ಬೆಂಗಳೂರು: ಚಂದಿರನ ಅಂಗಳಕ್ಕೆ ನೌಕೆಯನ್ನು ಕಳುಹಿಸುವ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ(ಇಸ್ರೋ) ಐತಿಹಾಸಿಕ ಚಂದ್ರಯಾನ-೩ ಆಂಧ್ರ ಪ್ರದೇಶದ ಶ್ರೀಹರಿ ಕೋಟಾದಲ್ಲಿರುವ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಇಂದು ಮಧ್ಯಾಹ್ನ ೨.೩೫ಕ್ಕೆ ವಿಕ್ರಂ ಲ್ಯಾಂಡರ್ ಮತ್ತು ಪ್ರಗ್ಯಾನ್ ರೋವರ್ ಅನ್ನು ಹೊತ್ತ ಜಿಎಸ್‌ಎಲ್‌ವಿ ಮಾರ್ಕ್ ೩ ‘ಬಾಹುಬಲಿ ರಾಕೆಟ್’ ಆಗಸದತ್ತ ಚಿಮ್ಮಿದ್ದು, ಉಡಾವಣೆ ಯಾದ ಕೆಲವೇ ಕ್ಷಣಗಳಲ್ಲಿ ಚಂದ್ರಯಾನ-೩ ನೌಕೆ ನಿಗದಿತ ಕಕ್ಷೆ ಸೇರುವಲ್ಲಿ ಯಶಸ್ವಿಯಾಗಿದೆ. ಇದರೊಂದಿಗೆ ಉಪಗ್ರಹವನ್ನು ಚಂದ್ರನ ಮೇಲ್ಮೈಯಲ್ಲಿ ಸುಲಭವಾಗಿ ಇಳಿಸುವ ೬ ವಾರಗಳ ಮಿಷನ್‌ಗೆ ಅಧಿಕೃತ ಚಾಲನೆ ಸಿಕ್ಕಿದೆ.
೨೦೧೯ರಲ್ಲಿ ಚಂದ್ರಯಾನ -೨ನ್ನು ಸುಲಭ ವಾಗಿ ಚಂದ್ರನ ಮೇಲೆ ಇಳಿಸಲು ವಿಫಲವಾದರೂ ಕೂಡ ಕುಗ್ಗದ ಭಾರತೀಯ ಬಾಹ್ಯಾಕಾಶ ಸಂಸ್ಥೆ ಇಸ್ರೊ ವಿಜನಿಗಳು ಇದೀಗ ಭಾರತದ ಬಹು ನಿರೀಕ್ಷಿತ ಚಂದ್ರಯಾನ-೩ ಉಡಾವಣೆಗೆ ಸಜಗಿದ್ದರು. ಉಪಗ್ರಹವನ್ನು ಚಂದ್ರನ ಮೇಲ್ಮೈ ಯಲ್ಲಿ ಸುಲಭವಾಗಿ ಇಳಿಸುವುದು ಉಡ್ಡಯನದ ಉದ್ದೇಶವಾಗಿತ್ತು. ಇಂದು ಯಶಸ್ವಿಯಾಗಿದೆ.
ಇಸ್ರೋ ಜು.೧೪ರ ಇಂದು ಮಧ್ಯಾಹ್ನ ಚಂದ್ರನ ಮೇಲೆ ರೋವರ್ ಇಳಿಸುವ ಉದ್ದೇಶ ದಿಂದ ರಾಕೆಟ್ ಉಡಾವಣೆಗೊಳಿಸಲು ಸನ್ನದ್ದವಾ ಗಿದ್ದು, ಈ ಐತಿಹಾಸಿಕ ಕಾರ್ಯಾಚರಣೆ ಬಾಹ್ಯಾಕಾಶ ಅನ್ವೇಷಣೆಯಲ್ಲಿ ಭಾರತವನ್ನು ಒಂದು ಪ್ರಮುಖ ರಾಷ್ಟ್ರವನ್ನಾಗಿಸುವ, ಬಾಹ್ಯಾ ಕಾಶ ಉದ್ಯಮ ವಲಯದಲ್ಲಿ ಪ್ರಮುಖ ವಾಣಿಜ್ಯ ಶಕ್ತಿಯಾಗುವ ಗುರಿ ಹೊಂದಿದೆ.
