ನೈರುತ್ಯ ಶಿಕ್ಷಣ ಕ್ಷೇತ್ರದ ಚುನಾವಣೆ ಅರಿವು ಮೂಡಿಸಲು ಬೃಹತ್ ಅಭಿಯಾನಕ್ಕೆ ಬೆಣ್ಣೂರ್ ಚಾಲನೆ
ಶಿವಮೊಗ್ಗ: ನೈರುತ್ಯ ಶಿಕ್ಷಣ ಕ್ಷೇತ್ರದ ಚುನಾವಣೆಗೆ ಮತದಾನದ ಅರಿವು ಮೂಡಿಸಲು ಮತ್ತು ಕ್ಷೇತ್ರ ವ್ಯಾಪ್ತಿಯಲ್ಲಿ ಬರುವ ಪ್ರತಿಯೊಬ್ಬ ಅರ್ಹ ಶಿಕ್ಷಕರು ಮತದಾನ ಮಾಡುವಂತೆ ಜಗೃತಿ ಮೂಡಿಸಲು ೩ ಸಾವಿರ ಶಾಲಾ ಕಾಲೇಜು, ೩ ಸಾವಿರ ಕಾರ್ಯಕರ್ತರು ಎಂಬ ವಿನೂತನ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ ಎಂದು ನೈರುತ್ಯ ಶಿಕ್ಷಣ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಪ್ರಬಲ ಆಕಾಂಕ್ಷಿ ಮತ್ತು ಕಾಂಗ್ರೆಸ್ ಪಕ್ಷದ ಸಾಮಾಜಿಕ ಜಲತಾಣದ ರಾಜ್ಯ ಸಂಚಾಲಕ ನಂಜೇಶ್ ಬೆಣ್ಣೂರ್ ಸುದ್ದಿಗೋಷ್ಟಿಯಲ್ಲಿ ತಿಳಿಸಿದರು.
ನೈರುತ್ಯ ವಲಯದ ಶಿಕ್ಷಣ ಸಂಸ್ಥೆಗಳಿಗೆ ಒಂದು ರಾಷ್ಟ್ರ್ಟೀಯ ಪಕ್ಷದ ಕಾರ್ಯಕರ್ತನಾಗಿರುವ ನಾನು ನನ್ನ ಶಿಕ್ಷಕ ಸಮುದಾಯಕ್ಕೆ ಸೇವೆಯನ್ನು ನೀಡಲು ಹಾಗೂ ಉತ್ತಮ ಕೊಡುಗೆ ನೀಡಲು ಮಾದರಿ ಅಭಿಯಾನವನ್ನು ನಿರೂಪಿಸಿದ್ದು ಈ ಮೂಲಕ ನೈರುತ್ಯ ಶಿಕ್ಷಣ ಕ್ಷೇತ್ರದ ವ್ಯಾಪ್ತಿಯಲ್ಲಿ ೩ ಸಾವಿರ ಕಾರ್ಯಕರ್ತರ ಸಹಾಯ ದಿಂದ ಕ್ಷೇತ್ರದಲ್ಲಿರುವ ೩ ಸಾವಿರ ಶಿಕ್ಷಣ ಸಂಸ್ಥೆಗಳನ್ನು ಭೇಟಿಯಾಗಿ ಅಲ್ಲಿರುವ ಪ್ರತಿಯೊಬ್ಬ ಶಿಕ್ಷಕರನ್ನು ಸಂಪರ್ಕಿಸಿ ಈ ಶಿಕ್ಷಣ ಕ್ಷೇತ್ರದ ಚುನಾವಣೆಯ ಬಗ್ಗೆ ಅರಿವು ಮೂಡಿಸುವುದು ಮತ್ತು ಮತದಾನ ಮಾಡಲು ನೋಂದಣಿ ಮಾಡಿ ಕೊಳ್ಳುವ ಪ್ರಕ್ರಿಯೆ ಮಾಡಲಾಗುವುದು ಎಂದರು.
ಎಐಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯರ ನಿರ್ದೇಶನದಂತೆ ರಾಜ್ಯದ ೬ ಶಿಕ್ಷಣ ಕ್ಷೇತ್ರವನ್ನು ಕೈ ವಶ ಮಾಡಿಕೊಳ್ಳಲು ತಂತ್ರ ರೂಪಿಸಿದ್ದು ಈ ತಂತ್ರದ ಮೂಲಕ ಶಿಕ್ಷಣ ಕ್ಷೇತ್ರಕ್ಕೆ ಹಾಗೂ ಪ್ರತಿಯೊಬ್ಬ ಶಿಕ್ಷಕರ ಏಳಿಗೆಗೆ ಈ ಅಭಿಯಾನದ ಮೂಲಕ ಸೇವೆ ಸಲ್ಲಿಸಿ ಮಾದರಿಯಾಗುವ ಗುರಿ ಹೊಂದಿದ್ದೇನೆ ಎಂದರು.
