ಗ್ರಾಮೀಣ ಭಾಗದ ಅಡಿಕೆ ಬೆಳೆಗಾರರಲ್ಲಿ ಆರ್ಥಿಕ ಚೈತನ್ಯ ತುಂಬಲು ಆಪ್ಸ್‌ಕೋಸ್ ಹೊಸಹೊಸ ಕಾರ್ಯಕ್ರಮ ಹಾಕಿಕೊಂಡಿದೆ : ಬೇಸೂರು

ಸಾಗರ : ಗ್ರಾಮೀಣ ಭಾಗದ ಅಡಿಕೆ ಬೆಳೆಗಾರರಲ್ಲಿ ಆರ್ಥಿಕ ಚೈತನ್ಯ ತುಂಬಲು ಆಪ್ಸ್‌ಕೋಸ್ ಹೊಸಹೊಸ ಕಾರ್ಯಕ್ರಮ ಹಾಕಿ ಕೊಂಡಿದೆ ಎಂದು ಆಪ್ಸ್‌ಕೋಸ್ ಅಧ್ಯಕ್ಷ ಬಿ.ಎ.ಇಂದೂಧರ ಬೇಸೂರು ತಿಳಿಸಿದರು.
ತಾಲ್ಲೂಕಿನ ತುಮರಿಯಲ್ಲಿ ಅಡಿಕೆ ಪರಿಷ್ಕರಣೆ ಮತ್ತು ಮಾರಾ ಟ ಸಹಕಾರ ಸಂಘದ ನೂತನ ಕಚೇರಿಯನ್ನು ಮಂಗಳವಾರ ಉದ್ಘಾಟಿಸಿ ಮಾತನಾಡಿದ ಅವ ರು, ತುಮರಿ ಭಾಗದಲ್ಲಿ ಸುಸಜ್ಜಿತ ಗೋದಾಮು ಮತ್ತು ಕಚೇರಿ ತೆರೆಯುವ ಮೂಲಕ ಈ ಭಾಗದ ಷೇರುದಾರ ಸದಸ್ಯರಿಗೆ ಅನುಕೂಲ ಕಲ್ಪಿಸಲಾಗಿದೆ ಎಂದು ಹೇಳಿದರು.
ಸಾಗರದಲ್ಲಿ ಆಪ್ಸ್‌ಕೋಸ್ ವತಿಯಿಂದ ತೆರೆಯಲಾಗಿರುವ ಕೃಷಿ ಮಳಿಗೆ ಉತ್ತಮ ವಹಿವಾಟು ನಡೆಸುತ್ತಿದ್ದು ಪ್ರತಿದಿನ ೨ ರಿಂದ ೩ ಲಕ್ಷ ರೂ. ಕೃಷಿ ಪರಿಕರಗಳು ಮಾರಾಟವಾಗುತ್ತಿದೆ. ಇದು ರೈತರಿಗೆ ಹೆಚ್ಚು ಅನುಕೂಲ ಕಲ್ಪಿಸಿದೆ. ಸಾಗರ ಮಾದರಿಯ ಲ್ಲಿಯೆ ತುಮರಿ, ನಿಟ್ಟೂರು, ಹೊಸನಗರ ಇನ್ನಿತರೆ ಭಾಗದಲ್ಲಿ ಸಹ ಸುಸಜ್ಜಿತ ಕೃಷಿ ಮಳಿಗೆಯನ್ನು ತೆರೆಯುವ ಉದ್ದೇಶ ಹೊಂದಲಾ ಗಿದೆ ಎಂದು ಹೇಳಿದರು.
ಆಪ್ಸ್‌ಕೋಸ್ ಷೇರುದಾರ ಸ್ನೇಹಿಯಾಗಿ ನಿರಂತರವಾಗಿ ಕೆಲಸ ಮಾಡಿಕೊಂಡು ಬರುತ್ತಿದ್ದು, ಈಗಾಗಲೆ ಹೊಸಹೊಸ ಯೋಜನೆ ಗಳನ್ನು ಜರಿಗೆ ತಂದಿದೆ. ಸಾಗರ ದಲ್ಲಿ ಸುಸಜ್ಜಿತ ನೂತನ ಕಚೇರಿ ತೆರೆಯಲಾಗಿದ್ದು, ಮಲ್ಟಿಪ್ಲೆಕ್ಸ್ ಮಾರಾಟ ಮಳಿಗೆ ತೆರೆಯಲು ಯೋಜನೆ ರೂಪಿಸಲಾಗಿದೆ. ಷೇರು ದಾರ ಸದಸ್ಯರು ಸಂಸ್ಥೆಯೊಂದಿಗೆ ವಹಿವಾಟು ನಡೆಸಿ ಬೆಳವಣಿಗೆಗೆ ಸಹಕಾರ ನೀಡಬೇಕು ಎಂದರು.
ಆಪ್ಸ್‌ಕೋಸ್ ನಿರ್ದೆಶಕರಾದ ರಮೇಶ್ ಎಂ.ಬಿ., ನಂದ ಕುಮಾರ್, ಓಂಕೇಶ್ ಹರತಾಳು, ಸುರೇಶ್ ಈಳಿ, ಭಾಸ್ಕರ ಖಂಡಿಕಾ, ಕಾರ್ಯದರ್ಶಿ ಲಂಬೋಧರ್ ಇನ್ನಿತರರು ಹಾಜರಿದ್ದರು.