ಚಂದ್ರನ ಮೇಲೆ ಯಶಸ್ವಿಯಾಗಿ ಲ್ಯಾಂಡರ್ ಇಳಿಸುವಲ್ಲಿ ಅಮೆರಿಕಾ ಸಂಯುಕ್ತ ಸಂಸ್ಥಾನ, ಈ ಹಿಂದಿನ ಸೋವಿಯತ್ ಒಕ್ಕೂಟ, ಹಾಗೂ ಚೀನಾ ಗಳು ಮಾತ್ರವೇ ಯಶಸ್ವಿಯಾಗಿವೆ. ದುರದೃಷ್ಟವ ಶಾತ್, ೨೦೨೩ರ ಆರಂಭದಲ್ಲಿ ಜಪಾನಿನ ಸ್ಟಾರ್ಟಪ್ ಸಂಸ್ಥೆಯೊಂದರ ಚಂದ್ರನ ಮೇಲೆ ಇಳಿಯುವ ಪ್ರಯತ್ನ ಪತನಗೊಂಡು, ವೈಫಲ್ಯ ಅನುಭವಿಸಿತು.
ಅಂದಾಜು ೭೫ ಮಿಲಿಯನ್ ಡಾಲರ್ ಮೊತ್ತ ದಲ್ಲಿ (೬೧೫ ಕೋಟಿ) ಅಭಿವೃದ್ಧಿ ಪಡಿಸಲಾಗಿರುವ ಭಾರತದ ಚಂದ್ರಯಾನ-೩ ಯೋಜನೆ ಭಾರತದ ದಕ್ಷಿಣದಲ್ಲಿರುವ ಆಂಧ್ರಪ್ರದೇಶದ ಶ್ರೀಹರಿ ಕೋಟಾದಲ್ಲಿರುವ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ, ಜು.೧೪ರ ಮಧ್ಯಾಹ್ನ ೨:೩೫ಕ್ಕೆ ಯಶಸ್ವಿಯಾಗಿ ಉಡಾವಣೆಗೊಂಡಿದೆ.
ಈ ಉಡಾವಣೆ ಯಶಸ್ವಿಯಾದ ನಂತರ, ೪೩.೫ ಮೀಟರ್ ಉದ್ದದ (೧೪೩ ಅಡಿ) ಎಲ್‌ಎಂವಿ೩ ಉಡಾವಣಾ ರಾಕೆಟ್ ಸ್ಪೇಸ್‌ಕ್ರಾಫ್ಟ್ ಅನ್ನು ದೀರ್ಘವೃತ್ತಾಕಾರದ ಭೂಮಿಯ ಕಕ್ಷೆಗೆ ಒಯ್ಯಲಿದೆ. ಅಲ್ಲಿಂದ, ಸ್ಪೇಸ್‌ಕ್ರಾಫ್ಟ್ ಚಂದ್ರ ನೆಡೆಗಿನ ಪಥವನ್ನು ಅನುಸರಿಸಿ ಚಲಿಸುತ್ತಾ, ಆಗಸ್ಟ್ ೨೩ರ ಆಸುಪಾಸಿನಲ್ಲಿ ಚಂದ್ರನ ಮೇಲೆ ಇಳಿಯುವ ನಿರೀಕ್ಷೆಗಳಿವೆ.
ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ (ಇಸ್ರೋ) ಮುಂದಿನ ಉಡಾವಣೆ ಪ್ರಧಾನಿ ಮೋದಿ ನೇತೃತ್ವದ ಸರ್ಕಾರದ ಅವಧಿಯಲ್ಲಿನ ಅತ್ಯಂತ ಪ್ರಮುಖ ಯೋಜನೆಯಾಗಿದೆ. ಕೇಂದ್ರ ಸರ್ಕಾರ ತನ್ನ ಇತ್ತೀಚಿನ ನೀತಿಗಳಲ್ಲಿ ಖಾಸಗಿ ಬಾಹ್ಯಾಕಾಶ ಉಡಾವಣೆಗಳಿಗೆ ಮತ್ತು ಉಪಗ್ರಹ ಆಧಾರಿತ ಯೋಜನೆಗಳಿಗೆ ಉತ್ತೇಜನ ನೀಡು ತ್ತಿರುವುದರಿಂದ, ಈ ಬೆಳವಣಿಗೆಗಳು ಸರ್ಕಾರದ ನೀತಿಗೆ ಅನುಗುಣವಾಗಿದೆ.


ಭಾರತೀಯ ಅಧಿಕಾರಿಗಳು, ಭಾರತದ ಬಾಹ್ಯಾಕಾಶ ಕಂಪನಿಗಳು ಮುಂದಿನ ದಶಕದಲ್ಲಿ ಜಾಗತಿಕ ಉಡಾವಣೆಗಳಲ್ಲಿ ಹೆಚ್ಚಿನ ಪಾಲು ಹೊಂದಲಿವೆ ಎಂಬ ಆಶಾಭಾವನೆ ಹೊಂದಿದ್ದಾರೆ. ಭಾರತದ ಮುಂದಿ ರುವ ಗುರಿಯೆಂದರೆ, ೨೦೨೦ರಲ್ಲಿ ಸಾಧಿಸಲಾದ ಆದಾಯದ ಶೇ.೨ ಪಾಲನ್ನು ಐದು ಪಟ್ಟು ಹೆಚ್ಚಿಸುವುದು.
ಚಂದ್ರಯಾನ-೩ ಯೋಜನೆ ೨ ಮೀಟರ್ ಎತ್ತರದ ಲ್ಯಾಂಡರ್ ಹೊಂದಿದ್ದು, ಇದು ಚಂದ್ರನ ದಕ್ಷಿಣ ಧ್ರುವ ಪ್ರದೇಶದಲ್ಲಿ ರೋವರ್ ಅನ್ನು ಬಿಡುಗಡೆಗೊಳಿಸಲಿದೆ. ರೋವರ್ ಎರಡು ವಾರಗಳ ಅವಧಿಯಲ್ಲಿ ಚಂದ್ರನ ಮೇಲೆ ಹಲವು ಪ್ರಯೋಗಗಳನ್ನು ಕೈಗೊ ಳ್ಳಲಿದೆ.
ತಜ್ಞರ ಪ್ರಕಾರ, ಈ ಉಡಾ ವಣೆ ಇನ್ನೊಂದು ಉದ್ದೇಶವಾದ ಖಾಸಗಿ ವಲಯದಲ್ಲಿನ ವೇಗವಾದ ಬಾಹ್ಯಾಕಾಶ ಸ್ಪರ್ಧೆಗೆ ತಾನೂ ಸಿದ್ಧವಾಗಿರುವುದನ್ನು ಸಾಕಾರಗೊ ಳಿಸಲಿದೆ.
ನವದೆಹಲಿಯ ಮನೋಹರ್ ಪರಿಕರ್ ಇನ್ಸ್ಟಿಟ್ಯೂಟ್ ಫಾರ್ ಡಿಫೆನ್ಸ್ ಸ್ಟಡೀಸ್ ಅಂಡ್ ಅನಾ ಲಿಸಿಸ್ ಸಂಸ್ಥೆಯ ತಜ್ಞರೊಬ್ಬರ ಪ್ರಕಾರ, ಚಂದ್ರಯಾನ-೩ರ ಯಶಸ್ಸು ಅಂತರ ರಾಷ್ಟ್ರೀಯ ಮಟ್ಟದಲ್ಲಿ ಭಾರತದ ಖ್ಯಾತಿ, ಗೌರವವನ್ನು ಹೆಚ್ಚಿಸುವುದರ ಜೊತೆಗೆ, ಉದ್ಯಮದ ವಾಣಿಜ್ಯಿಕ ಪ್ರಯೋಜನಗಳನ್ನು ಪಡೆಯಲು ಪೂರಕವಾಗಲಿದೆ.