ನೈರುತ್ಯ ಶಿಕ್ಷಕರ ಕ್ಷೇತ್ರ ವ್ಯಾಪ್ತಿ ಯಲ್ಲಿ ಸುಮಾರು ೩ ಸಾವಿರಕ್ಕೂ ಹೆಚ್ಚು ಶಾಲಾ ಕಾಲೇಜುಗಳಿದ್ದು ಕೇವಲ ಸರ್ಕಾರಿ ಶಿಕ್ಷಕರು ಮಾತ್ರ ಈ ಚುನಾವಣೆಯಲ್ಲಿ ಪಾಲ್ಗೊಳ್ಳ ಬಹುದು ಎಂಬ ತಪ್ಪು ಕಲ್ಪನೆಯಿದೆ, ಕಳೆದ ೬ ವರ್ಷಗಳಲ್ಲಿ ೩ ವರ್ಷ ಖಾಸಗೀ ಶಿಕ್ಷಣ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸಿದ ಮತ್ತು ಸಲ್ಲಿಸುತ್ತಿರುವ ಶಿಕ್ಷಕರು ಕೂಡ ಮತದಾನ ಮಾಡಬಹುದಾಗಿದೆ. ಇದರ ಬಗ್ಗೆ ಅರಿವಿನ ಕೊರತೆ ಇದ್ದು ಈ ೩ ಸಾವಿರ ಕಾರ್ಯಕರ್ತರನ್ನೊಳ ಗೊಂಡ ಬೃಹತ್ ಅಭಿಯಾನ ಶಿಕ್ಷಕರ ಬಹುತೇಕ ಸಂದೇಹಗಳನ್ನು ನಿವಾರಣೆ ಗೊಳಿಸಿ ಪ್ರತಿಯೊಬ್ಬ ಅರ್ಹ ಶಿಕ್ಷಕನಿಂದ ಮತದಾನ ಮಾಡಿಸುವುದು ನಮ್ಮ ಗುರಿಯಾಗಿದೆ ಎಂದರು.
ಕಳೆದ ಬಾರಿ ನೊಂದಾಯಿಸಿ ಮತದಾನ ಮಾಡಿದ ಪ್ರತಿಯೊಬ್ಬ ಮತದಾರನು ಈ ಬಾರಿಯೂ ಖಡ್ಡಾಯವಾಗಿ ಮತದಾನಕ್ಕೆ ನೋಂದಣಿ ಮಾಡಿಕೊಳ್ಳಬೇ ಕಾಗಿದ್ದು ಅ.೩೧ ಕಡೇಯ ದಿನವಾಗಿದೆ, ಶಿಕ್ಷಕರ ಸಮಯದ ಅಭಾವ ತಿಳಿದಿದ್ದರಿಂದ ಅವರ ನೋಂದಣಿಯನ್ನೂ ಸಹ ನಮ್ಮ ಕಛೇರಿಯಿಂದಲೇ ಮಾಡಿ ಕೊಡುವ ವ್ಯವಸ್ಥೆ ಮಾಡಲಾಗಿದ್ದು ಶಿಕ್ಷಕರು ದೂರವಾಣಿ ಸಂಖ್ಯೆ ೮೮೬೧೫ ೧೮೮೬೮ ಅನ್ನು ಸಂಪರ್ಕಿಸಬಹುದು ಎಂದರು.
ಅಲ್ಲದೆ ಮತದಾನದಿಂದ ದೂರ ಉಳಿದಿರುವ ಖಾಸಗಿ ಶಿಕ್ಷಣ ಕ್ಷೇತ್ರದ ಶಿಕ್ಷಕರು ತಮ್ಮ ವಿವರಗಳೊಂದಿಗೆ ಫಾರಂ ನಂ ೧೯ ನ್ನು ಭರ್ತಿ ಮಾಡಿ ನಮಗೆ ನೀಡಿದರೆ ನಾವು ಅವರ ಹೆಸರನ್ನು ಮತದಾರರ ಪಟ್ಟಿಗೆ ಸೇರಿಸಲು ಬದ್ದರಾಗಿದ್ದು ಈ ಅಭಿಯಾನಕ್ಕೆ ಕಾಂಗ್ರೆಸ್ ವಿದ್ಯಾರ್ಥಿ ಘಟಕದ (ಎನ್.ಎಸ್.ಯು.ಐ) ಪ್ರತಿಯೊಬ್ಬ ಯುವ ಕಾರ್ಯಕರ್ತರು ಭಾಗವಹಿಸು ವಂತೆ ಕರೆ ನೀಡಿದರು.
ಈ ಬೃಹತ್ ಅಭಿಯಾನಕ್ಕೆ ಪ್ರೋತ್ಸಾಹಿಸಿ ಎ ಶಿಕ್ಷಕರು ಈ ಅಭಿಯಾನದ ಲಾಭ ಪಡೆದು ಕೊಳ್ಳಬೇಕೆಂದು ಮನವಿ ಮಾಡಿದರು.
ಸುದ್ದಿಗೋಷ್ಟಿಯಲ್ಲಿ ಕಾಂಗ್ರೆಸ್ ಮುಖಂಡರಾದ ಸತೀಶ್ ಎತ್ತಿನಮನೆ, ನಾಗೇಶ್, ಕೀರ್ತಿ ಸೇಟ್, ಸುಮನ್ ಶೆಟ್ಟಿ, ನಾಗೇಶ್ ರಾಜ್ ಅರಸ್ ಇದ್ದರು.