ಆನ್ಲೈನ್ ವ್ಯವಹಾರ ಕುರಿತು ಜಗೃತಿ ಅಗತ್ಯ…
ಶಿವಮೊಗ್ಗ:ಆನ್ಲೈನ್ ವ್ಯವಸ್ಥೆಯಲ್ಲಿ ವ್ಯವಹಾರ ಮಾಡು ವಾಗ ಅತ್ಯಂತ ಜಗೃತಿ ವಹಿಸ ಬೇಕಾಗಿರುವುದು ಅವಶ್ಯಕ. ಸ್ವಲ್ಪ ಎಚ್ಚರ ತಪ್ಪಿದರೂ ವಂಚನೆಗೆ ಒಳ ಗಾಗುತ್ತೇವೆ ಅಥವಾ ದುರ್ಬಳಕೆ ಆಗುತ್ತದೆ ಎಂದು ನಿವೃತ್ತ ಪ್ರಾಧ್ಯಾ ಪಕ ಡಾ.ವೀರ ಮಂಜು ಎಂದರು.
ಸೈಬರ್ ಸುರಕ್ಷತೆ ಹಾಗೂ ಹಣಕಾಸಿನ ವ್ಯವಹಾರದಲ್ಲಿ ಆಗು ವ ಹ್ಯಾಕಿಂಗ್ತೊಂದರೆ ಕುರಿತು ಶಿವಮೊಗ್ಗ ಜಿ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಸಭಾಂಗಣ ದಲ್ಲಿ ಆಯೋಜಿಸಿದ್ದ ಜಗೃತಿ ಕಾ ರ್ಯಾಗಾರದಲ್ಲಿ ಮಾತನಾಡಿದರು.
ಡಿಜಿಟಲ್ ವ್ಯವಸ್ಥೆ ಹೆಚ್ಚಾದರೆ ಉಪಯೋಗ ಕೂಡ ಹೆಚ್ಚುತ್ತಿದೆ. ಆದರೆ ಡಿಜಿಟಲ್ ವ್ಯವಸ್ಥೆಯಲ್ಲಿ ತೊಂದರೆ ಆಗುವ ಸಾಧ್ಯತೆಯು ಹೆಚ್ಚಿರುತ್ತದೆ.ಮಾಹಿತಿ ಸೋರಿಕೆ ಅಥವಾ ಕಳ್ಳತನ ಆದಲ್ಲಿ ವಂಚನೆಗೆ ಒಳಗಾಗಬೇಕಾಗುತ್ತದೆ.ಆದ್ದರಿಂದ ಸುರಕ್ಷತೆ ಹಾಗೂ ಜಗೃತಿಯ ಬಳಕೆಗೆ ಹೆಚ್ಚಿನ ಪ್ರಾಮುಖ್ಯತೆ ನೀಡಬೇಕುಎಂದು ತಿಳಿಸಿದರು.
ಅಂತಜಲದ ಬಳಕೆಯು ನಮ್ಮಜೀವನದಲ್ಲಿ ದಿನನಿತ್ಯ ಹೆಚ್ಚಾ ಗುತ್ತಿದ್ದು, ಗೃಹೋಪಯೋಗಿ ವ್ಯವಸ್ಥೆಯಲ್ಲೂ ಐಒಟಿ ಕಾನ್ಸೆಪ್ಟ್ ಬಳಕೆ ಮಾಡಲಾಗುತ್ತಿದೆ.ಎಲ್ಲ ವ್ಯವಸ್ಥೆಯು ಸ್ಮಾರ್ಟ್ಆಗುತ್ತಿದ್ದು, ನೆಟ್ನಿಂದಲೇಎಲ್ಲವೂ ನಿರ್ವಹಣೆ ಮಾಡಲಾಗುತ್ತದೆ.ಆದರೆದುರ್ಬಲ ನೆಟ್ ವರ್ಕ್ ವ್ಯವಸ್ಥೆಇದ್ದರೆ ಹ್ಯಾಕ ರ್ಗಳು ಸುಲಭವಾಗಿ ವಂಚನೆ ಮಾಡುತ್ತಾರೆಎಂದರು.
ಶಿವಮೊಗ್ಗ ಜಿ ವಾಣಿಜ್ಯ ಮತ್ತುಕೈಗಾರಿಕಾ ಸಂಘದಅಧ್ಯಕ್ಷ ಎನ್.ಗೋಪಿನಾಥ್ ಮಾತನಾಡಿ, ಸೈಬರ್ಬಳಕೆ ಬಗ್ಗೆ ಎಲ್ಲರೂ ತಿಳವಳಿಕೆ ಹೊಂದಬೇಕು. ಡಿಜಿ ಟಲ್ಯುಗ ಆಗಿರುವುದರಿಂದ ಸೈಬರ್ ವಿಷಯಗಳ ಬಗ್ಗೆ ಹೆಚ್ಚಿನ ಮಾಹಿತಿ ಹೊಂದಿರಬೇಕು. ಸೈಬರ್ ಅಪರಾಧ ಹಾಗೂ ಹ್ಯಾಕಿಂಗ್ ಸಮಸ್ಯೆ ಹೆಚ್ಚುತ್ತಿರುವ ಕಾಲ ಇದಾಗಿದೆ. ಸುರಕ್ಷಿತವಾಗಿ ಆನ್ಲೈನ್ ವ್ಯವಹಾರ ನಡೆಸಬೇಕು ಎಂದು ಹೇಳಿದರು.
ಅಗಮ್ಯ ಸೈಬರ್ಟೆಕ್ ಸಂಸ್ಥಾ ಪಕ ಮಹೇಶ್ ವಸ್ತ್ರದ್ ಅವರು ಹ್ಯಾಕಿಂಗ್ ವಿಷಯಗಳ ಕುರಿತು ಕಾರ್ಯಾಗಾರ ನಡೆಸಿಕೊಟ್ಟರು. ಶಿವಮೊಗ್ಗ ಜಿ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಕಾರ್ಯದರ್ಶಿ ವಸಂತ ಹೋಬಳಿದಾರ್, ಸಹ ಕಾರ್ಯದರ್ಶಿ ಜಿ.ವಿಜಯ್ ಕುಮಾರ್, ಬಿ.ಗೋಪಿನಾಥ್, ಎಂ.ರಾಜು, ಶಿಲ್ಪಾ ಗೋಪಿನಾಥ್, ಪರಮೇಶ್ವರ್, ಗಣೇಶಅಂಗಡಿ, ಮರಿಸ್ವಾಮಿ, ರಮೇಶ್ ಹೆಗಡೆ ಮತ್ತಿತರರು ಉಪಸ್ಥಿತರಿದ್ದರು.