೨೦೨೦ರಲ್ಲಿ, ಇಸ್ರೋದ ಚಂದ್ರಯಾನ-೨ ಚಂದ್ರಸ್ಪರ್ಶ ನಡೆಸುವ ವೇಳೆಗೆ ಆಕಸ್ಮಿಕವಾಗಿ ಪತನಗೊಂಡರೂ, ಆರ್ಬಿಟರ್ ಅನ್ನು ಯಶಸ್ವಿಯಾಗಿ ಕಕ್ಷೆಗೆ ತಲುಪಿಸಿತು. ಚಂದ್ರಯಾನ-೨ರ ಲ್ಯಾಂಡರ್ ಕಳೆದು ಹೋದ ಪ್ರದೇಶದ ಸುತ್ತಮುತ್ತಲಲ್ಲೇ ಚಂದ್ರಯಾನ-೩ ಇಳಿಯಲಿದೆ.
ಭಾರತದ ಉಡಾವಣಾ ಮಾರುಕಟ್ಟೆ ಖಾಸಗಿ ಸಂಸ್ಥೆಗಳಿಗೆ ತೆರೆಯಲ್ಪಟ್ಟ ಬಳಿಕ, ಭಾರತದಲ್ಲಿನ ಬಾಹ್ಯಾಕಾಶ ಸ್ಟಾರ್ಟಪ್‌ಗಳ ಸಂಖ್ಯೆ ಎರಡು ಪಟ್ಟಿಗೂ ಹೆಚ್ಚಾಗಿದೆ. ಕಳೆದ ವರ್ಷದ ಕೊನೆಯಲ್ಲಿ, ಸ್ಕೈರೂಟ್ ಏರೋಸ್ಪೇಸ್ ಭಾರತದ ಮೆದಲ ಖಾಸಗಿ ನಿರ್ಮಾಣದ ರಾಕೆಟ್ ಅನ್ನು ಬಾಹ್ಯಾಕಾಶಕ್ಕೆ ಕಳುಹಿಸಿತು.
ಪ್ರಧಾನಿ ಮೋದಿಯವರ ಇತ್ತೀಚಿನ ಅಮೆರಿಕಾ ಪ್ರವಾಸದ ವೇಳೆಯಲ್ಲಿ, ಮೋದಿ ಹಾಗೂ ಅಮೆರಿಕಾ ಅಧ್ಯಕ್ಷ ಜೋ ಬಿಡೆನ್ ಅವರು ಬಾಹ್ಯಾಕಾಶ ವಲಯದಲ್ಲಿ ಸಹಕಾರವನ್ನು ಇನ್ನಷ್ಟು ವೃದ್ಧಿಸುವ ಕುರಿತು ಬದ್ಧತೆಯನ್ನು ವ್ಯಕ್ತಪಡಿಸಿ ದ್ದಾರೆ.
ಅಮೆರಿಕಾದ ಡೆನ್‌ವರ್‌ನ ಲ್ಲಿರುವ ವೊಯೇಜರ್ ಸ್ಪೇಸ್ ಎಂಬ ಸಂಸ್ಥೆಗೆ ನಾಸಾ ತನ್ನ ಮುಂದಿನ ಸ್ಟಾರ್ ಲ್ಯಾಬ್ ಬಾಹ್ಯಾಕಾಶ ಕೇಂದ್ರವನ್ನು ನಿರ್ಮಿಸಲು ಗುತ್ತಿಗೆ ನೀಡಿತ್ತು. ಈ ಸಂಸ್ಥೆ ಕಳೆದ ವಾರ ತಾನು ಇಸ್ರೋ ಜೊತೆ ಎಂಓಯು ಸಹಿ ಹಾಕಿರುವುದಾಗಿ ಘೋಷಿಸಿದೆ. ಈ ಒಪ್ಪಂದ ಭಾರತದ ರಾಕೆಟ್‌ಗಳನ್ನು ಬಳಸಿಕೊಳ್ಳುವುದು ಮತ್ತು ಭಾರತದ ಬಾಹ್ಯಾಕಾಶ ಸ್ಟಾರ್ಟಪ್ ಸಂಸ್ಥೆಗಳೊಡನೆ ಸಹಯೋಗ ಹೊಂದುವುದನ್ನು ಒಳಗೊಂಡಿದೆ.
