ಟೋಲ್‌ನಲ್ಲಿ ವಿನಾಯಿತಿಗೆ ಆಗ್ರಹಿಸಿ ಬಂಜಾರ ವಿದ್ಯಾರ್ಥಿ ಸಂಘದಿಂದ ಮನವಿ…

9NMT2

ನ್ಯಾಮತಿ: ಶಿವಮೊಗ್ಗ, ಶಿಕಾರಿಪುರ, ಹಾನಗಲ್ ರಾಜ್ಯ ಹೆzರಿಯ ಶಿವಮೊಗ್ಗ ಗ್ರಾಮಾಂತರ ತಾಲೂಕಿನ ಕಪುರ ಸುತ್ತಕೋಟೆ ಮದ್ಯೆ ನಿರ್ಮಿಸಿರು ಟೋಲ್‌ಗೇಟಿನಲ್ಲಿ ನ್ಯಾಮತಿ ತಾಲೂಕಿ ಜನರಿಗೆ ಟೋಲ್ ವಿನಾಯಿತಿ ನೀಡುವಂತೆ ಒತ್ತಾಯಿಸಿ ನ್ಯಾಮತಿ ತಾಲೂಕು ಬಂಜಾರ ವಿದ್ಯಾರ್ಥಿ ಸಂಘದಿಂದ ತಾಲೂಕು ಕೆಆರ್‌ಡಿಸಿಎಲ್ ಕಾರ್ಯಪಾಲಕ ಇಂಜಿನಿಯರ್‌ಗೆ ಸಂಘಟನೆ ಅಧ್ಯಕ್ಷ ಮಂಜುನಾಯ್ಕ ನೇತತ್ವದಲ್ಲಿ ಮನವಿ ನೀಡಲಾಯಿತು.
ಈ ವೇಳೆ ಮಾತನಾಡಿದ ಅವರು, ನ್ಯಾಮತಿ ತಾಲೂಕಿನಾ ದ್ಯಂತ ಪ್ರತಿನಿತ್ಯ ಶಿವಮೊಗ್ಗ ನಗರಕ್ಕೆ ಆಸ್ಪತ್ರೆ, ಶಾಲೆ, ಕಾಲೇಜು, ತರಕಾರಿ ಮಾರಾಟಕ್ಕಾಗಿ ರೈತರು, ವ್ಯಾಪಾರಿಗಳು ಕೂಲಿ ಕಾರ್ಮಿಕರ ಹಾಗೂ ವಿದ್ಯಾರ್ಥಿಗಳ ನೂರಾರು ವಾಹನಗಳು ಸಂಚರುತ್ತವೆ ಇಂದಿನ ಪೆಟ್ರೋಲ್, ಡಿಸೆಲ್ ಸೇರಿದಂತೆ ವಾಹನ ಬಿಡಿ ಭಾಗ ನಿತ್ಯದ ದರಗಳು ಏರುಗತಿಯಲ್ಲಿವೆ ಇದರ ನಡುವೆ ಕೇವಲ ೩೦ ಕಿಮೀ ದೂರದ ಶಿವಮೊಗ್ಗ ನಗರಕ್ಕೆ ಹೋಗಿಬರಲು ಟೋಲ್ ಕಟ್ಟಲು ಜನರಿಗೆ ಹೊರೆಯಾಗುತ್ತಿದ್ದು, ತಾಲೂಕಿನ ಜನರಿಗೆ ಟೋಲ್ ವಿನಾಯಿತಿ ನೀಡುವಂತೆ ಮನವಿ ಮಾಡಿದರು. ಒಂದು ವೇಳೆ ವಿನಾಯಿತಿ ನೀಡದಿದ್ದಲ್ಲಿ ಮುಂದಿನ ದಿನಗಳಲ್ಲಿ ಟೋಲ್ ಬಳಿ ಹೋರಾಟ ಮಾಡುವುದಾಗಿ ಎಚ್ಚರಿಸಿzರೆ.
ಈ ಸಂದರ್ಭದಲ್ಲಿ ಸಂಘಟನೆಯ ಉಪಾಧ್ಯಕ್ಷ ಕಿರಣ್ ನಾಯ್ಕ, ಕಾರ್ಯದರ್ಶಿ ನಾಗರಾಜ್ ನಾಯ್ಕ, ಸವಳಂಗ ಗ್ರಾಪಂ ಸದಸ್ಯ ನಾಗರಾಜ್ ನಾಯ್ಕ, ರೇಣುಕಾನಾಯ್ಕ, ರಾಮನಾಯ್ಕ, ಗೋಕುಲ್, ಪ್ರದೀಪ, ಚೇತನ ಕುಮಾರ್ ಇನ್ನಿತರರಿದ್ದರು.