ಆ.೨೫: ನೀನಲ್ಲದೆ ಮತ್ಯಾರು ಇಲ್ಲವಯ್ಯ ವಚನಗಳ ನೃತ್ಯ ರೂಪಕ
ಶಿವಮೊಗ್ಗ: ಸಾಣೆಹಳ್ಳಿಯ ಶಿವ ಕುಮಾರ ಕಲಾ ಸಂಘ ಪ್ರಸ್ತುತ ಪಡಿಸುವ ನೀನಲ್ಲದೆ ಮತ್ಯಾರು ಇಲ್ಲವಯ್ಯ (ತುಮ್ಹಾರೆ ಸಿವಾ ಔರ್ ಕೋಯಿ ನಹಿ) ಎಂಬ ಬಸವಣ್ಣ ನವರ ೩೮ ವಚನಗಳ ನೃತ್ಯ ರೂಪಕ ವನ್ನು ಹೊಂಗಿರಣ ಸಂಸ್ಥೆಯಿಂದ ಆ.೨೫ರಂದು ಸಂಜೆ ೬.೩೦ಕ್ಕೆ ಕುವೆಂಪು ರಂಗಮಂದಿರದಲ್ಲಿ ಆಯೋಜಿಸಿದೆ ಎಂದು ರಂಗ ನಿರ್ದೇಶಕ ಸತೀಶ್ ಸಾಸ್ವೆಹಳ್ಳಿ ಸುದ್ದಿಗೋಷ್ಟಿಯಲ್ಲಿ ತಿಳಿಸಿದರು.
೧೨ನೆಯ ಶತಮಾನದಲ್ಲಿ ಕನ್ನಡ ನಾಡಿನಲ್ಲಿ ಸೂರ್ಯನಂತೆ ಉದ ಯಿಸಿದವರು ಬಸವಣ್ಣನವರು. ಬ್ರಾಹ್ಮಣ ಜತಿಯಲ್ಲಿ ಜನಿಸಿದರೂ ಉತ್ತಮ ಕುಲವೆಂಬುದು ಕಷ್ಟತನದ ಹೊರೆ ಎಂದು ಬ್ರಾಹ್ಮಣಿಕೆಯ ಸಂಕೇತ ವಾದ ಜನಿವಾರವನ್ನೇ ಕಿತ್ತೆಸೆದವರು. ಇಂತಹ ಶರಣರ ವಚನಗಳನ್ನು ಉಳಿಸುವ ಉದ್ದೇಶ ದಿಂದ ಸಾಣೆಹಳ್ಳಿ ಶಿವಕುಮಾರ ಕಲಾಸಂಘ ರಾಜ್ಯ ಮತ್ತು ರಾಷ್ಟ್ರಾದ್ಯಂತ ಈ ನೃತ್ಯ ರೂಪಕ ಹಮ್ಮಿಕೊಂಡಿದೆ ಎಂದರು.
`ಅನುಭವ ಮಂಟಪ’ದ ಮೂಲಕ ಇಂದಿನ ಸಂಸತ್ತಿಗೆ ತಳಹದಿ ಹಾಕಿದವರು. ಕಲ್ಯಾಣ ರಾಜ್ಯದ ಅರಸ ಬಿಜ್ಜಳನಲ್ಲಿ ಪ್ರಧಾನಿಯಾಗಿ, ಅರ್ಥ ಸಚಿವರಾಗಿ ಒಬ್ಬ ಜನಪ್ರತಿನಿಧಿ ಹೇಗಿರಬೇಕೆಂದು ತೋರಿಸಿಕೊಟ್ಟ ವರು. ಅಂದು ಬಸವಣ್ಣನವರು ಮಾಡಿದ ಸಮಾಜೋ-ಧಾರ್ಮಿಕ ಕಾರ್ಯಗಳನ್ನು ಇಂದಿಗೂ ಜರಿಯಲ್ಲಿ ತರಲಾಗಿಲ್ಲ ಎಂದರು.
ಪ್ರಮುಖರಾದ ಜ್ಯೋತಿ ಪ್ರಕಾಶ್, ಡಾ. ಧನಂಜಯ ಸರ್ಜಿ, ಧ್ರುವ, ತೇಜಸ್ವಿ, ಮೋಹನ್, ಶ್ರೀಕಂಠಪ್ರಸಾದ್ ಇದ್ದರು.