ಭಾರತ ಬಾಹ್ಯಾಕಾಶವನ್ನು ಒಂದು ಕಾರ್ಯತಂತ್ರದ ಆಸ್ತಿಯಾಗಿ ಪರಿಗಣಿಸಿದೆ. ಆದ್ದರಿಂದ ಭಾರತ ಬಾಹ್ಯಾಕಾಶ ವಲಯದಲ್ಲಿ ಪ್ರಮುಖ ರಾಷ್ಟ್ರವಾಗಿ ಹೊರಹೊಮ್ಮುವ ಉದ್ದೇಶ ಹೊಂದಿದೆ. ಇದು ಭಾರತ ಬಾಹ್ಯಾಕಾಶ ವಲಯದ ಪ್ರಮುಖ ಶಕ್ತಿಗಳಲ್ಲಿ ಒಂದೆನಿಸುವ ಅವಕಾಶ ಕಲ್ಪಿಸಲಿದೆ.
ಯುವ ವಿಜನಿಯ ಕೊಡುಗೆ: ಬೆಳಗಾವಿ: ದೇಶವೇ ಎದುರು ನೋಡುತ್ತಿರೋ ಚಂದ್ರಯಾನ-೩ಕ್ಕೆ ಬೆಳಗಾವಿಯ ಯುವ ವಿಜನಿ ಕೊಡುಗೆ ನೀಡುವ ಮೂಲಕ ಕುಂದಾನಗರಿ ಬೆಳಗಾವಿ ಜಿಲ್ಲೆಯ ಹಿರಿಮೆ ಹೆಚ್ಚಿಸಿದ್ದಾರೆ.
ಖಾನಾಪೂರ ತಾಲೂಕಿನ ಅನಗಡಿ ಗ್ರಾಮದ ಪ್ರಕಾಶ ಪಡ್ನೇಕರ್ ಚಂದ್ರಯಾನ-೩ರ ಯಶಸ್ಸಿಗಾಗಿ ಶ್ರಮಿಸುತ್ತಿದ್ದಾರೆ. ಇಡೀ ದೇಶವೇ ಹೆಮ್ಮೆ ಪಡುವ ಕಾರ್ಯಕ್ಕೆ ಬೆಳಗಾವಿ ಯುವ ವಿಜನಿ ಸಾಥ್ ನೀಡಿದ್ದು, ಕಳೆದ ೫ ವರ್ಷಗಳಿಂದ ಶ್ರೀಹರಿಕೋಟಾ ದಲ್ಲಿ ಯುವ ವಿಜನಿಯ ಕಸರತ್ತು ನಡೆಸಿದ್ದಾರೆ. ತಾಂತ್ರಿಕ ದೋಷದಿಂದ ವಿಫಲ ವಾಗಿದ್ದ ಚಂದ್ರ ಯಾನ-೨ರಲ್ಲೂ ಪ್ರಕಾಶ್ ಕಾರ್ಯನಿರ್ವ ಹಿಸಿ ದ್ದರು. ಸದ್ಯ ಚಂದ್ರಯಾನ-೩ ಸಕ್ಸಸ್‌ಗಾಗಿ ಯುವ ವಿಜನಿ ಪ್ರಕಾಶ ಪಡ್ನೇಕರ್ ಶ್ರಮವಹಿ ಸಿದ್ದಾರೆ.
ಈ ಮಿಷನ್ ಯಶಸ್ವಿಯಾದರೆ ಚಂದ್ರನ ಮೇಲೆ ಇಳಿದ ೪ನೇ ರಾಷ್ಟ್ರವಾಗಿ ಭಾರತ ಹೊರಹೊಮ್ಮಲಿದೆ.
