೆ ಸೋನಾಮಸೂರಿ ಅಕ್ಕಿ ಕೆಜಿಗೆ ರೂ.೨೯ಕ್ಕೆ ಸಿಗುತ್ತದೆ ಎಂದು ಬಹು ನಿರೀಕ್ಷೆಯಿಂದ ಭಾರತ ಅಕ್ಕಿ ವಾಹನದತ್ತ ಓಡೋಡಿ ಬಂದ ಸಾರ್ವಜನಿಕರ ಮಾತ್ರ ನಿರಾಸೆ ಯಿಂದ ಹಿಂದಿರುಗಿದ ಸಂದರ್ಭ ನೋಡ ಸಿಗುತ್ತಿತ್ತು.
ಗಾಡಿಯ ಹತ್ತಿರ ಬಂದು ಅಕ್ಕಿಯನ್ನು ನೋಡಿದ ಜನರು ನಿರಾಸೆಯಿಂದ ಇಂತಹ ಅಕ್ಕಿಗಾಗಿ ನಾವು ಎದುರು ನೋಡುತ್ತಿದ್ದೇವೆಯೆ ಎಂದು ಒಬ್ಬರನ್ನೊಬ್ಬರು ಪ್ರಶ್ನಿಸ ತೊಡಗಿದರು. ಕೇವಲ ೨೯ ರೂಪಾಯಿಗಳಿಗೆ ೧ ಕೆಜಿಯಂತೆ ಐದು ಹಾಗೂ ೧೦ ಕೆಜಿಗಳ ಬ್ಯಾಗ್ ಗಳಲ್ಲಿ ಸೋನಾಮಸೂರಿ ಅಕ್ಕಿ ದೊರೆಯುವುದಾಗಿ ಪ್ರಧಾನಿಗಳು ಹೇಳಿದ್ದರು. ಇಲ್ಲಿ ನೋಡಿದರೆ ಪಡಿತರ ವಿತರಣೆಯ ಅಕ್ಕಿಯನ್ನೇ ಪ್ಯಾಕ್ ಮಾಡಿ ಮಾರಾಟ ಮಾಡಲಾಗುತ್ತಿದೆ ಎಂದು ಸಾರ್ವಜನಿಕರು ಮಾತನಾಡಿಕೊಳ್ಳುತ್ತಿದ್ದ ದೃಶ್ಯ ಕುಕನೂರು ತಾಲೂಕಿನ ಮಂಡಲಗಿರಿ ಗ್ರಾಮದ ಹಳೆಯ ಪಂಚಾಯತಿ ಕಟ್ಟಡದಲ್ಲಿ ಹತ್ತಿರ ಕಂಡುಬಂದ ದೃಶ್ಯಗಳಾಗಿದ್ದವು.
ದೇಶದ ಜನರಿಗೆ ಕಡಿಮೆ ದರದಲ್ಲಿ ಭಾರತ ಅಕ್ಕಿ ಎಂಬ ಹೆಸರಿನಲ್ಲಿ ಸೋನಾಮಸೂರಿ ಅಕ್ಕಿ ಮಾರುವುದಾಗಿ ಹೇಳಿರುವುದು ಹಾಗೂ ಗ್ರಾಮೀಣ ಪ್ರದೇಶಗಳಿಗೂ ಸಹ ವಾಹನವನ್ನು ಕಳಿಸಿರುವುದು ಚುನಾವಣಾ ಗಿಮಿಕ್ ಎಂದು ಗ್ರಾಮಸ್ಥರು ಮಾತನಾಡಿಕೊಳ್ಳುತ್ತಿದ್ದರು. ಆದರೂ ಸಹ ಕೆಲ ಗ್ರಾಮೀಣ ಪ್ರದೇಶದ ಜನರು ಈ ಭಾರತ ಅಕ್ಕಿಯ ಪಾಕೆಟ್‌ಗಳನ್ನು ಖರೀದಿಸಿ ತೆಗೆದುಕೊಂಡು ಹೋಗಿ ಅನ್ನ ಮಾಡಿದ ನಂತರ ಅಕ್ಕಿ ಮಾರಾಟ ಮಾಡಿ ಹೋದವರಿಗೆ ಹಿಡಿಶಾಪ ಹಾಕುತ್ತಿದ್ದ ಪ್ರಸಂಗಗಳು ಸಹ ಜರುಗಿದವು.