ಸ್ಪೀಕರ್ ಖಾದರ್ ಶುಭಹಾರೈಕೆ…
ಬೆಂಗಳೂರು: ಚಂದ್ರಯಾನ -೩ ಉಡಾವಣೆ ಯಶಸ್ವಿಯಾಗಲಿ ಎಂದು ಸ್ಪೀಕರ್ ಯು.ಟಿ ಖಾದ ರ್ ಸದನದಲ್ಲಿ ಶುಭ ಹಾರೈಸಿ ದ್ದಾರೆ. ಸದನದ ಪರವಾಗಿ ಚಂದ್ರಯಾನ-೩ರ ಉಡಾವಣೆ ಯಶಸ್ವಿಯಾಗಲಿ ಎಂದು ಅವರು ಪ್ರಕಟ ಣೆಯಲ್ಲಿ ತಿಳಿಸಿದ್ದಾರೆ. ಈ ಸಂಭ್ರಮದ ಕ್ಷಣಗಳಲ್ಲಿ ನಾವು ಹೆಮ್ಮೆಪಡೋಣ. ಇಸ್ರೋ ಉಡಾವಣೆ ಮಾಡುತ್ತಿರುವ ಚಂದ್ರಯಾನ ಯಶಸ್ವಿ ಆಗಲಿ ಎಂದು ಶುಭಕೋರೋಣ ಎಂದು ಉಲ್ಲೇಖಿಸಿದ್ದಾರೆ.
ಭಾರತದ ಭರವಸೆ, ಕನಸುಗಳನ್ನ ಹೊತ್ತೊಯ್ಯಲಿದೆ : ಮೋದಿ
ನವದೆಹಲಿ: ಚಂದ್ರನ ಮೇಲೆ ಗಗನನೌಕೆ ಇಳಿಸಿ ಅಧ್ಯಯನ ಮಾಡುವ ಉದ್ದೇಶದ ಚಂದ್ರ ಯಾನ-೩ ಕಾರ್ಯಕ್ರಮಕ್ಕೆ ಕೌಂಟ್‌ಡೌನ್ ಶುರುವಾಗಿದೆ. ಚಂದ್ರಯಾನ-೩ ಉಡಾವಣೆ ಯಶಸ್ಸಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಶುಭಹಾರೈಸಿ ದ್ದಾರೆ.
ಚಂದ್ರಯಾನ-೩ ಕುರಿತು ಟ್ವೀಟ್ ಮಾಡಿರುವ ಮೋದಿ, ಭಾರತದ ಬಾಹ್ಯಾಕಾಶ ಕ್ಷೇತ್ರಕ್ಕೆ ಸಂಬಂಧಿಸಿದಂತೆ ೨೦೨೩ ರ ಜುಲೈ ೧೪ ಯಾವಾಗಲೂ ಸುವರ್ಣಾಕ್ಷ ರಗಳಲ್ಲಿ ಬರೆದಿಡಬೇಕಿದೆ. ಚಂದ್ರ ಯಾನ-೩ ನಮ್ಮ ಮೂರನೇ ಚಂದ್ರಯಾನ. ಅದರ ಪ್ರಯಾಣ ವನ್ನು ಪ್ರಾರಂಭಿಸುತ್ತದೆ. ಈ ಗಮನಾರ್ಹ ಮಿಷನ್ ನಮ್ಮ ರಾಷ್ಟ್ರದ ಭರವಸೆ ಮತ್ತು ಕನಸುಗಳನ್ನು ಹೊತ್ತೊಯ್ಯುತ್ತದೆ ಎಂದು ಬರೆದುಕೊಂಡಿದ್ದಾರೆ.
ಚಂದ್ರಯಾನ-೩: ಪ್ರಮುಖ ೧೦ ಅಂಶಗಳು
ಶ್ರೀಹರಿಕೋಟ: ಮತ್ತೊಂದು ಐತಿಹಾಸಿಕ ಸಾಧನೆಯತ್ತ ಇಸ್ರೋ ಹೆಜ್ಜೆ ಇಟ್ಟಿದೆ. ಶುಭ ಶುಕ್ರವಾರವಾದ ಇಂದು ಶ್ರೀಹರಿಕೋಟಾದ ಸತೀಶ್ ಧವನ್ ಅಂತರಿಕ್ಷ ಕೇಂದ್ರದಿಂದ ಭಾರತದ ಗಗನನೌಕೆ ನಭಕ್ಕೆ ಚಿಮ್ಮಲಿದೆ. ಬಾಹುಬಲಿ ರಾಕೆಟ್ ಎಂದೇ ಹೆಸರಾದ ಜಿಎಲ್‌ಎಲ್‌ವಿ ಮಾರ್ಕ್ ೩ ರಾಕೆಟ್ ಇದನ್ನು ಹೊತ್ತೊಯ್ಯಲಿದೆ.

  • ಬಾಹುಬಲಿ ರಾಕೆಟ್ ಎಂದು ಕರೆಯಲ್ಪಡುವ ಜಿಎಸ್‌ಎಲ್‌ವಿ ಮಾರ್ಕ್ ೩ ಹೆವಿ-ಲಿಫ್ಟ್ ಉಡಾವಣಾ ವಾಹನದಲ್ಲಿ ಚಂದ್ರನಲ್ಲಿ ಇಳಿಯುವ ಲ್ಯಾಂಡರ್ ವಿಕ್ರಮ್ ಅನ್ನು ಅಳವಡಿಸಲಾಗಿದೆ. ಇದು ೪೩.೫ ಮೀ ಎತ್ತರವಿದ್ದು, ಕುತುಬ್ ಮಿನಾರ್‌ನ ಅರ್ಧಕ್ಕಿಂತಲೂ ಹೆಚ್ಚು ಎತ್ತರವಾಗಿದೆ.
  • ಇಂದು ಮಧ್ಯಾಹ್ನ ೨:೩೫ಕ್ಕೆ ಚಂದ್ರಯಾನ-೩ ಉಡಾವಣೆಯಾದ ಇದು ೪೦ ದಿನಗಳ ಕಾಲ ಅಂತರಿಕ್ಷದಲ್ಲಿ ಪ್ರಯಾಣಿಸಲಿದ್ದು, ಆ.೨೩ ಇಲ್ಲವೇ ೨೪ರಂದು ಚಂದ್ರನ ಮೇಲೆ ಇಳಿಯಲಿದೆ.
  • ಕಳೆದ ೪ ವರ್ಷಗಳ ಹಿಂದೆ ಚಂದ್ರಯಾನ-೨ ಪ್ರಯೋಗಿಸಿ ಚಂದ್ರನ ಅಂಗಳದಲ್ಲಿ ಲ್ಯಾಂಡಿಂಗ್ ವೇಳೆ ಉಂಟಾದ ವೈಫಲ್ಯದಿಂದ ಪಾಠ ಕಲಿತ ಇಸ್ರೋ ಇದೀಗ ಮತ್ತಷ್ಟು ಉತ್ಸಾಹದೊಂದಿಗೆ ಚಂದ್ರಯಾನ-೩ ಪ್ರಯೋಗಕ್ಕೆ ಸಜಗಿದೆ.
  • ೨೦೦೮ರಲ್ಲಿ ಭಾರತದ ಮೊದಲ ಚಂದ್ರಯಾನ ಸಮಯ ದಲ್ಲಿ ಆದ ಸಂಶೋಧನೆಯೊಂದು ಜಗತ್ತನ್ನೇ ವಿಸ್ಮಯಗೊಳಿಸಿತ್ತು. ಚಂದ್ರನ ದಕ್ಷಿಣ ಧ್ರುವದಲ್ಲಿ ನೀರಿನ ಅಣುಗಳು ಕಂಡು ಬಂದಿದ್ದು, ಇದೀಗ ಚಂದ್ರಯಾನ-೩ ಮೊದಲ ಬಾರಿಗೆ ಅದೇ ಸ್ಥಳದಲ್ಲಿ ಇಳಿಯ ಲಿದೆ.
  • ವಿಕ್ರಮ್ ಸುರಕ್ಷಿತ ಹಾಗೂ ನಾಜೂಕಿನಿಂದ ಚಂದ್ರನ ಮೇಲೆ ಇಳಿಯಲು ವಿಶೇಷವಾಗಿ ವಿನ್ಯಾಸ ಗೊಳಿಸಲಾಗಿದೆ.
  • ವಿಜನಿಗಳು ಚಂದ್ರನ ಮಣ್ಣನ್ನು ವಿಶ್ಲೇಷಿಸಲು, ಚಂದ್ರನ ಮೇಲ್ಮೈ ಸುತ್ತಲೂ ತಿರುಗಲು ಹಾಗೂ ಚಂದ್ರನ ಕಂಪನಗಳನ್ನು ದಾಖಲಿಸಲಿಸಲು ಆಶಿಸಿದ್ದಾರೆ.
  • ಕಳೆದ ಬಾರಿಯ ಚಂದ್ರ ಯಾನದ ಮಿಷನ್‌ನಿಂದ ಸಾಕಷ್ಟು ವೈಜನಿಕ ವಿಷಯಗಳನ್ನು ಕಲಿತಿ ದ್ದು, ಈ ಬಾರಿ ಲ್ಯಾಂಡರ್‌ನಲ್ಲಿ ಎಂಜಿನ್‌ಗಳ ಸಂಖ್ಯೆಯನ್ನು ೫ ರಿಂದ ೪ಕ್ಕೆ ಇಳಿಸಲಾಗಿದೆ. ಮಾತ್ರವ ಲ್ಲದೇ ಸಾಫ್ಟ್‌ವೇರ್ ಅನ್ನು ನವೀಕರಿಸಲಾಗಿದೆ ಎಂದು ಇಸ್ರೋ ತಿಳಿಸಿದೆ.
  • ಚಂದ್ರಯಾನ-೩ರಲ್ಲಿ ಆರ್ಬಿಟರ್ ಅಳವಡಿಸಲಾಗಿಲ್ಲ. ಕೇವಲ ಪ್ರೊಪಲ್ಷನ್ ಮಾಡ್ಯೂಲ್, ಲ್ಯಾಂಡರ್, ರೋವರ್ ಮಾಡ್ಯೂಲ್ ಮಾತ್ರ ಇವೆ. ಏಕೆಂದರೆ ಚಂದ್ರಯಾನ -೨ರಲ್ಲಿ ಪ್ರಯೋಗಿಸಿದ್ದ ಆರ್ಬಿಟರ್ ೩ ವರ್ಷಗಳಿಂದ ಚಂದ್ರನ ಸುತ್ತ ತಿರುಗುತ್ತಾ ತನ್ನ ಕೆಲಸವನ್ನು ಮಾಡುತ್ತಿದೆ.
  • ಚಂದ್ರಯಾನ-೧ ಚಂದ್ರನ ಕಾರ್ಯಾಚರಣೆಯ ಭಾರತದ ಮೆದಲ ಮಿಷನ್ ಆಗಿತ್ತು. ಅಕ್ಟೋಬರ್ ೨೦೦೮ರಲ್ಲಿ ಪ್ರಾರಂಭ ವಾದ ಮಿಷನ್ ೨೦೦೯ರ ಆಗಸ್ಟ್ ವರೆಗೆ ಕಾರ್ಯನಿ ರ್ವಹಿಸಿತ್ತು.
  • ೧೯೬೯ರಲ್ಲಿ ಅಮೆರಿಕಾದ ನಾಸಾ ಕಳಿಸಿದ ಅಪೋಲೋ ೧೧ ಎಂಬ ಮಾನವಸಹಿತ ರಾಕೆಟ್ ೪ ದಿನಗಳಲ್ಲಿ ಗಮ್ಯ ಸ್ಥಾನವನ್ನು ಸೇರಿತ್ತು.
    ಆದರೆ ಇಸ್ರೋ ಜು.೧೪ ರಂದು ಕಳಿಸುತ್ತಿರುವ ಚಂದ್ರ ಯಾನ-೩ ಚಂದ್ರನ ಕಕ್ಷೆಯನ್ನು ಸೇರಲು ೪೦ ದಿನ ಹಿಡಿಯಲಿದೆ.